20 ಲಕ್ಷ ಭಕ್ತರಿಂದ ಹಾಸನಾಂಬೆ ದರ್ಶನ

Team Newsnap
1 Min Read
  • ಮುಂದಿನ ವರ್ಷ ಅ. 24ಕ್ಕೆ ಮತ್ತೆ ದೇವಸ್ಥಾನ ಓಪನ್
  • 6 .15 ಕೋಟಿ ಲಡ್ಡು ಪ್ರಸಾದ ಮಾರಾಟ

ಹಾಸನ : ಇದೇ ಮೊದಲ ಬಾರಿಗೆ ಹಾಸನಾಂಬ ದೇವಸ್ಥಾನಕ್ಕೆ ಇತಿಹಾಸದಲ್ಲಿಯೇ ಅತಿ ಹೆಚ್ಚು14.20 ಲಕ್ಷ ಭಕ್ತರು ಪ್ರಸಿದ್ಧ ಅಧಿದೇವತೆ ಹಾಸನಾಂಬ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು .

1 ಸಾವಿರ ಮತ್ತು 300 ರು ವಿಶೇಷ ಪ್ರವೇಶ ಟಿಕೆಟ್‌ಗಳು ಮತ್ತು 14 ದಿನಗಳವರೆಗೆ ಲಡ್ಡು ಪ್ರಸಾದವನ್ನು ಮಾರಾಟ ಮಾಡುವ ಮೂಲಕ 6.15 ಕೋಟಿ ರೂಪಾಯಿ ಆದಾಯವನ್ನು ಸಂಗ್ರಹಿಸಲಾಗಿದೆ.

ವರ್ಷಕ್ಕೊಮ್ಮೆ ತೆರೆಯುವ ಹಾಸನಾಂಬ ದೇಗುಲವನ್ನು ಬುಧವಾರ ಮಧ್ಯಾಹ್ನ 12.23ಕ್ಕೆ ಪುರೋಹಿತರ ತಂಡ ಎರಡೂವರೆ ಗಂಟೆಗಳ ಕಾಲ ಧಾರ್ಮಿಕ ವಿಧಿ ವಿಧಾನಗಳ ನಂತರ ಮುಚ್ಚಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಎಸ್ಪಿ ಮಹಮದ್ ಸುಜೀತಾ, ದೇವಸ್ಥಾನದ ಆಡಳಿತಾಧಿಕಾರಿ ಮಾರುತಿ ಅವರ ಸಮ್ಮುಖದಲ್ಲಿ ಮುಖ್ಯ ಅರ್ಚಕ ನಾಗರಾಜ್ ಅವರು ಗರ್ಭಗುಡಿಯ ಬಾಗಿಲು ಮುಚ್ಚಿದರು. ಮುಂದಿನ ವರ್ಷ ಅ. 24ಕ್ಕೆ ಮತ್ತೆ ದೇವಸ್ಥಾನ ಓಪನ್ ಆಗಲಿದೆ .50 ನೇ ಶತಕ ಬಾರಿಸಿ ಸಚಿನ್ ದಾಖಲೆ ಮುರಿದ ಕೊಹ್ಲಿ

ಕಂದಾಯ ಇಲಾಖೆ ಅಧಿಕಾರಿಗಳು ಇಂದು ನಿಯಮಾನುಸಾರ ಬೀಗವನ್ನು ವಶಕ್ಕೆ ಪಡೆದಿದ್ದಾರೆ.

Share This Article
Leave a comment