ದೇವೇಗೌಡರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹಾಗೂ ಪತ್ನಿ ಭವಾನಿ ಭಾಗಿಯಾಗಿದ್ದರು.
ಹಾಸನ ಟಿಕೆಟ್ ಗೆ ಸಂಬಂಧಿಸಿದಂತೆ ನಡೆದ ಈ ಸಭೆಯಲ್ಲಿ ಕುಮಾರಸ್ವಾಮಿ ಅವರೇ ಮೇಲುಗೈ ಸಾಧಿಸಿದ್ದಾರೆ . ಈ ಬೆಳವಣಿಗೆಯಿಂದ ಬೇಸತ್ತು ಮೊದಲು ಭವಾನಿ ರೇವಣ್ಣ ಹೊರ ನಡೆದರೆ ಬಳಿಕ ರೇವಣ್ಣ ಕೂಡ ಹೊರ ನಡೆದರು
ಸಭೆ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಹೆಚ್.ಡಿ ರೇವಣ್ಣ, ದೇವೇಗೌಡರಿಗೆ 40 ವರ್ಷದ ಹಾಸನ ಜಿಲ್ಲೆಯ ಅನುಭವ ಇದೆ. ಅವರಿಗೆ ಎಲ್ಲವೂ ಗೊತ್ತಿದೆ. ಅವರು ಏನು ಹೇಳುತ್ತಾರೆ ಅದೇ ಅಂತಿಮ ತೀರ್ಮಾನ. ನಮ್ಮದೇನೂ ಇಲ್ಲ. ಯಾರು ಗಾಬರಿ ಆಗೋದು ಬೇಡ. ನನ್ನಾಸೆ ಒಂದೇ ಈ ರಾಜ್ಯಕ್ಕೆ ಕುಮಾರಣ್ಣರನ್ನು ಮತ್ತೆ ಸಿಎಂ ಮಾಡಬೇಕು. ಹಾಸನದಲ್ಲಿ ನಮ್ಮ ಹತ್ರನೆ ಇದ್ದು, ನಮ್ಮ ಹತ್ತಿರವೇ ಬೆಳೆದು, ನಮಗೆ ಇವತ್ತು ಟೋಪಿ ಹಾಕುತ್ತಿದ್ದಾರೆ. ಇದಕ್ಕೆ ನಾವು ಮುಂದಿನ ದಿನಗಳಲ್ಲಿ ಎಚ್ಚರಿಕೆಯಿಂದ ಇರಬೇಕು ಎಂದರು.
ಭವಾನಿಯವರು ಬೆಂಗಳೂರಿನ ಗೌಡರ ನಿವಾಸಕ್ಕೆ ಬಂದು ನಮ್ಮ ತಾಯಿಯವರ ಆಶೀರ್ವಾದ ಪಡೆದರು. ಊರಿನಲ್ಲಿ ಪೂಜೆಯಿತ್ತು. ಹೀಗಾಗಿ ತಾಯಿಯವರ ಬಳಿ ಮಾತನಾಡಿದರು. ದೇವೇಗೌಡರ ಬಳಿ ಯಾವುದೇ ರಾಜಕೀಯ ಚರ್ಚೆಗೆ ಭವಾನಿಯವರು ಬಂದಿರಲಿಲ್ಲ. ಭವಾನಿಯವರು ಅವತ್ತೇ ಹೇಳಿದ್ದಾರೆ.
ನನಗೆ ಬೇಕಾಗಿರುವುದು ನಮ್ಮ ಮಾವ. ಅವರು ಏನು ಹೇಳುತ್ತಾರೆ ಅದನ್ನು ಕೇಳುತ್ತೇನೆ ಎಂದಿದ್ದಾರೆ ಅಂತಾ ಪತ್ನಿ ಪರ ಬ್ಯಾಟ್ ಬೀಸಿದರು.ಇದನ್ನು ಓದಿ –ಬೆಂಗಳೂರಿನ ನಾಯಂಡನಹಳ್ಳಿ ಬಳಿ ಲಾರಿ ಡಿಕ್ಕಿ ಹೊಡೆದು ಮಹಿಳೆ ಸಾವು
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು