ಚುನಾವಣೆ ಎದುರಿಸುವಲ್ಲಿ ಪಿಎಚ್ ಡಿ ಮಾಡಿರುವೆ – 25 ಸಾವಿರ ಮತಗಳ ಅಂತರದ ಗೆಲುವು : ಸಿ ಎಸ್ ಪುಟ್ಟರಾಜು

Team Newsnap
1 Min Read
Have done PhD in contesting election - Will win by margin of 25 thousand votes : CS Puttaraju ಚುನಾವಣೆ ಎದುರಿಸುವಲ್ಲಿ ಪಿಎಚ್ ಡಿ ಮಾಡಿರುವೆ - 25 ಸಾವಿರ ಮತಗಳ ಅಂತರದ ಗೆಲುವು : ಸಿ ಎಸ್ ಪುಟ್ಟರಾಜು

ಮಂಡ್ಯ : ನಾನು ಚುನಾವಣೆ ಮಾಡುವುದರಲ್ಲಿ ಪಿಹೆಚ್‍ಡಿ ಮಾಡಿಬಿಟ್ಟಿದ್ದೇನೆ. ರಾಜಕಾರಣದಲ್ಲಿ 40 ವರ್ಷ ಅನುಭವದ ಜೊತೆಗೆ ರಾಜಕಾರಣದ ಪಿಹೆಚ್‍ಡಿಯೂ ಕೂಡ ನಂಗೆ ಆಗಿದೆ ಎಂದು ಹೇಳುವುದರ ಮೂಲಕ 25 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಮೇಲುಕೋಟೆ ಜೆ ಡಿಎಸ್ ಅಭ್ಯರ್ಥಿ ಸಿಎಸ್ ಪುಟ್ಟರಾಜು ಹೇಳಿದರು.

ಮಂಡ್ಯದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಪುಟ್ಟರಾಜು ನಮ್ಮ ದೇಶದಲ್ಲಿ ಒಂದೇ ಅವಧಿಯಲ್ಲಿ ಒಬ್ಬ ಎರಡು ಅಸೆಂಬ್ಲಿ, ಎರಡು ಎಂಪಿ ಚುನಾವಣೆ ಮಾಡಿರೋದು ಇದ್ದರೆ ಅದು ನಾನು ಒಬ್ಬನೇ ಎಂದರು.

ನಾನು ಚುನಾವಣೆ ಮಾಡೋದರಲ್ಲಿ ಪಿಹೆಚ್‍ಡಿ ಮಾಡಿಬಿಟ್ಟಿದ್ದೇನೆ. ರಾಜಕಾರಣದಲ್ಲಿ 40 ವರ್ಷ ಅನುಭವ ಇದೆ ಎಂದರು.

ರೈತ ಸಂಘಕ್ಕೆ ಸೋಲಿನ ಭಯ ಇದೆ. ನಾನು ಸೋಲು-ಗೆಲುವು ನೋಡಿರುವವನು, ನನಗೆ ಭಯನೇ ಇಲ್ಲ. ಈ ಚುನಾವಣೆಯಲ್ಲಿ ನಾನು ಮಾಡಿರುವ ಅಭಿವೃದ್ಧಿ ಕೆಲಸಕ್ಕೆ ಅತ್ಯಂತ ಬಹುಮತದಲ್ಲಿ ನನ್ನನ್ನು ಗೆಲುವು ತಂದುಕೊಡುತ್ತೆ.

ಈಗಾಗಲೇ ತೀರ್ಮಾನವಾಗಿ ಬೂತ್ ನಲ್ಲಿದೆ ಎಂದು ಹೇಳಿದರು. ನನಗೆ ಸೋಲಿನ ಹತಾಶೆನೇ ಇಲ್ಲ. ಒಂದು ಅವಧಿಯಲ್ಲಿ ಎರಡು ಸಲ ಸೋತಿದ್ದೀನಿ, ಎರಡು ಸಲ ಗೆದ್ದಿದ್ದೀನಿ. ಈ ದೇಶದಲ್ಲಿ ಯಾವನಾರು ಒಬ್ಬ ಎರಡು ಅಸೆಂಬ್ಲಿ ಚುನಾವಣೆ, ಎರಡು ಎಂಪಿ ಚುನಾವಣೆ ಮಾಡಿರೋ ಗಂಡು ಯಾರಾದ್ರು ಇದ್ರೆ ಪುಟ್ಟರಾಜು ಒಬ್ಬನೇ. ಅದರ ಭಯನೇ ಇಲ್ಲ.ಮತ್ತೆ ಉದ್ಧವ್‌ ಠಾಕ್ರೆ ಸರ್ಕಾರ ಮರು ಸ್ಥಾಪನೆ ಸಾಧ್ಯವಿಲ್ಲ – ಸುಪ್ರಿಂ : ಶಿಂಧೆ ಬಣಕ್ಕೆ ರಿಲೀಫ್

ನೂರಕ್ಕೆ ನೂರರಷ್ಟು ಈ ಬಾರಿ ಗೆಲ್ತೇನೆ. ಕನಿಷ್ಟ 25 ಸಾವಿರ ಲೀಡ್ ನಲ್ಲಿ ಗೆಲ್ಲುವೆ ಎಂದು ಆತ್ಮ ವಿಶ್ವಾಸದಿಂದ ಹೇಳಿದರು.

Share This Article
Leave a comment