July 7, 2022

Newsnap Kannada

The World at your finger tips!

rai mandya b

ಮಂಡ್ಯ ಮೈಸೂರು- ಬೆಂಗಳೂರಿನಲ್ಲಿ ಭಾರಿ ಮಳೆ – ಸಂಚಾರ ಅಸ್ತವ್ಯಸ್ಥ

Spread the love

ಮಂಡ್ಯ ಮೈಸೂರು ಮತ್ತು ಬೆಂಗಳೂರಿನಲ್ಲಿ ಗುರುವಾರ ರಾತ್ರಿ ಭಾರಿ ಮಳೆ ಸುರಿದಿದೆ,
ಮಂಡ್ಯದಲ್ಲಿ ಎರಡು ದಿನಗಳಿಂದ ಸಂಜೆ ವೇಳೆ ಮಳೆ ಸುರಿದು ತಂಪನೆರೆದಿದೆ.

ಬೆಂಗಳೂರಿನ ಹಲವೆಡೆ ಮಳೆ ಸುರಿದು ಬಿಸಿಲ ಬೇಗೆಗೆ ಮಳೆರಾಯ ತಂಪೆರೆದಿದ್ದಾನೆ.

ಬೆಂಗಳೂರಿನ ಟೌನ್ ಹಾಲ್, ಮೆಜೆಸ್ಟಿಕ್, ಮಾರ್ಕೆಟ್, ಚಾಮರಾಜಪೇಟೆ, ಬಸವನಗುಡಿ, ವಿಧಾನಸೌಧ, ಮಲ್ಲೇಶ್ವರಂ ಸೇರಿದಂತೆ ಹಲವೆಡೆ ಧಾರಾಕಾರ ಮಳೆ ಸುರಿದಿದೆ. ಬುಧವಾರವೂ ಸಂಜೆ ವೇಳೆ ಮಳೆರಾಯನ ಅಬ್ಬರ ಜೋರಾಗಿತ್ತು.

ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಗೆ ರಸ್ತೆಗಳೆಲ್ಲಾ ಕೆರೆಯಂತಾಗಿದೆ. ಮಳೆಯ ಅಬ್ಬರಕ್ಕೆ ಎಂಜಿ ರಸ್ತೆ ಹಾಗೂ ಅನೀಲ್ ಕುಂಬ್ಳೆ ರಸ್ತೆಗಳಲ್ಲಿ ಮೊಣಕಾಲುದ್ದಕ್ಕೂ ನೀರು ನಿಂತಿದೆ. ದಿಢೀರನೆ ಸುರಿದ ಮಳೆಗೆ ವಾಹನ ಸವಾರರು ಹೈರಾಣಾಗಿದ್ದಾರೆ.

error: Content is protected !!