October 17, 2021

Newsnap Kannada

The World at your finger tips!

ಹಲ್ಲೇಗೆರೆ ಶಂಕರ್ ಪುರಾಣ :ಪಂಚ ಮಹಿಳೆಯರ ಸಂಬಂಧ, ಸ್ಯಾಡಿಸ್ಟ್, ಕುಡುಕ- ಪುತ್ರನ ಪತ್ರದಲ್ಲಿ ಅಪ್ಪನ ಕರಾಳ ಮುಖ

Spread the love

ಬೆಂಗಳೂರಿನ ತಿಗುಳರಪಾಳ್ಯದ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ತಂದೆ ಹಲ್ಲೇಗೆರೆ ಶಂಕರ್ ಕರಾಳ ಮುಖವನ್ನು ಪುತ್ರ ಮಧು ಸಾಗರ್ ಇಂಗ್ಲಿಷ್ ನಲ್ಲಿ ಬರೆದಿರುವ ಡೆತ್ ನೋಟ್ ನಲ್ಲಿ ಬಟಾ ಬಯಲು ಮಾಡಿದ್ದಾನೆ.

ಪತ್ರದಲ್ಲಿ ತಂದೆಯ ಕರಾಳ ಮುಖ ಹೇಗಿತ್ತು ಎನ್ನುವ ಮಾಹಿತಿ ಏನು?

  • ನನ್ನ ತಂದೆ ಒಬ್ಬ ಸ್ಯಾಡಿಸ್ಟ್. ಅವರು ಆಫೀಸ್ ಗೆ ಹೋಗುವುದಕ್ಕೂ ಮುನ್ನ ಮನೆಯವರನ್ನು ಮನೆಯಲ್ಲೇ ಬೀಗ ಹಾಕಿ ಕೂಡಿ ಹಾಕಿ ಹೋಗುತ್ತಿದ್ದರು.
  • ಅವರೊಬ್ಬರು ಸ್ಟಾಡಿಸ್ಟ್. ತನ್ನ ತಾಯಿ. ಅಕ್ಕಂದಿರನ್ನು ಮಾನಸಿಕವಾಗಿ ಹಿಂಸೆ ಮಾಡುತ್ತಿದ್ದರು.
  • ಆವರ ಕಿರುಕುಳ ನನ್ನನ್ನೂ ಬಿಡಲಿಲ್ಲ. ನಾನೂ ಕೆಲಸಕ್ಕೆ ರಾಜೀನಾಮೆ ಕೊಡುವಂತೆ ಮಾಡಿದರು.
  • ನನ್ನ ತಂದೆಗೆ ಐವರು ಮಹಿಳೆಯರ ಜೊತೆ ಸಂಬಂಧ ಇತ್ತು.‌ ಇಂತಹ ಸಂಬಂಧದ ಮಹಿಳೆಯೊಬ್ಬರ ಮಗಳನ್ನು ನಾನು ಮದುವೆ ಮಾಡಿಕೊಳ್ಳುವಂತೆ ಇತ್ತಡ ಹೇರಿದರು.
  • ಮಹಿಳೆಯರ ಸಂಬಂಧಗಳ ಬಗ್ಗೆ ನನ್ನ ತಾಯಿ ಎಲ್ಲವನ್ನೂ ತಿಳಿದುಕೊಂಡಿದ್ದಳು. ಹೀಗಾಗಿಯೇ ಅಪ್ಪನನ್ನು ದೂರ ಇಟ್ಟಿದ್ದರು.‌
  • ನನ್ನ ಅಕ್ಕಂದಿರಿಗೆ ಯಾವತ್ತೂ ಒಂದು ಇಂಚು ಆಸ್ತಿ ಕೊಡಲಿಲ್ಲ. ಅವರಿಬ್ಬರೂ ಗಂಡನಿಂದ ದೂರ ಮಾಡಿದ್ದೇ ನಮ್ಮ ಅಪ್ಪ.
  • ನಮ್ಮ ಅಪ್ಪ ಹೊರಗಿನ ದೃಷ್ಟಿಯಲ್ಲಿ ತುಂಬಾ ಒಳ್ಳೆಯವರ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದರು. ಆದರೆ ನಿಜವಾದ ಮುಖವಾಡವೇ ಬೇರೆಯಾಗಿತ್ತು.
  • ಅವನೊಬ್ಬ ಕುಡುಕ , ಸ್ಯಾಡಿಸ್ಟ್. ಅತನ ಒಳ ಪ್ರಪಂಚವೇ ಭಯಾನಕವಾಗಿತ್ತು. ಪ್ರತಿನಿತ್ಯ ಕುಡಿದು ಮನೆಗೆ ಬಂದು ಗಲಾಟೆ ಮಾಡುತ್ತಿದ್ರು.‌

ಈ ಪತ್ರದಲ್ಲಿ ಬರೆದಿರುವ ಎಲ್ಲಾ ಅಂಶಗಳ ಬಗ್ಗೆ ಕೂಲಂಕಷವಾಗಿ ತನಿಖೆ ಮಾಡಲು ಬೆಂಗಳೂರಿನ ಬ್ಯಾಡರಹಳ್ಳಿ ಪೋಲಿಸರು ಶಂಕರ್ ಹಾಗೂ ಇಬ್ಬರು ಅಳಿಯಂದಿರಿಗೆ ವಿಚಾರಣೆಗಾಗಿ ನೋಟೀಸ್ ಜಾರಿ ಮಾಡಿದ್ದಾರೆ.

error: Content is protected !!