February 19, 2026

Newsnap Kannada

The World at your finger tips!

dam,rain,water

ಭಾರಿ ಮಳೆ: ಕೆಆರ್ ಎಸ್ ಡ್ಯಾಂನಿಂದ 10 ಸಾವಿರ ಕ್ಯೂಸೆಕ್ ನೀರುನದಿಗೆ

Spread the love

ಭಾರಿ ಮಳೆಯಿಂದ ಕೆಆರ್‌ ಎಸ್‌ ಡ್ಯಾಂ ಭರ್ತಿಯಾಗುವ ಹಂತ ತಲುಪಿದೆ ಈ ಹಿನ್ನೆಲೆಯಲ್ಲಿ ಕೆಆರ್ ಎಸ್ ಡ್ಯಾಂನಿಂದ ಕಾವೇರಿ ನದಿಗೆ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ

ನಾಳೆ ಬೆಳಿಗ್ಗೆ ವೇಳೆಗೆ ಒಳ ಹರಿವಿನಷ್ಟೇ ಹೊರ ಹರಿವು ಬಿಡಲು ಸಾಧ್ಯತೆ ಇದೆ.ಇದನ್ನು ಓದಿ –ನಟಿ ಪ್ರಿಯಾ ನಿತ್ಯಾನಂದನ ಜೊತೆ ಮದುವೆಯಾಗಲು ಬಯಸಿದ್ದಾರೆ??

ಮುಂಜಾಗೃತ ಕ್ರಮವಾಗಿ ಈಗ ನದಿಗೆ ನೀರು 10 ಸಾವಿರ ಕ್ಯೂಸೆಕ್ ಬಿಡುಗಡೆ ಮಾಡಲಾಗಿದೆ. ಈಗಾಗಲೇ 121.93 ಅಡಿ ಕೆಆರ್ ಎಸ್ ಡ್ಯಾಂ ಭರ್ತಿಯಾಗಿದೆ.

ಸಂಪೂರ್ಣ ಭರ್ತಿಗೆ ಕೇವಲ 3 ಅಡಿ ಮಾತ್ರ ಬಾಕಿ ಇತ್ತು . ಸದ್ಯ 33,168 ಕ್ಯೂಸೆಕ್ ನೀರು ಡ್ಯಾಂಗೆ ಹರಿದು ಬರುತ್ತಿದೆ.
ಹೀಗಾಗಿ ಕಾವೇರಿ ನದಿಗೆ ನೀರನ್ನು ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. ಹಂತ ಹಂತವಾಗಿ ಹೊರ ಹರಿವಿನ ಪ್ರಮಾಣ ಹೆಚ್ಚಿಸಲು ನಿರ್ಧಾರಿಸಿದ್ದಾರೆ.

K R S ನೀರಿನ ಮಟ್ಟ :

ಗರಿಷ್ಠ ಮಟ್ಟ -124.80 ಅಡಿ

ಇಂದಿನ ಮಟ್ಟ -122. 05 ಅಡಿ

ಒಳ ಹರಿವು- 31792 ಕ್ಯೂಸೆಕ್

ಹೊರ ಹರಿವು 13511 ಕ್ಯೂಸೆಕ್

error: Content is protected !!