ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಜೆಡಿಎಸ್ ನ ಹಾಲಿ ಶಾಸಕ ಶ್ರೀನಿವಾಸ್ ಗೆ ಶಾಕ್ ನೀಡಿದ್ದಾರೆ. ಸಿ ಎನ್ ಪುರ ಉದ್ಯಮಿ ನಾಗರಾಜ್ ಗೆ ಟಿಕೆಟ್ ನೀಡುವುದಾಗಿ ಭರವಸೆ ಕೊಡುವ ಮೂಲಕ ಜೆಡಿಎಸ್ ಶಾಸಕನಿಗೆ ಹೆಚ್ಡಿಕೆ ಶಾಕ್ ನೀಡಿದ್ದಾರೆ.
ತೆರೆಮರೆಯಲ್ಲಿ ಕಾಂಗ್ರೆಸ್ ಮುಖಂಡರನ್ನು ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್ ಭೇಟಿ ಮಾಡಿ, ಚುನಾವಣೆ ಸಮೀಪದಲ್ಲಿ ‘ಕೈ’ ಹಿಡಿಯಲು ಸ್ಕೆಚ್ ಹಾಕಿದ್ದರು.
ಶಾಸಕನ ನಡೆಯ ಮರ್ಮ ಅರಿತ ಕುಮಾರಸ್ವಾಮಿ, ಪ್ರತಿತಂತ್ರ ಹೂಡುತ್ತಿದ್ದಾರೆ. ಗುಬ್ಬಿ ಕ್ಷೇತ್ರದಲ್ಲೇ ಕುಮಾರಸ್ವಾಮಿ ಹೊಸ ಅಭ್ಯರ್ಥಿ ಹುಟ್ಟು ಹಾಕಿದ್ದಾರೆ.
ಸಿ.ಎಸ್.ಪುರ ಮೂಲದ ಉದ್ಯಮಿಗೆ ಮುಂದಿನ ಟಿಕೆಟ್ ನೀಡುವ ಭರವಸೆ ಕೊಟ್ಟಿದ್ದಾರೆ. ಉದ್ಯಮಿ ನಾಗರಾಜು ಎಂಬವರಿಗೆ ಜೆಡಿಎಸ್ ಟಿಕೆಟ್ ನೀಡಲು ತಂತ್ರ ರೂಪಿಸಿದ್ದಾರೆ. ಈ ಮೂಲಕ ಕುಮಾರಸ್ವಾಮಿ ಗುಬ್ಬಿಯಲ್ಲೇ ಹೊಸ ಅಭ್ಯರ್ಥಿ ಸೃಷ್ಟಿಸಿದ್ದಾರೆ. ಸಿ.ಎಸ್.ಪುರ ನಿವಾಸಿ ನಾಗರಾಜು ಜೆಡಿಎಸ್ ಸೇರ್ಪಡೆಗೆ ವೇದಿಕೆ ಸಿದ್ಧತೆ ನಡೆಸಲಾಗಿದೆ.
ಎಲ್ಲಾ ಕ್ಷೇತ್ರದಲ್ಲಿ ಇಬ್ಬಿಬ್ಬರನ್ನು ಇಟ್ಟಿರ್ತಾರೆ ಗೌಡರ ಕುಟುಂಬ ! :
ಇತ್ತ ಕುಮಾರಸ್ವಾಮಿ ತಂತ್ರಕ್ಕೆ ಗುಬ್ಬಿ ತಾಲೂಕಿನ ನಿಟ್ಟೂರಿನಲ್ಲಿ ಶಾಸಕ ಎಸ್.ಆರ್ ಶ್ರೀನಿವಾಸ್ ಆಕ್ರೋಶ ಹೊರಹಾಕಿದ್ದಾರೆ.
ಎಲ್ಲಾ ಕ್ಷೇತ್ರದಲ್ಲಿ ಇಬ್ಬಿಬ್ಬರನ್ನು ಇಟ್ಟಿರ್ತಾರೆ, ಅದು ನಮ್ಮನಾಯಕರ ಗುಣ. ಗುಬ್ಬಿಯಲ್ಲಿ ಬೇರೆಯವರನ್ನು ಕರೆದುಕೊಂಡು ಬಂದು ಪರಿಚಯ ಮಾಡ್ತಿದ್ದಾರೆ. ಇರೋರ ಮೇಲೆ ಇನ್ನೊಬ್ಬರನ್ನ ಎತ್ತಿಕಟ್ಟೋದು ಪಕ್ಷದ ನಿರಂತರವಾದ ನಡವಳಿಕೆ ಎಂದು ಶಾಸಕ ಶ್ರೀನಿವಾಸ್ ಹೇಳಿದರು.
ಈ ಭಾಗದಲ್ಲಿ ಯಾರು ಸಿಕ್ಕಿರಲಿಲ್ಲ ಇಷ್ಟು ದಿನ ಇರಲಿಲ್ಲ, ಈವಾಗ ಸಿಕ್ಕವ್ರೆ ಅದಕ್ಕೆ ಎತ್ಕಟ್ಟಿದ್ದಾರೆ. ನನಗೆ ಕುಮಾರಸ್ವಾಮಿ ಮೇಲೆ ಯಾವುದೇ ಮುನಿಸಿಲ್ಲ, ಅವರೇ ಕ್ರಿಯೆಟ್ ಮಾಡ್ತಿದ್ದಾರೆ. ಮೊನ್ನೆ ತಾನೇ ನಾನು ದೇವೇಗೌಡರನ್ನು ಭೇಟಿ ಮಾಡಿ ಪಕ್ಷದ ಕಾರ್ಯಕ್ರಮಕ್ಕೆ ಹಾಜರಾಗಿದ್ದೇನೆ. ನಾನು ಎಲ್ಲಿಯೂ ಪಕ್ಷ ಬಿಡ್ತೀನಿ ಅಂತ ಹೇಳಿಲ್ಲ. ಅದಾದ್ಮೇಲೂ ಇನ್ನೊಬ್ಬರನ್ನು ಹಾಕೋದಾದ್ರೆ ಸಂತೋಷ ಎಂದು ಶ್ರೀನಿವಾಸ್ ಅಸಮಾಧಾನ ಹೊರಹಾಕಿದ್ದಾರೆ.
- ಮುಡಾ ಹಗರಣಕ್ಕೆ ಬಿಗ್ ಟ್ವಿಸ್ಟ್: ಸರ್ಚ್ ವಾರೆಂಟ್ ಮುನ್ನವೇ ಕಡತಗಳ ಸ್ಥಳಾಂತರ ಮಾಡಿದ ಲೋಕಾಯುಕ್ತ ಡಿವೈಎಸ್ಪಿ!
- ಮುಡಾ ಹಗರಣ: ಲೋಕಾಯುಕ್ತ ಸಂಸ್ಥೆಯೇ ಅಪರಾಧಿ ಸ್ಥಾನದಲ್ಲಿದೆ- ಸ್ನೇಹಮಯಿ ಕೃಷ್ಣ ಆರೋಪ
- ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ: `ವಕ್ಫ್ ತಿದ್ದುಪಡಿ’ ಸೇರಿ 16 ಮಸೂದೆ ಮಂಡಿಸಲು ಸರ್ಕಾರ ಸಜ್ಜು!
- ಕರ್ನಾಟಕ ಸೇರಿದಂತೆ 14 ರಾಜ್ಯಗಳಲ್ಲಿ 2 ದಿನ ಭಾರೀ ಮಳೆಯ ಮುನ್ಸೂಚನೆ
- ನಂಬುಗೆಯೇ ಇಂಬು
More Stories
ಮುಡಾ ಹಗರಣಕ್ಕೆ ಬಿಗ್ ಟ್ವಿಸ್ಟ್: ಸರ್ಚ್ ವಾರೆಂಟ್ ಮುನ್ನವೇ ಕಡತಗಳ ಸ್ಥಳಾಂತರ ಮಾಡಿದ ಲೋಕಾಯುಕ್ತ ಡಿವೈಎಸ್ಪಿ!
ಮುಡಾ ಹಗರಣ: ಲೋಕಾಯುಕ್ತ ಸಂಸ್ಥೆಯೇ ಅಪರಾಧಿ ಸ್ಥಾನದಲ್ಲಿದೆ- ಸ್ನೇಹಮಯಿ ಕೃಷ್ಣ ಆರೋಪ
ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ: `ವಕ್ಫ್ ತಿದ್ದುಪಡಿ’ ಸೇರಿ 16 ಮಸೂದೆ ಮಂಡಿಸಲು ಸರ್ಕಾರ ಸಜ್ಜು!