January 28, 2026

Newsnap Kannada

The World at your finger tips!

849894 harassment

ಹತ್ರಾಸ್ ಗ್ಯಾಂಗ್ ರೇಪ್, ಮೃತ ಯುವತಿಯ ಪೋಸ್ಟ್ ಮಾರ್ಟಂ ರಿಪೋರ್ಟ್ ಬಹಿರಂಗ

Spread the love

ಸೆಪ್ಟೆಂಬರ್ 14 ರಂದು ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದ ಯುವತಿಯ ಪೋಸ್ಟ್ ಮಾರ್ಟಂ ರಿಪೋರ್ಟ್ ಬಹಿರಂಗಗೊಂಡಿದೆ.

ಸಫ್ದರ್ ಗಂಜ್ ಆಸ್ಪತ್ರೆ ಬಿಡುಗಡೆ ಮಾಡಿರುವ ಈ ವರದಿಯಲ್ಲಿ ಅನೇಕ ಬಾರಿ ಯುವತಿಯ ಕತ್ತು ಹಿಸುಕಲಾಗಿದೆ ಮತ್ತು ಸಂತ್ರಸ್ತೆ ತನ್ನ ಪ್ರಾಣ ಉಳಿಸಿಕೊಳ್ಳಲು ಯತ್ನಿಸಿದ್ದರಿಂದ ಕುತ್ತಿಗೆಯ ಮೂಳೆ ತುಂಡಾಗಿದೆ ಎಂದು ಉಲ್ಲೇಖಿಸಲಾಗಿದೆ.

ಮೃತ ಯುವತಿಯ ಫಾರೆನ್ಸಿಲ್ ಸ್ಯಾಂಪಲ್ ಗಳನ್ನು ಆಗ್ರಾದ ಲ್ಯಾಬ್ ಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಯುವತಿಯ ಮೇಲೆ ಅತ್ಯಾಚಾರ ನಡೆದಿತ್ತೋ ಇಲ್ಲವೋ ಎಂಬುದು ತಿಳಿದು ಬರಲಿದೆ.

ದೇಶವನ್ನೇ ದಿಗ್ಭ್ರಮೆಗೊಳಿಸಿದ್ದ ಈ ಅತ್ಯಾಚಾರದ ಪ್ರಕರಣದ ಸಂತ್ರಸ್ತೆಯು ಸೆಪ್ಟೆಂಬರ್ 29 ರಂದು ಚಿಕಿತ್ಸೆ ಫಲಿಸದೆ ಸಫ್ದರ್ ಗಂಜ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳದಿದ್ದರು.

error: Content is protected !!