February 23, 2026

Newsnap Kannada

The World at your finger tips!

helicoptor

ಸಿದ್ದರಾಮಯ್ಯಗೆ ಹೆಲಿಕಾಪ್ಟರ್ ಕಾಟ: ಇಂದೂ ಸೇರಿ ನಾಲ್ಕು ಬಾರಿ ಕೈ ಕೊಟ್ಟ ಹೆಲಿಕ್ಯಾಪ್ಟರ್

Spread the love

ಸಿದ್ದರಾಮಯ್ಯರಿಗೆ ಪದೇ ಪದೆ ಹೆಲಿಕಾಪ್ಟರ್ ಕಾಟ ಕೊಡುತ್ತಿದೆ. ಇಂದೂ ಸೇರಿ ನಾಲ್ಕು ಬಾರಿ ಇದುವರೆಗೂ ಕೈ ಕೊಟ್ಟಿದೆ

ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಭಾನುವಾರ ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ ಅನ್ನು ತುರ್ತು ಭೂಸ್ಪರ್ಷ ಮಾಡಲಾಗಿದೆ.

ನಿಗದಿಯಂತೆ ಚಿತ್ರದುರ್ಗದಿಂದ ತುಮಕೂರಿಗೆ ಹೆಲಿಕಾಪ್ಟರ್​​ನಲ್ಲಿ ಸಿದ್ದರಾಮಯ್ಯ ಪ್ರಯಾಣ ಬೆಳೆಸಿದ್ದರು.

ಆದರೆ ಹವಾಮಾನ ವೈಪರೀತ್ಯದ ಕಾರಣದಿಂದಾಗಿ ಹಾರಿದ ಕೆಲ ಹೊತ್ತಿನಲ್ಲೇ ಮತ್ತೆ ಹೆಲಿಕಾಪ್ಟರ್​​​​ ಚಿತ್ರದುರ್ಗದ ಹೆಲಿಪ್ಯಾಡ್​ಗೆ ಮರಳಿ ಬಂದಿಳಿಯಿದಿದೆ.

ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​​ ಈ ಹಿಂದೆ ನಾಲ್ಕು ಬಾರಿ ಆತಂಕದ ಸ್ಥಿತಿಯನ್ನ ಎದುರಿಸಿದೆ. ಒಂದು ಬಾರಿ ಹೆಲಿಕಾಪ್ಟರ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಮೂಡಿಸಿದರೆ ಇನ್ನೊಂದು ಬಾರಿ ಅವರು ಹೆಲಿಕಾಪ್ಟರ್​​ಗೆ ಹದ್ದು ಡಿಕ್ಕಿ ಹೊಡೆದಿರುತ್ತೆ. ಮೂರನೇ ಬಾರಿ ಲ್ಯಾಂಡಿಂಗ್ ಗೇರ್ ಅಲ್ಲಿ ಸಮಸ್ಯೆಯಾದ ಕಾರಣ ಸುಮಾರು 30 ನಿಮಿಷಗಳಕಾಲ ಅವರ ಹೆಲಿಕಾಪ್ಟರ್ ಆಗಸದಲ್ಲೇ ಹಾರುತ್ತಾ ಆತಂಕ ತಂದಿಟ್ಟಿತು.

error: Content is protected !!