November 16, 2024

Newsnap Kannada

The World at your finger tips!

POLITICAL MINISTER

ಹಿಜಬ್ ಧರಿಸಿ ಬರಲು ಬಿಡಲ್ಲ: ನ್ಯಾಯಾಲಯದ ಆದೇಶ ಗೌರವಿಸಿ- ಸಚಿವ ಅಶ್ವತ್ಥ ನಾರಾಯಣ

Spread the love

ನ್ಯಾಯಾಲಯದ ಸೂಚನೆಯ ನಂತರವೂ ಹಿಜಬ್ ಧರಿಸಿ ಬರುವುದು ತಪ್ಪಾಗುತ್ತದೆ. ಯಾವುದೇ ಕಾರಣಕ್ಕೂ ಹಿಜಬ್ ಧರಿಸಿ ಬರಲು ಬಿಡಲ್ಲ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಚಾಮರಾಜನಗರದಲ್ಲಿ ತಿಳಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪದವಿ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಇಲ್ಲ. ಆದರೆ ಹಿಜಬ್ ಧರಿಸಿ ಶಾಲೆಗೆ ಬರಲು ಕಾನೂನಿನಲ್ಲಿ ಅವಕಾಶವಿಲ್ಲ. ಕಾನೂನು ಗೌರವಿಸುವುದನ್ನು ವಿದ್ಯಾರ್ಥಿಗಳು ಕಲಿತುಕೊಳ್ಳಬೇಕು‌.
ಎಂದು ಸಲಹೆ ನೀಡಿದರು.

ಹೈಕೋರ್ಟ್ ಸೂಚನೆಯ ನಡುವೆಯೂ ಹಿಜಬ್ ಧರಿಸಿ ಬರುವುದು ಸರಿಯಲ್ಲ.
ಕಾನೂನು ಉಲ್ಲಂಘಿಸುವವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಶಾಲಾ-ಕಾಲೇಜುಗಳಿಗೆ ಹೊರಗಿನ ಶಕ್ತಿಗಳು ಪ್ರವೇಶ ಮಾಡಬಾರದು. ಹೊರಗಿನವರು ಬಾರದಂತೆ ನೋಡಿಕೊಳ್ಳುವುದು ಪ್ರಾಂಶುಪಾಲರು ಹಾಗೂ ಅಧ್ಯಾಪಕರ ಜವಾಬ್ದಾರಿ. ಯಾರೂ ಯಾರನ್ನು ಟೀಕೆ, ಆರೋಪ ಮಾಡಿ ಗೊಂದಲ ನಿರ್ಮಾಣ ಮಾಡುವುದು ಬೇಡ. ನಾಳೆಯಿಂದ ಪದವಿ ಕಾಲೇಜುಗಳು ಪುನರಾರಂಭವಾಗಲಿವೆ ಎಂದು ಹೇಳಿದರು.

Copyright © All rights reserved Newsnap | Newsever by AF themes.
error: Content is protected !!