January 10, 2025

Newsnap Kannada

The World at your finger tips!

falls

ಉಸಿರಾಗಿಸಿದೆ……

Spread the love

ಕಿರಿದಾದ ಬೆಟ್ಟ ಗುಡ್ಡಗಳ ನಡುವೆ
ಕಾವೇರಿ ಧುಮ್ಮಿಕಿ ಹರಿಯುವಳು,,
ಹಲವು ಕೆರೆತೊರೆಗಳ ಜೊತೆಯಾಗಿ
ಹಮ್ಮುಬಿಮ್ಮಿಲ್ಲದೆ ಕಡಲ ಸೇರುವಳು,

ಲಕ್ಷ್ಮಣ ಕಪಿಲೆ ತುಂಗಾ ಭದ್ರೆಗೂಡಿ
ರಾಗ ಭಾವ ಹಂಸಗೀತೆಯಾಡಿದೆ,,
ಅಂದದ ಮೈವೆರಿ ಮೈನವಿರೇಳಿಸುತ
ನೋವ ಮರೆಸುತ ನಲಿಸಿದೆ

ಸೊಬಗ ಚೆಲುವಿನಲ್ಲು ಓಪು
ದುಃಖ ಮರೆಸಿ ಹೃದಯ ಹಾಡಿದೆ,,
ಉದುರಿದ ಋಕ್ಷ ರೆಂಬೆ ಕೊಂಬೆಯಲಿ
ವಸಂತದಲಿ ಅಲಗು ಚಿಗುರಿದೆ

ನಗುವ ವದನದಲ್ಲು ಬಂಧವಿದೆ
ಮರೆಸಿ ನಡೆವ ಸ್ನೇಹ ಒಲುಮೆಯಿದೆ,,
ಸತ್ಯ ಶಾಂತಿ ಪ್ರಕೃತಿಮಾತೇಯಂತೆ ಹರಸಿ
ಭಾರತಾಂಬೆಯಂತೆ ಮಮತೆಯ ಉಸಿರಾಗಿಸಿದೆ

krishnaswamy
ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ, ಅಂಚೆ ಜೀವ ವಿಮೆ ಮಂಡ್ಯ.

Copyright © All rights reserved Newsnap | Newsever by AF themes.
error: Content is protected !!