ಕೊಡಗಿನಲ್ಲಿ ಭಾರಿ ಮಳೆ : ನದಿ ಪಾತ್ರದ ಜನರಿಗೆ ಪ್ರವಾಹದ ಭೀತಿ

Team Newsnap
0 Min Read

ಕೊಡಗು

ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೊಡಗು ಸೇರಿದಂತೆ ಹಲವು ಪ್ರದೇಶಗಳು ಜಲಾವೃತವಾಗಿವೆ. ಕಳೆದ 24 ಗಂಟೆಗಳಲ್ಲಿ ಕೊಡಗಿನಲ್ಲಿ 140 ಮೀ. ಮೀ ಮಳೆ ಆಗಿದೆ. ಇದು ಇನ್ನು ಕೂಡ ಜಾಸ್ತಿಯಾಗುವ ಸಾಧ್ಯತೆ.

ಜಿಲ್ಲಾಡಳಿತ ಜಿಲ್ಲೆಗೆ ಆರೇಂಜ್ ಅಲರ್ಟ್ ಎಂದು ಘೋಷಣೆ ಮಾಡಿದ್ದೂ, ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. ರಭಸವಾಗಿ ಮಳೆ ಸುರಿಯುತ್ತಿರುವುದರಿಂದ ಭಾಗಮಂಡಲ ತ್ರಿವೇಣಿ ಸಂಗಮ ಮುಳುಗಡೆ ಸಾಧ್ಯತೆ ಇದೆ.

ಮಳೆಯ ರಭಸಕ್ಕೆ ದೊಡ್ಡ ದೊಡ್ಡ ಮರಗಳು ಕೊಚ್ಚಿ ಹೋಗುತ್ತಿವೆ. ವಾಹನ ಸವಾರರು ಮಳೆ ನೀರಲ್ಲೇ ಸಂಚರಿಸಲು ಹರಸಾಹಸ ಪಡುತ್ತಿದ್ದಾರೆ.

Share This Article
Leave a comment