October 7, 2022

Newsnap Kannada

The World at your finger tips!

actor,news,crime

High drama in front of hotel room- Pavitra Lokesh, attempt to attack Naresh with slippers ಹೋಟೆಲ್ ಕೊಠಡಿ ಮುಂದೆ ಹೈಡ್ರಾಮಾ- ಪವಿತ್ರ ಲೋಕೇಶ್, ನರೇಶ್ ಮೇಲೆ ಚಪ್ಪಲಿಯಿಂದ ಹಲ್ಲೆಗೆ ಯತ್ನ #thenewsnap #latestnews #sandalwood #NEWS #kannada_news #karnataka #Mysuru

ಹೋಟೆಲ್ ಕೊಠಡಿ ಮುಂದೆ ಹೈಡ್ರಾಮಾ- ಪವಿತ್ರ ಲೋಕೇಶ್, ನರೇಶ್ ಮೇಲೆ ಚಪ್ಪಲಿಯಿಂದ ಹಲ್ಲೆಗೆ ಯತ್ನ

Spread the love

ಟಾಲಿವುಡ್ ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ರಾತ್ರಿ ಇಡಿ ಒಂದೇ ಇದ್ದ ಹೋಟೆಲ್ ಮುಂದೆ ಭಾನುವಾರ ಬೆಳಿಗ್ಗೆ ರಮ್ಯಾ ರಘುಪತಿ ದೊಡ್ಡ ಹೈಡ್ರಾಮಾ ಮಾಡಿದ್ದಾರೆ.

ಮೈಸೂರಿನ ಹುಣಸೂರು ರಸ್ತೆಯ ಖಾಸಗಿ ಹೋಟೆಲ್ ಒಂದರಲ್ಲಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಒಂದೇ ರೂಮ್‌ನಲ್ಲಿದ್ದರು. ಹೀಗಾಗಿ ರೂಮ್ ಬಳಿಯೇ ಕಾದು ಕುಳಿತಿದ್ದ ರಮ್ಯಾ ರಘುಪತಿ, ಪತಿ ನರೇಶ್, ಪವಿತ್ರಾ ಹೊರ ಬರುತ್ತಿದ್ದಂತೆಯೇ ಚಪ್ಪಲಿಯಲ್ಲಿ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಕೂಡಲೇ ಪೊಲೀಸರು ರಮ್ಯಾ ರಘುಪತಿಯನ್ನು ತಡೆದಿದ್ದಾರೆ.ಮಾಜಿ ಸಚಿವೆ ಲಲಿತಾ ನಾಯಕ್‌ಗೆ ಕೊಲೆ ಬೆದರಿಕೆ – ಹಿಟ್ ಲಿಸ್ಟ್‌ನಲ್ಲಿ ಸಿದ್ದು, ಹೆಚ್‌ಡಿಕೆ

ನಂತರ ಪವಿತ್ರಾ ಲೋಕೇಶ್ ಹಾಗೂ ನರೇಶ್‍ಗೆ ಅವಾಚ್ಯ ಶಬ್ದಗಳಿಂದ ರಮ್ಯಾ ರಘುಪತಿ ನಿಂದಿಸಿದ್ದಾರೆ. ಈ ವೇಳೆ ನರೇಶ್ ಅವರು ನೀನೊಬ್ಬಳು ವಂಚಕಿ, ಮೋಸಗಾತಿ ಎಂದು ಜೋರಾಗಿ ಕಿರುಚಾಡುತ್ತಾ, ವಿಜಲ್‌ ಹೊಡೆಯುತ್ತಾ ಲಿಫ್ಟ್‌ ಮೂಲಕ ತೆರಳಿದರು.

ಈ ನಡುವೆ ಪವಿತ್ರಾ ಲೋಕೇಶ್ ವಿರುದ್ದ ಗುಂಪೊಂದು ಹೋಟೆಲ್ ನಲ್ಲಿ ಧಿಕ್ಕಾರ ಕೂಗಿ ಛೀಮಾರಿ ಹಾಕಿದೆ.

error: Content is protected !!