April 28, 2025

Newsnap Kannada

The World at your finger tips!

political

ಪ್ರವೀಣ್ ಪೋಷಕರಿಗೆ ಹೆಚ್​ಡಿಕೆ ಸಾಂತ್ವನ: 5 ಲಕ್ಷರು ನೆರವು,ಮಸೂದ್ ಕುಟುಂಬಕ್ಕೂ 5 ಲಕ್ಷರು

Spread the love

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಬೆಳ್ಳಾರೆ ಗ್ರಾಮದಲ್ಲಿ ಹತ್ಯೆಯಾದ ಬಿಜೆಪಿ ಯುವಮೋರ್ಚಾ ಘಟಕದ ಮುಖಂಡ ಪ್ರವೀಣ್ ನೆಟ್ಟಾರು  ನಿವಾಸಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹಾಗೂ ಜೆ.ಡಿ.ಎಸ್ ಮುಖಂಡರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಪತಿಯನ್ನು ಕಳೆದುಕೊಂಡ ಪ್ರವೀಣ್​ ಅವರ ಧರ್ಮಪತ್ನಿ, ಮಗನನ್ನು ಕಳೆದುಕೊಂಡ ತಂದೆ, ತಾಯಿ ಮತ್ತು ಇಡೀ ಕುಟುಂಬದ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಆ ಕುಟುಂಬಕ್ಕೆ ಪಕ್ಷದಿಂದ 5 ಲಕ್ಷ ರೂಪಾಯಿ ನೆರವು ನೀಡಿದ್ದೇವೆ. ಎಂದು ಟ್ವೀಟ್​ ಮಾಡಿದ್ದಾರೆ. ಇದನ್ನು ಓದಿ – ಶಾಲಾ ಪಠ್ಯದ ಭಾಗವಾಗಿರಲಿದೆ ಚಿನ್ನಿದಾಂಡು, ಕುಂಟೆಬಿಲ್ಲೆ

ಜೊತೆಗೆ ಪ್ರವೀಣ್​ನನ್ನು ಹತ್ಯೆ ಮಾಡಿದ ಹಂತಕರಿಗೆ ಶಿಕ್ಷೆ ಆಗಲೇಬೇಕು. ರಾಜ್ಯ ಬಿಜೆಪಿ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಇದೇ ವೇಳೆ ಕುಮಾರಸ್ವಾಮಿ ಅವರಿಗೆ ಪಕ್ಷದ ರಾಜ್ಯಾಧ್ಯಕ್ಷರಾದ ಸಿ.ಎಂ ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯರಾದ ಬಿ.ಎಂ.ಫಾರೂಕ್, ಭೋಜೆಗೌಡ ಸೇರಿದಂತೆ ಹಲವು ಮುಖಂಡರು ಸಾಥ್ ನೀಡಿದರು.

ಮಸೂದ್ ಕುಟುಂಬಕ್ಕೂ 5 ಲಕ್ಷರು

ಈ ನಡುವೆ ಬೆಳ್ಳಾರೆಯ ಮಸೂದ್ ಕುಟುಂಬವನ್ನು ಬೇಟಿ ಮಾಡಿ ಸಾಂತ್ವನ ಹೇಳಿ ಆ ಕುಟುಂಬಕ್ಕೂ 5 ಲಕ್ಷ ರು ಗಳ ನೆರವು ನೀಡಿದರು.

Copyright © All rights reserved Newsnap | Newsever by AF themes.
error: Content is protected !!