December 2, 2021

Newsnap Kannada

The World at your finger tips!

ಪೇಜಾವರ ಶ್ರೀಗಳ ಬಗ್ಗೆ ಅವಹೇಳನ ಮಾತು ಆಡಿದ ಹಂಸಲೇಖ – ಏನು ಹೇಳಿದ್ದಾರೆ ಓದಿ …….

Spread the love

ತಾನೇ ಮಾಹಾನ್ ಜ್ಙಾನಿ ಎಂದು ಬಿಂಬಿಸಿಕೊಳ್ಳುತ್ತಿರುವ ಸಂಗೀತ ನಿದೇ೯ಶಕ ಹಂಸಲೇಖಾ ಪೇಜಾವರ ಶ್ರೀಗಳಿಗೆ ಬಾಯಿಗೆ ಬಂದಂತೆ ಸಮಾರಂಭದಲ್ಲಿ ಮಾತನಾಡಿದ ಮಾತು ಈಗ ವೈರಲ್. ಆಗಿವೆ

ಇತ್ತೀಚೆಗೆ ಮೈಸೂರು ನಡೆದ ಸಮಾರಂಭದಲ್ಲಿ ಮಾತನಾಡಿದ ಹಂಸ ಲೇಖ ಪೇಜಾವರ ಶ್ರೀಗಳು ದಲಿತರ ಮನೆಯಲ್ಲಿ ಕೋಳಿ ತಿಂತಾರಾ? ಕುರಿಯ ರಕ್ತವನ್ನು ಕುಡೀತಾರಾ? ಲಿವರ್​ನ ತಿನ್ನುತ್ತಾರಾ?  ಎಂದು ಪ್ರಶ್ನಿಸಿದ್ದಾರೆ.

ಅಲ್ಲದೇ ಮುಂದುವರೆದು ಮಾತನಾಡುತ್ತಿದ್ದ ಅವರು, ಡೆಮಾಕ್ರಸಿ ಇಂದು ಧರ್ಮಾಕ್ರಸಿ ಆಗುತ್ತಿದೆ. ಪೇಜಾವರ ಶ್ರೀಗಳು ದಲಿತರ ಮನೆಗೋಗುವುದು ಹೆಚ್ಚುಗಾರಿಕೆಯಲ್ಲ
ಅವರ ಮನೆಯಲ್ಲಿ ಕೊಡುವ ಕೋಳಿಯನ್ನು ತಿನ್ನುವುದಕ್ಕೆ ಆಗುತ್ತದಾ? ಅವರುಗಳು ಕುರಿಯ ರಕ್ತವನ್ನು ಕೊಟ್ಟರೆ ಕುಡಿಯುವುದಕ್ಕೆ ಆಗುತ್ತಾ? ಕುರಿಯ ಲಿವರ್ ಕೊಟ್ಟರೆ ತಿನ್ನಲು ಆಗುತ್ತಾ ಅಂತ ಪ್ರಶ್ನಿಸಿದ್ದಾರೆ.

ದಲಿತರ ಮನೆಗೆ ಬಲಿತರು ಹೋಗುವುದು ದೊಡ್ಡ ವಿಷಯವೇನಲ್ಲ. ಉಳ್ಳವರ ಮನೆಗೆ ದಲಿತರು ಹೋಗುವಂತೆ ಆಗಬೇಕು. ಬಲಿತರು ದಲಿತರನ್ನು ತಮ್ಮ ಮನೆಗೆ ಕರೆದೊಯ್ದು ಊಟ ಬಡಿಸಬೇಕು, ಅವರು ಊಟವನ್ನು ಬಡಿಸಿದರೆ ಅದು ದೊಡ್ಡ ವಿಷಯವಾಗುತ್ತದೆ ಎಂದೂ ಸಹ ಹಂಸಲೇಖ ಹೇಳಿದ್ದಾರೆ

error: Content is protected !!