February 18, 2026

Newsnap Kannada

The World at your finger tips!

police 1

ಕಾರುಗಳ ಮುಖಾಮುಖಿ ಡಿಕ್ಕಿ – ದಂಪತಿ, ಮೂವರ ಪುತ್ರಿಯರ ದುರಂತ ಸಾವು

Spread the love

ಆಲ್ಟೋ. ಕಾರ್ ನ. ಟೈರ್ ಸ್ಪೋಟ ಗೊಂಡು ಎದುರಿನಿಂದ ಬಂದ ಇನ್ನೋವಾ ಕಾರ್ ಗೆ ಢಿಕ್ಕಿ ಹೊಡೆದ ಪರಿಣಾಮ ದಂಪತಿ, ಮೂವರು ಮಕ್ಕಳೂ ಸೇರಿ ಐವರು ಸಾವನ್ನಪ್ಪಿದ ಘಟನೆ ಶನಿವಾರ ಚನ್ನಪಟ್ಟಣದ ಬಳಿ ಜರುಗಿದೆ

ಮೈಸೂರು – ಬೆಂಗಳೂರು ಎಕ್ಸ್ ಪ್ರೆಸ್ ಹೈವೇ ಯಲ್ಲಿ ಚನ್ನಪಟ್ಟಣದ ಲಂಬಾಣಿ ತಾಂಡ್ಯ ಬಳಿ ಸಂಭವಿಸಿದ ರಸ್ತೆ ದುರಂತದಲ್ಲಿ ತಂದೆ, ತಾಯಿಹಾಗೂ ಮೂವರು ಹೆಣ್ಣು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದರು.

ಬೆಂಗಳೂರಿನ ಕೆಂಗೇರಿ ನಿವಾಸಿ ರವಿ ಪೂಜಾರ್, ಲಕ್ಷ್ಮಿ ಪೂಜಾರ್ ಹಾಗೂ ಮೂವರು ಮಂದಿ ಅವರ ಹೆಣ್ಣು ಮಕ್ಕಳು ಸಾವನ್ನಪ್ಪಿದ್ದಾರೆ.

ಟೈರ್ ಸ್ಫೋಟಗೊಂಡ ಆಲ್ಟೋ ಕಾರ್ ಬೆಂಗಳೂರಿನಿಂದ ಮೈಸೂರಿಗೆ ಹಾಗೂ ಇನ್ನೋವಾ ಕಾರು ಮೈಸೂರಿನಿಂದ ಬೆಂಗಳೂರಿಗೆ ತೆರಳಿತ್ತು . ಈ ವೇಳೆ ಇನ್ನೊವಾ ಡಿವೈಡರ್ ಏರಿ ಎದುರಿನಿಂದ ಬರುತ್ತಿದ್ದ ಕಾರ್ ರಭಸವಾಗಿ ಢಿಕ್ಕಿ ಹೊಡೆದಿದ. ಇದನ್ನು ಓದಿ –ಕೊಡಗಿನಲ್ಲಿ ನಿವೃತ್ತ ಎಸ್ಪಿ ಪುತ್ರನಿಂದ ವರ್ತಕನ ಮೇಲೆ ಫೈರಿಂಗ್

ಚನ್ನಪಟ್ಟಣ ಸಂಚಾರಿ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

error: Content is protected !!