December 31, 2024

Newsnap Kannada

The World at your finger tips!

prathibatane

ಪೊಲೀಸ್​​ ಠಾಣೆಗೆ ಆಗಮಿಸಿದ ಹಂಸಲೇಖ- ನಟ ಚೇತನ್​ ಠಾಣೆ ಪ್ರವೇಶಕ್ಕೆ ತಡೆ – ಪ್ರತಿಭಟನೆ

Spread the love

ಪೇಜಾವರ ಶ್ರೀಗಳ ಕುರಿತಂತೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ನೀಡಿದ್ದ ಹೇಳಿಕೆ ಸಂಬಂಧ ಇಂದು ವಿಚಾರಣೆಗಾಗಿ ಬೆಂಗಳೂರಿನ ಬಸವನಗುಡಿ ಪೋಲಿಸ್ ಠಾಣೆಗೆ ಆಗಮಿಸಿದರು.

ತಮ್ಮ ವಕೀಲರೊಂದಿಗೆ ಹಂಸಲೇಖ ಪೊಲೀಸ್​​ ಠಾಣೆಗೆ ಆಗಮಿಸಿದರು ಕೊತೆಯಲ್ಲಿ ನಟ ಚೇತನ್
ಆಗಮಿಸಿದ ಹಿನ್ನೆಲೆಯಲ್ಲಿ ಪರ ವಿರೋಧದ ಗುಂಪುಗಳ ನಡುವೆ ವಾಗ್ವಾದ ನಡೆಯುತ್ತಿದೆ. ಈ ನಡುವೆ ನಟ ಚೇತನ್ ಠಾಣೆ ಪ್ರವೇಶಕ್ಕೆ ಪೋಲಿಸರು ತಡೆ ನೀಡಿದರು .

ಹಿಂದೂ ಪರ ಕಾರ್ಯಕರ್ತರು ಭಾರಿ ಸಂಖ್ಯೆಯಲ್ಲಿ ಸೇರಿದ್ದಾರೆ. ಹಂಸಲೇಖ ಪರವಾಗಿಯೂ ಪ್ರಗತಿಪರರ ಗುಂಪು ಸೇರಿದೆ.
ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆ ಬಳಿ ಬೀಗಿ ಪೊಲೀಸ್ ಭದ್ರತೆಯನ್ನು ಏರ್ಪಡಿಸಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಜರಂಗದಳದ ಮುಖಂಡ ತೇಜಸ್, ಹಂಸಲೇಖ ಕ್ಷಮೆ ಕೇಳಿದರೇ ಆಗೋದಿಲ್ಲ. ಬೇಷರತ್ತು ಕ್ಷಮೆಯಾಚಿಸಬೇಕು.

ಈ ವಿಷಯದಲ್ಲಿ ನಟ ಚೇತನ್ ಬರುವ ಅವಶ್ಯಕತೆ ಇಲ್ಲ. ಚೇತನ್ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಚೇತನ್ ಈ ದೇಶದ ನಾಗರಿಕ ಅಲ್ಲ. ಸಸ್ಯಾಹಾರಿ ಹಾಗೂ ಮಾಂಸಹಾರಿಗಳನ್ನು ಒಡೆಯುವ ಕೆಲಸವನ್ನು ಚೇತನ್ ​ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಪೋಲಿಸ್ ಠಾಣೆ ಒಳಗೆ ಚೇತನ್ ಅವರನ್ನು ಬಿಡಬಾರದು. ಚೇತನ್ ವಿರುದ್ಧ ಕಪ್ಪುಪಟ್ಟಿ ಪ್ರದರ್ಶನ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಚೇತನ್ ಗೆ ಠಾಣೆ ಪ್ರವೇಶಕ್ಕೆ ನಿರ್ಬಂಧ:

ಈ ನಡುವೆ ಚೇತನ್ ನನ್ನು ಪೋಲಿಸರು ಠಾಣೆಯೊಳಗೆ ಬಿಡಲಿಲ್ಲ. ಪೊಲೀಸರ ಈ ಕ್ರಮವನ್ನು ಪ್ರತಿಭಟಿಸಿ ಚೇತನ್ ರಸ್ತೆ ತಡೆಗೆ ಮುಂದಾದರು. ಕೆಲವು ಕನ್ನಡ ಪರ ಸಂಘಟನೆಗಳು ಚೇತನ್ ಗೆ ಸಾಥ್ ನೀಡಿದರು.

Copyright © All rights reserved Newsnap | Newsever by AF themes.
error: Content is protected !!