ಭಾರತೀಯನಿಗೆ ಒಲಿದ ಸಿಐಎಯ ಮೊದಲ ಮುಖ್ಯ ತಂತ್ರಜ್ಞಾನ ಅಧಿಕಾರಿ ಪಟ್ಟ

Team Newsnap
1 Min Read

ಭಾರತೀಯ ಮೂಲದ ನಂದ್ ಮುಲ್ಚಂದಾನಿ ಅವರನ್ನು ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ(ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ)ಯ ಮೊದಲ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.

ಏಜೆನ್ಸಿಯ ನಿರ್ದೇಶಕ ವಿಲಿಯಂ ಜೆ ಬರ್ನ್ಸ್ ಸಾಮಾಜಿಕ ಜಾಲತಾಣದಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ. 
ಮುಲ್ಚಂದಾನಿ ಸಿಲಿಕಾನ್ ವ್ಯಾಲಿ ಹಾಗೂ ರಕ್ಷಣಾ ಇಲಾಖೆಯಲ್ಲಿ 25 ವರ್ಷಕ್ಕೂ ಹೆಚ್ಚು ಅನುಭವವನ್ನು ಹೊಂದಿದ್ದಾರೆ. ಬರ್ನ್ಸ್ ಮುಲ್ಚಂದಾನಿ ಅವರನ್ನು ತಂತ್ರಜ್ಞಾನದೆಡೆ ಗಮನ ಹರಿಸುವಂತೆ ಕೇಳಿದ್ದು, ಇದೀಗ ಅವರು ತಂಡದ ಭಾಗವಾಗಿರುವುದು ನಮಗೆ ಸಂತಸ ತಂದಿದೆ ಎಂದು ಸಿಐಎ ಹೇಳಿಕೆಯಲ್ಲಿ ತಿಳಿಸಿದೆ.

ನಂದ್ ಮುಲ್ಚಂದಾನಿ ಬಗ್ಗೆ ಒಂದಷ್ಟು ಮಾಹಿತಿ :

ಮುಲ್ಚಂದಾನಿ ತಮ್ಮ ಶಾಲಾ ಶಿಕ್ಷಣವನ್ನು ದೆಹಲಿಯ ಬ್ಲೂಬೆಲ್ಸ್ ಸ್ಕೂಲ್ ಇಂಟರ್‌ನ್ಯಾಶನಲ್‌ನಲ್ಲಿ ಪೂರೈಸಿದರು.

ಮುಲ್ಚಂದಾನಿ ಸ್ಟ್ಯಾನ್‌ಫೋರ್ಡ್ನಲ್ಲಿ ಮ್ಯಾನೇಜ್ಮೆಂಟ್‌ನಲ್ಲಿ ಮಾಸ್ಟರ್ ಆಫ್ ಸೈನ್ಸ್ ಪದವಿ ಪಡೆದಿದ್ದಾರೆ. ಬಳಿಕ ಕಂಪ್ಯೂಟರ್ ಸೈನ್ಸ್ ಹಾಗೂ ಗಣಿತಶಾಸ್ತ್ರದಲ್ಲಿ ಪದವಿಯನ್ನು ಪಡೆದಿದ್ದು, ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 

ಸಿಐಎಗಾಗಿ ಕೆಲಸ ಮಾಡುವುದಕ್ಕೂ ಮೊದಲು ಕೃತಕ ಬುದ್ಧಿಮತ್ತೆ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.

Share This Article
Leave a comment