ಹತ್ರಾಸ್‌ನಲ್ಲಿ ಅತ್ಯಾಚಾರ ದಿಂದ ಮೃತಪಟ್ಟ ಯುವತಿಯ ಕುಟುಂಬಸ್ಥರನ್ನು ಸಂತೈಸಲು ಹೊರಟಿದ್ದ ಪ್ರಿಯಾಂಕಾ ಗಾಂಧಿಯವರಿಗೆ ಅವಕಾಶ ನೀಡದೇ ಅವರ ಬಟ್ಟೆ ಹಿಡಿದಿದ್ದ ಪೋಲೀಸ್ ಮೇಲೆ ಬಿಜೆಪಿ ನಾಯಕಿ ಚಿತ್ರ ವಾಘ್ ಗರಂ ಆಗಿದ್ದಾರೆ.
ಪೋಲೀಸ್ ವರ್ತನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಮಹಾರಾಷ್ಟ್ರದ ಬಿಜೆಪಿ ಉಪಾಧ್ಯಕ್ಷೆ ಚಿತ್ರಾ ವಾಘ್, ಘಟನೆಯ ಬಗ್ಗೆ ಟ್ವಿಟರ್‌ನಲ್ಲಿ ‘ರಾಜಕೀಯ ನಾಯಕಿಯ ಮೇಲೆ ಪುರುಷ ಪೋಲೀಸ್ ಸಿಬ್ಬಂದಿಯೊಬ್ಬ ಕೈ ಕಾಲು ಎಷ್ಟು ಧೈರ್ಯ! ಪೋಲೀಸರು ತಮ್ಮ ಮಿತಿಯನ್ನು ಅರಿತಿರಬೇಕು. ಭಾರತೀಯ ಸಂಸ್ಕೃತಿಯನ್ನು ಆರಾಧಿಸುವ ಸಿಎಂ ಆದಿತ್ಯನಾಥ್ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು‘ ಎಂದು ಬರೆದುಕೊಂಡಿದ್ದಾರೆ.
ಸಾಮೂಹಿಕ ಅತ್ಯಾಚಾರದಿಂದ ಮೃತಪಟ್ಟ ಯುವತಿಯ ಕುಟುಂಬವನ್ನು ಸಂತೈಸಲು ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಅನೇಕ ಕಾಂಗ್ರೆಸ್ ಕಾರ್ಯಕರ್ತರೊಡನೆ ಹಥ್ರಾಸ್‌ಗೆ ಹೊರಟಿದ್ದಾಗ ಡಿಎನ್‌ಡಿ ಪ್ಲಾಜಾದ ಬಳಿ ಪೋಲೀಸರು ಇವರ ಕಾರುಗಳನ್ನು ಅಡ್ಡಗಟ್ಟಿದ್ದರು. ನಂತರ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಇವರನ್ನು ಬಂಧಿಸಿದ್ದರು. ಪ್ರಿಯಾಂಕ ಗಾಂಧಿ ಅವರನ್ನು ಬಂಧಿಸುವಾಗ ಪೋಲೀಸ್ ಸಿಬ್ಬಂದಿಯೊಬ್ಬ ಅವರ ಬಟ್ಟೆ ಹಿಡಿದಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿರುವ ಚಿತ್ರಾ ಅವರು ಪೋಲೀಸ್ ಸಿಬ್ಬಂದಿಯ ಮೇಲೆ ಆಕ್ರೋಶಗೊಂಡಿದ್ದಾರೆ.
More Stories
ಶೀಘ್ರದಲ್ಲೇ ಅಡುಗೆ ಎಣ್ಣೆಗಳ ಬೆಲೆ ಏರಿಕೆ ಸಾಧ್ಯತೆ
ಅಕ್ರಮ ಜಾಹಿರಾತು ಫಲಕ ಕುಸಿತಕ್ಕೆ 14 ಸಾವು, 74 ಜನರು ಗಂಭೀರ
ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ರಾಮ ಮಂದಿರ ಶುದ್ಧೀಕರಣ : ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಉವಾಚ