ಮಸೀದಿ ಧ್ವಂಸ ಪ್ರಕರಣದ ತೀರ್ಪಿನ ವಿರುದ್ಧ ಮೇಲ್ಮನವಿ ಸಾಧ್ಯತೆ

Team Newsnap
0 Min Read

ಕಳೆದ 28 ವರ್ಷಗಳಿಂದ ನಿರಂತರ ವಿಚಾರಣೆ ನಡೆದ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪುನಲ್ಲಿ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿರುವುದು ಮುಸ್ಲಿಂ ಮುಖಂಡರಲ್ಲಿ ಅಸಮಾಧಾನ ತಂದಿದೆ. ಈ ಕಾರಣಕ್ಕಾಗಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಕಾನೂನು ತಜ್ಞ ರ ಸಲಹಾ ತಂಡದ ಅಭಿಪ್ರಾಯ ಪಡೆದ ನಂತರ ಮೇಲ್ಮನವಿ ಸಲ್ಲಿಸುವ ಬಗ್ಗೆ ನಿರ್ಧಾರ ಮಾಡುವುದಾಗಿ ಸಿಬಿಐ ಹೇಳಿದೆ. ಮೂರು ದಶಕಗಳ ಸುದೀರ್ಘ ಕಾನೂನು ಸಂಘರ್ಷ ಅಂತ್ಯವಾದ ಹಿನ್ನೆಲೆಯಲ್ಲಿ ನಿರಾಳವಾಗಿರುವ ಬಿಜೆಪಿ ಹಿರಿಯ ನಾಯಕರಿಗೆ ಮೇಲ್ಮನವಿ ಮಾತು ಮತ್ತೆ ಆತಂಕ ಮೂಡಿಸಿದೆ.

Share This Article
Leave a comment