October 15, 2024

Newsnap Kannada

The World at your finger tips!

rain , news , Madikeri

due to rain holiday declared for schools and colleges in kodagu ಕೊಡಗಿನಲ್ಲಿ ಮಳೆ ಅಬ್ಬರ : ಮಂಗಳವಾರವೂ ಶಾಲಾ - ಕಾಲೇಜುಗಳಿಗೆ ರಜೆ #kodagu

ಕೊಡಗಿನಲ್ಲಿ ವರುಣಾರ್ಭಟ

Spread the love
  • ಜಲಾಶಯಗಳಿಗೆ ಒಳ ಹರಿವಿನ ಹೆಚ್ಚಳ
  • ಕೊಡಗಿನಲ್ಲಿ ಇಂದೂ ಸಹ ಶಾಲಾ – ಕಾಲೇಜ್ ಗೆ ರಜೆ
  • ಭಾಗಮಂಡಲ- ಮಡಿಕೇರಿ- ವಿರಾಜಪೇಟೆ ಸಂಪರ್ಕ ಕಡಿ ತ

ಮಡಿಕೇರಿ : ಕೊಡಗು ಜಿಲ್ಲೆಯಾದ್ಯಂತ ಮುಂಗಾರು ಗುರುವಾರ ಬಿರುಸುಗೊಂಡಿದೆ. ಕಳೆದ 24 ಗಂಟೆಗಳಿಂದ ನಿರಂತರ ಮಳೆ ಬೀಳುತ್ತಿದ್ದು, ಕಾವೇರಿ ನದಿಯಲ್ಲಿಯೂ ನೀರಿನ ಮಟ್ಟ ಹೆಚ್ಚಾಗುತ್ತಿದೆ.

ಕೊಡಗು ಜಿಲ್ಲೆಯ ಬಹುತೇಕ ಕಡೆ ಧಾರಾಕಾರ ಮಳೆ ಮುಂದುವರೆದಿದೆ ಮಳೆ ಹಿನ್ನೆಲೆಯಲ್ಲಿ ನಾಳೆ ಶುಕ್ರವಾರ ಕೊಡಗು ಜಿಲ್ಲೆಯ ಅಂಗನವಾಡಿ ಶಾಲೆ ಮತ್ತು ಕಾಲೇಜುಗಳಿಗೆ ರಜೆ ನೀಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಭಾಗಮಂಡಲದಲ್ಲಿ ಕಾವೇರಿ ನದಿ ನೀರಿನ ಮಟ್ಟ ಹೆಚ್ಚುತಲೇ ಇದೆ. ತ್ರಿವೇಣಿ ಸಂಗಮ ಜಲಾವೃತವಾಗಿದೆ ಭಾಗಮಂಡಲ ಮತ್ತು ಮಡಿಕೇರಿ ಹಾಗೂ ಭಾಗಮಂಡಲ- ವಿರಾಜಪೇಟೆ ನಡುವಿನ ಸಂಪರ್ಕ ಕಡಿತಗೊಂಡಿದೆ.

ಜಿಲ್ಲೆಯ ಅಲ್ಲಲ್ಲಿ ಗಾಳಿಯಿಂದಾಗಿ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಕ್ಷಿಪ್ರಕಾಯ೯ಪಡೆ ಸಿಬ್ಬಂದಿಗಳು ಇವುಗಳನ್ನು ತೆರವುಗೊಳಿಸಿ ರಸ್ತೆ ಸಂಚಾರ ಸುಗಮಗೊಳಿಸುತ್ತಿದ್ದಾರೆ.

2859 ಅಡಿ ಗರಿಷ್ಟ ಸಂಗ್ರಹ ಸಾಮಥ್ಯ೯ದ ಹಾರಂಗಿ ಜಲಾಶಯದಲ್ಲಿ ಇಂದು 2827 ಅಡಿ ನೀರಿನ ಸಂಗ್ರಹವಿದೆ. 1557 ಕ್ಯೂಸೆಕ್ ನೀರಿನ ಒಳಹರಿವಿದೆ.

ಕಾವೇರಿ ನದಿ ಪಾತ್ರದಲ್ಲಿ ನೀರಿನ‌ ಹರಿವು ಹೆಚ್ಚಳವಾಗಿದ್ದು, ವಿರಾಜಪೇಟೆ ತಹಶಿಲ್ದಾರ್ ರಾಮಚಂದ್ರ, ನೋಡಲ್ ಅಧಿಕಾರಿ ರಾಹುಲ್ ಇತರರು ಇಂದು ಬೇತ್ರಿ ಬಳಿ ಹರಿಯುತ್ತಿರುವ ನೀರಿನ ಹರಿವು ಹೆಚ್ಚಳ ವೀಕ್ಷಿಸಿದರು.ಮೈಶುಗರ್ ಕಾರ್ಖಾನೆಯಲ್ಲಿ ಕಬ್ಬು ನುರಿಸುವ ಕಾರ್ಯ ಆರಂಭ

NH:275 ಸಂಪಾಜೆ ಯಿಂದ ಮಾದೇನಾಡು, – ರಾಷ್ಟ್ರೀಯ ಹೆದ್ದಾರಿ ಮದೆನಾಡು ಬಳಿ ರಸ್ತೆಯ ಗುಂಡಿ ಬಿದ್ದಿರುವುದನ್ನು ಸರಿಪಡಿಸುವುದು, ಹೆದ್ದಾರಿ ಬದಿ ನೀರು ಸರಾಗವಾಗಿ ಚರಂಡಿಯಲ್ಲಿ ಹರಿಯುವಂತೆ ಮಾಡುವುದು ಹೀಗೆ ಹಲವು ನಿರ್ವಹಣಾ ಕಾರ್ಯವನ್ನು ಹೆದ್ದಾರಿ ಎಂಜಿನಿಯರಿಂಗ್ ವಿಭಾಗ ವತಿಯಿಂದ ಕೈಗೊಳ್ಳಲಾಗಿದೆ ಎಂದು ಹೆದ್ದಾರಿ ವಿಭಾಗದ ಎಇಇ ನಾಗರಾಜು ಅವರು ತಿಳಿಸಿದ್ದಾರೆ.

WhatsApp Image 2023 07 06 at 8.26.49 PM 1
Copyright © All rights reserved Newsnap | Newsever by AF themes.
error: Content is protected !!