January 9, 2025

Newsnap Kannada

The World at your finger tips!

kumarswamy1

ಸರ್ಕಾರಕ್ಕೆ ಹಣ ಮಾಡೋದೇ ದಂಧೆ ಆಗಿದೆ -ತೈಲ, ವಿದ್ಯುತ್ ಬೆಲೆ ಏರಿಕೆಗೆ HDK ವಾಗ್ದಾಳಿ

Spread the love

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿರುವ ತೈಲ ಹಾಗೂ ಇಂಧನ ಬೆಲೆ ಕುರಿತು ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತಂತೆ ಟ್ವೀಟ್​ ಮಾಡಿರುವ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಬಿಜೆಪಿ ಬೆಲೆ ಏರಿಕೆಯ ಮಾರಣಕಾಂಡ ಮುಂದುವರೆದಿದೆ, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಏರಿಕೆಯ ಜತೆ ಜತೆಗೇ, ಈಗ ಕರೆಂಟ್ ಶಾಕ್ ಕೊಟ್ಟಿದೆ ಅಂತಾ ಹೆಚ್​ಡಿಕೆ ಕಿಡಿಕಾರಿದ್ದಾರೆ.


ಆತ್ಮಸಾಕ್ಷಿ ಇಲ್ಲದ ಸರ್ಕಾರಕ್ಕೆ ಹಣ ಮಾಡುವುದೇ ದಂಧೆಯಾಗಿದೆ ಎಂದಿದ್ದಾರೆ, ಲೋಡ್​ ಶೆಡ್ಡಿಂಗ್​ ಬಗ್ಗೆಯೂ ಕಿಡಿಕಾರಿದ್ದಾರೆ. ಎಲ್ಲದರ ದರ ಹೆಚ್ಚಿಸುವ ಮೂಲಕ ಸರ್ಕಾರ ಬಡವರ ವಿರುದ್ಧ ಸಮರ ಸಾರಿದೆಯಾ ಅನ್ನುವ ಪ್ರಶ್ನೆ ಕಾಡ್ತಿದೆ ಎಂದಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!