July 7, 2022

Newsnap Kannada

The World at your finger tips!

politics,BJP,CONGRESS

Hardik Patel to Congress in Gujarat: Good bye to BJP on June 2

ಗುಜರಾತ್ ನಲ್ಲಿ ಕಾಂಗ್ರೆಸ್ ಗೆ ಹಾರ್ದಿಕ್ ಪಟೇಲ್ ಗುಡ್ ಬೈ :ಜೂನ್ 2 ರಂದು BJP ಗೆ

Spread the love

ಕಾಂಗ್ರೆಸ್ ಮತ್ತೊಂದು ಆಘಾತ. ಗುಜರಾತ್ ಕಾಂಗ್ರೆಸ್‍ನ ಮಾಜಿ ಕಾರ್ಯಾಧ್ಯಕ್ಷ ಮತ್ತು ಪಾಟಿದಾರ್ ಸಮುದಾಯದ ಯುವ ನಾಯಕ ಹಾರ್ದಿಕ್ ಪಟೇಲ್ ಜೂನ್ 2ರಂದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಲಿದ್ದಾರೆ.

bjp congras

ಪಶ್ಚಿಮ ರಾಜ್ಯದಲ್ಲಿ ಈ ವರ್ಷಾಂತ್ಯಕ್ಕೆ ಚುನಾವಣೆ ನಡೆಯಲಿದೆ. ಈ ನಡುವೆ ಕಾಂಗ್ರೆಸ್ ತೊರೆದ ಕೆಲವೇ ದಿನಗಳಲ್ಲಿ ಬಿಜೆಪಿ ಸೇರುತ್ತಿರುವ ಹಾರ್ದಿಕ್ ಪಟೇಲ್ ನಿರ್ಧಾರ ಗುಜರಾತ್ ವಿಧಾನಸಭೆ ಚುನಾವಣೆಗೂ ಮುಂಚಿತವಾಗಿಯೇ ಮಹತ್ವ ಪಡೆದುಕೊಂಡಿದೆ.

ಇದನ್ನು ಓದಿ –ಕೋಡಿಹಳ್ಳಿ ಚಂದ್ರಶೇಖರ್ ನನ್ನು ರಾಜ್ಯ ರೈತ ಸಂಘದ ಅಧ್ಯಕ್ಷ ಸ್ಥಾನದಿಂದ ವಜಾ

ಕೆಲವು ದಿನಗಳಿಂದ ಹಾರ್ದಿಕ್ ಪಟೇಲ್ ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷ ಸೇರ್ಪಡೆಗೊಳ್ಳುತ್ತಾರೆ ಎಂಬ ಊಹಾಪೋಹಗಳು ಹರಿದಾಡುತ್ತಿತ್ತು.

ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಬಗ್ಗೆ ಪಟೇಲ್
ಆಮ್ ಆದ್ಮಿ ಪಕ್ಷದ ವಿರುದ್ಧ ಕಿಡಿಕಾರಿದ್ದರು. ನಾನು ಬಿಜೆಪಿ ಸೇರುವುದಿಲ್ಲ. ಒಂದು ವೇಳೆ ಸೇರಿದರೆ ನಿಮಗೆ ತಿಳಿಸುತ್ತೇನೆ ಎಂದು ಭಾನುವಾರ ಹೇಳಿದ್ದರು.

ಈಗ ಸೋನಿಯಾ ಗಾಂಧಿಗೆ ರಾಜೀನಾಮೆ ಪತ್ರ ಕಳಿಸಿರುವ ಹಾರ್ದಿಕ್ ಪಟೇಲ್ , ಕಾಂಗ್ರೆಸ್ ಪಕ್ಷ ಈ ಬಾರಿಯ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದ್ದಾರೆ.

error: Content is protected !!