February 27, 2026

Newsnap Kannada

The World at your finger tips!

girl

ತರಗತಿಗೆ ಮೊಬೈಲ್ ತಂದ ವಿದ್ಯಾಥಿ೯ನಿಯ ಬಟ್ಟೆ ಬಿಚ್ಚಿಸಿದ ಮುಖ್ಯ ಶಿಕ್ಷಕಿ – ಅಮಾನತ್ತಿಗೆ ಶಿಫಾರಸ್ಸು

Spread the love

ಮೊಬೈಲ್ ತಂದ ವಿದ್ಯಾರ್ಥಿನಿಗೆ ಬಟ್ಟೆ ಬಿಚ್ಚಿಸಿ ಕೊಠಡಿಯಲ್ಲಿ ಮುಖ್ಯ ಶಿಕ್ಷಕಿಯೊಬ್ಬರು ಕೂಡಿ ಹಾಕಿದ ಘಟನೆ ಶ್ರೀರಂಗಪಟ್ಟಣ ತಾಲೂಕು ಗಣಂಗೂರಿನಲ್ಲಿ ಜರುಗಿದೆ

ಗಣಂಗೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮುಖ್ಯಶಿಕ್ಷಕಿ ಸ್ನೇಹ ಲತಾ ಅಮಾನವೀಯ ಘಟನೆಯ ಬಗ್ಗೆ ಸಾವ೯ಜನಿಕ ವಲಯದಲ್ಲಿ ಅಕ್ರೋಷ ವ್ಯಕ್ತವಾಗಿದೆ . ಈ ಹಿನ್ನೆಲೆಯಲ್ಲಿ ಮುಖ್ಯ ಶಿಕ್ಷಕಿಯನ್ನು ಅಮಾನತ್ತು ಮಾಡಲು ಡಿಡಿಪಿಐ ಶಿಕ್ಷಣ ಇಲಾಖೆ ಆಯುಕ್ತರಿಗೆ ಶಿಫಾರಸ್ಸು ಮಾಡಿದ್ದರೆಂದು ಅಧೀಕೃತವಾಗಿ ಗೊತ್ತಾಗಿದೆ .

ಕಳೆದ ಒಂದು ಒಂದು ವಾರದ ಹಿಂದೆ ನಡೆದಿರುವ ಈ ಘಟನೆ ಘಟನೆ ತಡವಾಗಿ ಬೆಳಕಿಗೆ ಬಂದಿದೆ

ತರಗತಿಗೆ ಮೊಬೈಲ್ ತಂದಿರುವ ಕಾರಣಕ್ಕಾಗಿ ಎಂಟನೇ ತರಗತಿ ವಿದ್ಯಾರ್ಥಿನಿಯನ್ನು ಗಮನಿಸಿದ ಮುಖ್ಯ ಶಿಕ್ಷಕಿ ವಿದ್ಯಾರ್ಥಿನಿಯನ್ನು ಬೇರೆ ಕೊಠಡಿಗೆ ಕರೆದು ಕೊಂಡು ಹೋಗಿ ಆ ವಿದ್ಯಾಥಿ೯ನಿಯ ಬಟ್ಟೆ ಬಿಚ್ಚಿಸಿ ಕಿರುಕುಳ ನೀಡಿದ್ದಾರೆ

ಮುಖ್ಯ ಶಿಕ್ಷಕಿ ಸ್ನೇಹಲತಾ ವಿರುದ್ದ ದೂರು ನೀಡಲು ಪೋಷಕರು ಮುಂದಾಗಿದ್ದಾರೆ

ಬಾಲಕಿಯನ್ನು ಅಮಾನವೀಯವಾಗಿ ನಡೆಸಿಕೊಂಡಿರು ವ ಮುಖ್ಯಶಿಕ್ಷಕಿಯ ವಿರುದ್ದ ಕ್ರಮಕ್ಕೆ ಒತ್ತಾಯ.

error: Content is protected !!