ಬಿಸಿಯೂಟದ ಹಣ ದುರುಪಯೋಗ : ಹನಗೋಡು ಶಾಲಾ ಮುಖ್ಯ ಶಿಕ್ಷಕಿ ಅಮಾನತು

Team Newsnap
1 Min Read

ಬಿಸಿಯೂಟದ ಹಣ ದುರುಪಯೋಗಪಡಿಸಿಕೊಂಡ ಹಿನ್ನೆಲೆಯಲ್ಲಿ ಹುಣಸೂರು ತಾಲೂಕಿನ ಹನಗೋಡು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಸಹ ಶಿಕ್ಷಕಿ ಎಸ್.ಅಂಜಲಿ ಮಾರೀಸ್‌ರನ್ನು ಡಿಡಿಪಿಐ ರಾಮಚಂದ್ರರಾಜೇ ಅರಸ್ ಅಮಾನತುಗೊಳಿಸಲಾಗಿದೆ.

ಹನಗೋಡು ಶಾಲೆಯಲ್ಲಿ ಪ್ರಭಾರಿ ಮುಖ್ಯ ಶಿಕ್ಷಕರಾಗಿದ್ದ ವೇಳೆ ಎಸ್.ಅಂಜಲಿ ಮಾರಿಸ್‌ ,ಮಕ್ಕಳ ಅಕ್ಷರ ದಾಸೋಹ-ಬಿಸಿಯೂಟ ಯೋಜನೆಯಡಿ ಹಂತ-ಹಂತವಾಗಿ 4,42,483 ರೂಗಳು ದುರುಪಯೋಗಪಡಿಸಿಕೊಂಡಿದ್ದಾರೆಂದು ಆರೋಪಿಸಲಾಗಿದೆ.

ಹಣ ದುರುಪಯೋಗದ ಪ್ರಕರಣ

ವರ್ಷದ ಹಿಂದಷ್ಟೆ ಕಾಯಂ ಮುಖ್ಯ ಶಿಕ್ಷಕಿಯಾಗಿ ಪ್ರಭಾಮಣಿ ಅಧಿಕಾರವಹಿಸಿಕೊಂಡಿದ್ದರು. ಅಕ್ಷರ ದಾಸೋಹ ಯೋಜನೆಯ ಖಾತೆಯಲ್ಲಿ ಹಣ ಬಹಳ ಕಡಿಮೆ ಇರುವುದನ್ನು ಕಂಡು, ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಿಗೆ ಅನುದಾನ ಬಿಡುಗಡೆ ಮಾಡುವಂತೆ ಕೋರಿದ್ದರು. ಎಲ್ಲಾ ಪ್ರೌಢಶಾಲೆಯ ಖಾತೆಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಹಣವಿತ್ತು. ಇಲ್ಲಿ ಹಣವಿಲ್ಲದ ಬಗ್ಗೆ ಅನುಮಾನಗೊಂಡು ಜಿಲ್ಲಾ ಅಕ್ಷರ ದಾಸೋಹದ ಶಿಕ್ಷಣಾಧಿಕಾರಿ ಲಿಂಗರಾಜಯ್ಯನವರೇ ಶಾಲೆಗೆ ಬಂದು ತಪಾಸಣೆ ನಡೆಸಿದ ವೇಳೆ ಹಣ ದುರುಪಯೋಗದ ಪ್ರಕರಣ ಬಯಲಿಗೆ ಬಂತು.

ಇದನ್ನು ಓದಿ –ಮುಕೇಶ್ ಅಂಬಾನಿಗೆ ಭಾರತದ ಅತ್ಯಂತ ಶ್ರೀಮಂತ ಪಟ್ಟಿಯಲ್ಲಿ ಮೊದಲ ಸ್ಥಾನ

ಅಂಜಲಿ ಮಾರೀಸ್‌ರವರು ಪ್ರಭಾರಿ ಮುಖ್ಯ ಶಿಕ್ಷಕಿಯಾಗಿದ್ದ ವೇಳೆ ಬಿಸಿಯೂಟ ಹಣ ದುರುಪಯೋಗದ ಜೊತೆಗೆ ಪಿಠೋಪಕರಣಗಳಿಗಾಗಿ ಶಾಲಾ ಮಕ್ಕಳಿಂದ ವಸೂಲಿ ಮಾಡಿದ್ದ ೪೮ ಸಾವಿರ ರೂಗಳನ್ನು ಶಾಲಾ ಖಾತೆಗೆ ಜಮೆ ಮಾಡದೆ, ಪೀಠೋಪಕರಣವನ್ನು ಮಾಡಿಸದೆ ತಮ್ಮ ಬಳಿಯೇ ಹಣವಿಟ್ಟುಕೊಂಡು ದುರುಪಯೋಗ ಪಡಿಸಿಕೊಂಡಿದ್ದು ಸಹ ತನಿಖೆ ವೇಳೆ ಪೋಷಕರು ಅಧಿಕಾರಿಗಳಿಗೆ ದೂರಿದ್ದರು.

ಶಾಲೆಯಲ್ಲಿನ ಅವ್ಯವಹಾರಗಳ ಬಗ್ಗೆ ವಿಚಾರಣೆ ನಡೆಸಲು ತೀರ್ಮಾನಿಸಿ, ಶಿಸ್ತು ಕ್ರಮವಹಿಸಲು ತೀರ್ಮಾನಿಸಿದೆ, ಬಿಸಿಯೂಟದ ಹಣ ದುರುಪಯೋಗವನ್ನು ಗಂಭೀರವಾಗಿ ಪರಿಗಣಿಸಿ, ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಅಮಾನತುಗೊಳಿಸಲಾಗಿದೆ ಎಂದು ಡಿಡಿಪಿಐ ತಿಳಿಸಿದ್ದಾರೆ.

Share This Article
Leave a comment