ಮಂಡ್ಯದಲ್ಲಿ ಭಾರಿ ಮಳೆ : ಬೆಂಗಳೂರು- ಮೈಸೂರು ಸಂಚಾರ ಅಸ್ತವ್ಯಸ್ತ: ಬಂದ್ ಸಾಧ್ಯತೆ ?

Team Newsnap
1 Min Read

ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಮಂಡ್ಯ ಜಿಲ್ಲೆಯಲ್ಲಿ ಭಾರಿ ಅವಾಂತರ ಎದುರಾಗಿದೆ, ಮಂಡ್ಯ ಸಮೀಪ ಬೂದನೂರು ಕೆರೆ ಎರಡನೇ ಬಾರಿ ಒಡೆದು ನೀರಿನಿಂದ ನೂರಾರು ಎಕರೆ ಪೈರು ನಾಶವಾಗಿದೆ. ಪಾಂಡವಪುರ ತಾಲೂಕಿನ ಲಿಂಗಾಪುರ ಗ್ರಾಮದ ಕೆರೆ ಭರ್ತಿಯಾಗಿ ನೀರು ಗ್ರಾಮಕ್ಕೆ ನುಗ್ಗಿ ಅವಾಂತರ ಸೃಷ್ಠಿಸಿದೆ.

ಕೆರೆ ಒಡೆದು ನೀರು ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ನುಗ್ಗುವ ಸಾದ್ಯತೆ ಇದೆ. ಈಗಲೇ ಈ ರಸ್ತೆಯಲ್ಲಿ ಸಾಕಷ್ಟು ಅವಾಂತರ ಸೃಷ್ಠಿಯಾಗಿದೆ . ಬೆಳಿಗ್ಗೆ 10 ಗಂಟೆಯ ವೇಳೆಗೆ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬಂದು ಬೆಂಗಳೂರು – ಮೈಸೂರು ರಸ್ತೆ ಸಂಚಾರ ಬಂದ್ ಆಗುವ ಸಾಧ್ಯತೆ ಇದೆ.

male m1

ಮಂಡ್ಯ ತಾಲೂಕಿನ ಸಾತನೂರು, ಸಂತೆ ಕಸಲಗೆರೆ, ಭೂತನ ಹೊಸೂರು ಸೇರಿದಂತೆ ಅನೇಕ ಕೆರೆಗಳಿಗೆ ಭಾರಿ ಪ್ರಮಾಣ ನೀರು ಹರಿದು. ಬರುತ್ತದೆ. ಇದರಿಂದ ಕೊಡಿಯ ಮೂಲಕ ನೀರು ಹರಿದು ಬಂದು ಅವಾಂತರ ಸೃಷ್ಠಿ ಮಾಡಿದೆ. ಮಳವಳ್ಳಿಯಲ್ಲಿ ರೇಪ್ ಮಾಡಿ ಬಾಲಕಿಯನ್ನು ಹತ್ಯೆಗೈದ – ಕಾಮುಕ ಕಾಂತರಾಜು ಗಲ್ಲಿಗೆ ಆಗ್ರಹ

ರಾಜ್ಯದಲ್ಲಿ ಇನ್ನೂ 6 ದಿನ ಭಾರೀ ಮಳೆ

ಅರಬ್ಬಿ ಸಮುದ್ರ, ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿಗಳ ಪರಿಣಾಮ ರಾಜ್ಯದಲ್ಲಿ ಇನ್ನೂ 6 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳು ಹಾಗೂ ದಕ್ಷಿಣ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬೀದರ್​, ಕಲಬುರಗಿ, ವಿಜಯಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ರಾಮನಗರ, ಹಾಸನ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.

Share This Article
Leave a comment