September 21, 2021

Newsnap Kannada

The World at your finger tips!

ಕೃಷಿ ತಂತ್ರಜ್ಞಾನದ ಮೂಲಕ ಅಧಿಕ ಇಳುವರಿ – ಹೊಸ ಅವಿಷ್ಕಾರದ ರೈತರ ಪಾಠಶಾಲೆ

Spread the love

ರೈತರು ಯಾವ ರೀತಿ ಕೃಷಿ ತಂತ್ರಜ್ಞಾನದ ಮೂಲಕ ಲಾಭದಾಯಕ ಬೆಳೆಗಳನ್ನು ಬೆಳೆಯಬೇಕು ಹಾಗೂ ರೈತರ ಮೂಲಕವೇ ಕೃಷಿ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ವಿಧಾನಗಳ ಬಗ್ಗೆ ರೈತರ ಪಾಠಶಾಲೆಯಲ್ಲಿ ವಿವರಿಸುವ ವಿಧಾನವನ್ನು ಆವಿಷ್ಕಾರ ಮಾಡಲಾಗಿದೆ.

ರೈತರ ಗುಂಪೊಂದು ಜೊತೆಯಲ್ಲಿ ಕುಳಿತು ಕಲಿಯುವ ಈ ವಿಧಾನ ಪರಿಣಾಮಕಾರಿಯಾಗಿದೆ.

ರೈತರಿಗೂ ಒಂದು ಪಾಠಶಾಲೆ ಅಗತ್ಯವಿದೆ. ರೈತರ ಅನುಭವಗಳೂ ಸಾಕಷ್ಟು ಪ್ರಯೋಜನ ಕಾರಿಯಾಗುತ್ತವೆ ಎನ್ನುವುದು ರೈತರ ಪಾಠಶಾಲೆ ಕಾಣಬಹುದಿತ್ತು.

ಹುನಗುಂದ ತಾಲೂಕಿನ ಚಿತವಾಡಗಿ ರಸ್ತೆಯ ವೀರಾಪೂರದಲ್ಲಿರುವ ರೈತ ನಿಂಗಪ್ಪ ರಾಮವಾಡಗಿ ಹೊಲದಲ್ಲಿ ಇಂತಹ ಒಂದು ಪ್ರಾಯೋಗಿಕ ಪಾಠಶಾಲೆ ಜರುಗಿತು.

ಕೆಬಿಜೆಎನ್‌ಎಲ್, ಕೃಷಿ ಇಲಾಖೆ, ಡಿಮ್ಯಾಕ್, ಅಮೃತ ರೈತ ಉತ್ಪಾದಕರ ಸಂಘ, ತೋಟಗಾರಿಕೆ ಇಲಾಖೆ, ಜೈನ ನೀರಾವರಿ ಜಂಟಿ ಆಯೋಗದಲ್ಲಿ ಈ ಹೊಸ ಪ್ರಯೋಗವನ್ನು ಮಾಡಲಾಯಿತು.

ಈ ರೈತರ ಪಾಠಶಾಲೆಯಲ್ಲಿ ಮೆಣಸಿನಕಾಯಿ ಬೆಳೆಯ ಸಂಪೂರ್ಣ ಬೇಸಾಯ ಕ್ರಮ ತಿಳಿಸಿಕೊಡಲಾಯಿತು.

ಮೆಣಸಿನಕಾಯಿ ಬೆಳೆಯು ವಾಣಿಜ್ಯ ಬೆಳೆಯಾಗಿದೆ. ಇದು ಮುಖ್ಯವಾಗಿ 180 ದಿನದಲ್ಲಿ ಬೆಳೆ ಬರುತ್ತದೆ. ಇಲ್ಲಿ ರೈತರ ಜೊತೆಯಲ್ಲಿ ಕೃಷಿ ಪದವಿಧರರು ಕೂಡ ಭಾಗವಹಿಸಿ ತಿಳಿವಳಿಕೆ ನೀಡಿದರು.

ಮುಖ್ಯವಾಗಿ ಈ ಪಾಠಶಾಲೆಯಲ್ಲಿ ತಂತ್ರಜ್ಞಾನದ ಮೂಲಕ ಹೇಗೆ ಅಧಿಕ ಇಳುವರಿ ಪಡೆಯಬಹುದು. ಇದರೊಂದಿಗೆ ಪ್ರತಿ ತಿಂಗಳಿಗೊಮ್ಮೆ ರೈತರ ಜಮಿನಿನಲ್ಲಿ ಬಂದು ವೈಜ್ಞಾನಿಕವಾಗಿ ರೈತರು ಬೇಸಾಯದ ಬಗ್ಗೆ ಕಲಿಯುವುದು ಈ ಪಾಠಶಾಲೆ ಮುಖ್ಯ ಉದ್ದೇಶವಾಗಿದೆ.

ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯ ಎಎಚ್‌ಒ ಅಧಿಕಾರಿ ಶಕುಂತಲಾ, ಕೃಷಿ ಅಧಿಕಾರಿ ಹರಿಪ್ರಸಾದ್ ಪುರೋಹಿತ್, ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆಯ ಸಂಗಮೇಶ್ ಸಜ್ಜನ್, ಜೈನ ನೀರಾವರಿಯ ಹಿರಿಯ ಸಲಹೆಗಾರಾರ ಪ್ರಬಾಕರ್, ಡಿಮ್ಯಾಕ್ ಸಂಸ್ಥೆಯ ಯೋಜನ ವ್ಯವಸ್ಥಾಪಕರಾದ ಸುರೇಶ್ ಷಣ್ಮುಗಂ, ದೋನಿ ( ವಿಸ್ತರಣಾ ಅಧಿಕಾರಿ), ಜೂನಿಯರ್ ಅಗ್ರೋನಮಿಸ್ಟ್ ಪರಶುರಾಮ್, ಆಕಾಶ್, ಯೋಜನಾ ಅಧಿಕಾರಿ ಮಾನಸ ಗೌಡ, ಡಾ. ವಿಕ್ಕಿ ( ಸಲಹೆಗಾರಾರ) ಕ್ಷೇತ್ರ ಸಂಯೋಜಕ ಬಸವನಗೌಡ ಗೌಡರ್, ಪಾಠ ಶಾಲೆಯಲ್ಲಿ ಒಟ್ಟು50 ಮಂದಿ ರೈತರು ಪಾಲ್ಗೊಂಡಿದ್ದರು.

error: Content is protected !!