HD ರೇವಣ್ಣನ ಮೇಲೂ ಅನರ್ಹತೆ ತೂಗುಗತ್ತಿ ? ವಿಧಾನಸಭಾ ಕಾರ್ಯದರ್ಶಿ ಮೂಲಕ ಸಮನ್ಸ್ ಜಾರಿ

Team Newsnap
1 Min Read
Let Maritibbegowda resign from MLC seat and win in Congress

ಬೆಂಗಳೂರು: ಚುನಾವಣೆ ವೇಳೆ ಅಕ್ರಮ ಎಸಗಿರುವ ಆರೋಪದ ಮೇಲೆ ಹೊಳೆನರಸೀಪುರ ಕ್ಷೇತ್ರದ ಹೆಚ್ ಡಿ ರೇವಣ್ಣ ಶಾಸಕರಾಗಿ ಆಯ್ಕೆಯಾಗಿರುವುದನ್ನು ಅಸಿಂಧುಗೊಳಿಸುವಂತೆ ಕೋರಿರುವ ಅರ್ಜಿ ಸಂಬಂಧ, ವಿಧಾನಸಭೆ ಕಾರ್ಯದರ್ಶಿ ಮೂಲಕ ರೇವಣ್ಣ ಅವರಿಗೆ ಸಮನ್ಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.

ಈಗಾಗಲೇ ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅನರ್ಹದ ಬಳಿಕ, ಈಗ ಹೆಚ್ ಡಿ ರೇವಣ್ಣ ಮೇಲೂ ಅನರ್ಹತೆ ತೂಗುಗತ್ತಿ ನೇತಾಡುವಂತೆ ಆಗಿದೆ.

ಹೆಚ್.ಡಿ ರೇವಣ್ಣ ವಿರುದ್ಧ ಸ್ಪರ್ಧಿಸಿ ಸೋಲು ಕಂಡಿದ್ದ ದೇವರಾಜೇಗೌಡ ಸಲ್ಲಿಸಿದ್ದಂತ ಚುನಾವಣಾ ತಕರಾರು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರ ನ್ಯಾಯಪೀಠವು ನಡೆಸಿತು.

ಈ ಪ್ರಕರಣದಲ್ಲಿ ಹೆಚ್ ಡಿ ರೇವಣ್ಣ ಅವರಿಗೆ ಸಮನ್ಸ್ ಮರು ಜಾರಿಗೆ ಆದೇಶಿಸಲಾಗಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಅರ್ಜಿ ಸಂಬಂಧ ಈ ಹಿಂದೆ ಹೈಕೋರ್ಟ್ ಜಾರಿಗೊಳಿಸಿರುವ ಸಮನ್ಸ್ ಅನ್ನು ಹೆಚ್ ಡಿ ರೇವಣ್ಣ ಸ್ವೀಕರಿಸಿರಲಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.ರಾಜ್ಯದಲ್ಲಿ 35 IPS ಅಧಿಕಾರಿಗಳ ವರ್ಗಾವಣೆ ಆದೇಶ

ಈ ಸಂಗತಿ ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠವು, ವಿಧಾನಸಭೆ ಕಾರ್ಯದರ್ಶಿಗಳ ಮೂಲಕ ಮತ್ತೊಂದು ಬಾರಿ ಸಮನ್ಸ್ ಜಾರಿಗೊಳಿಸಲು ನಿರ್ದೇಶಿಸಿ, ವಿಚಾರಣೆಯನ್ನು ಸೆಪ್ಟೆಂಬರ್.25ಕ್ಕೆ ಮುಂದೂಡಿದೆ.

Share This Article
Leave a comment