40 ಸೆಕೆಂಡಿನಲ್ಲಿ 60ಕ್ಕೂ ಹೆಚ್ಚು ಬಾರಿ ಚುಚ್ಚಿ‌ ಆಸ್ತಿಗಾಗಿ ಗುರೂಜಿ ಕೊಲೆ: ವನಜಾಕ್ಷಿ ಬಂಧನ

Team Newsnap
3 Min Read

ಗುರೂಜಿ ಹತ್ಯೆಯನ್ನು ಆಪ್ತನಾಗಿದ್ದ ಮಹಾಂತೇಶ್ ಶಿರೂರು ಹಾಗೂ ಮಂಜುನಾಥ್ ಜೊತೆ ಸೇರಿ ಈ ಹತ್ಯೆ ಮಾಡಿದ್ದಾರೆ. ಈ ನಡುವೆ ಮಹಾಂತೇಶ್ ಪತ್ನಿ ವನಜಾಕ್ಷಿ ಯನ್ನು ಹುಬ್ಬಳ್ಳಿಯ ಗೋಕುಲ ಪೋಲಿಸರು ಬಂಧಿಸಿದ್ದಾರೆ.

ಚಂದ್ರಶೇಖರ್ ಗುರೂಜಿಯು ಅಪಾರ್ಟ್ ಮೆಂಟ್ ಒಂದನ್ನು ವನಜಾಕ್ಷಿ ಹೆಸರಿನಲ್ಲಿ ಬೇನಾಮಿ ನೋಂದಣಿ ಮಾಡಿದ್ದರು. ಈ ಆಸ್ತಿಯನ್ನು ಗುರೂಜಿ ವಾಪಸ್ಸು ಕೇಳಿದ ನಂತರ ಕೊಲೆ ಮಾಡಲು ನಿರ್ಧರಿಸಿ ಈ ಕೃತ್ಯ ನಡೆದಿದೆ. ಸರಳ ವಾಸ್ತು ಮಾಜಿ ಉದ್ಯೋಗಿ ವನಜಾಕ್ಷಿ ತನ್ನ ಗಂಡನ ಜೊತೆ ಸೇರಿ ಈ ಕೃತ್ಯ ಎಸಗಿದ್ದಾರೆ.

ವಿಡಿಯೋ ಭಯಾನಕ ದೃಶ್ಯ ಹೊಂದಿದ್ದು ಸೂಕ್ಷ್ಮ ಮನಸ್ಸಿನವರು ನೋಡದಿರಿ

ವಿಡಿಯೋ ಭಯಾನಕ ದೃಶ್ಯ ಹೊಂದಿದ್ದು ಸೂಕ್ಷ್ಮ ಮನಸ್ಸಿನವರು ನೋಡದಿರಿ

ಹುಬ್ಬಳ್ಳಿಯಲ್ಲಿ ಸರಳವಾಸ್ತು ಖ್ಯಾತಿ ಚಂದ್ರಶೇಖರ್ ಗುರೂಜಿಯನ್ನು 12.23 ರ ವೇಳೆಗೆ ದುಷ್ಕರ್ಮಿಗಳು 40 ಸೆಕೆಂಡ್ ಗಳಲ್ಲಿ 60 ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಹಂತಕರ ಹಣಕಾಸು ಹಾಗೂ ಆಸ್ತಿ ವಿಷಯಕ್ಕೆ ಸಂಬಂಧಿಸಿದ ದ್ವೇಷವೇ ಚಂದ್ರಶೇಖರ್ ಗುರೂಜಿಯ ಹತ್ಯೆಗೆ ಕಾರಣವೆಂದು ಮೆಲ್ನೋಟಕ್ಕೆ ಕಂಡು ಬಂದಿದೆ.CCTV ಆದರಿಸಿ ತನಿಖೆ ಮುಂದುವರೆದಿದೆ.

ಹುಬ್ಬಳ್ಳಿಯ ಹೋಟೆಲ್ ನಲ್ಲಿ ಸರಳ ವಾಸ್ತು ಗುರೂಜಿ ಚಂದ್ರಶೇಖರ್ ಹತ್ಯೆ

ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಅವರನ್ನು ಅಪರಿಚಿತ ದುಷ್ಕರ್ಮಿಗಳು ಮಂಗಳವಾರ ಹುಬ್ಬಳ್ಳಿಯ
ಖಾಸಗಿ ಹೋಟೆಲ್ ನಲ್ಲಿ ಬರ್ಬರವಾಗಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.

ಹುಬ್ಬಳ್ಳಿಯ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ಚಂದ್ರಶೇಖರ್ ಹತ್ಯೆ ಮಾಡಲಾಗಿದೆ ಎಂದು ಮಾಹಿತಿ ದೊರೆತಿದೆ.

ಸರಳ ವಾಸ್ತು ಸೇರಿದಂತೆಜ್ಯೋತಿಷಿ ಚಂದ್ರಶೇಖರ್ ಗುರೂಜಿಗೆ ಹೋಟೆಲ್ ಗೆ ಭಕ್ತರ ಸೋಗಿನಲ್ಲಿ ಬಂದು ಈ ಕೃತ್ಯ ಎಸಗಲಾಗಿದೆ

ಸ್ಥಳಕ್ಕೆ ಹುಬ್ಬಳ್ಳಿ ಧಾರವಾಡ ಕಮಿಷನರ್ ಲಾಬೂರಾಮ್ ದೌಡಾಯಿಸಿದ್ದಾರೆ.


ಬೆಂಗಳೂರಿನ ಚಾಮರಾಜಪೇಟೆ ಕಾಂಗ್ರೆಸ್​ ಶಾಸಕ ಜಮೀರ್​ ಅಹ್ಮದ್ ಖಾನ್​​ ಅವರಿಗೆ ಮಂಗಳವಾರ ಬೆಳ್ಳಂಬೆಳಗ್ಗೆ ACB ಅಧಿಕಾರಿಗಳು ಶಾಕ್​ ನೀಡಿದ್ದಾರೆ.

ಸರ್ಚ್ ವಾರೆಂಟ್ ಪಡೆದುಕೊಂಡೇ ಜಮೀರ್ ಗೆ ಸೇರಿದ 5 ಮನೆ ಹಾಗೂ ಕಚೇರಿಯ ಮೇಲೆ 40ಕ್ಕೂ ಅಧಿಕ ಎಸಿಬಿ ಅಧಿಕಾರಿಗಳ ತಂಡ ದಾಳಿ ಮಾಡಿ, ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ.

ದಾಳಿ ಎಲ್ಲಿ ನಡೆಡೆದಿದೆ? :

  • ಫ್ರೆಜರ್​ ಟೌನ್​ನಲ್ಲಿರುವ ಜಮೀರ್ ಅಹ್ಮದ್ ಮನೆ ಮೇಲೆ ದಾಳಿ
  • ಸಿಲ್ವರ್ ಓಕ್ ಅಪಾರ್ಟ್ಮೆಂಟ್ ಮೇಲೆ ದಾಳಿ
  • ಸದಾಶಿವ ನಗರದ ಗೆಸ್ಟ್ ಹೌಸ್ ಮೇಲೆ ದಾಳಿ
  • ಬನಶಂಕರಿಯಲ್ಲಿರುವ ಜಿ.ಕೆ ಅಸೋಸಿಯೇಟ್ಸ್ ಕಚೇರಿ ಮೇಲೆ ದಾಳಿ
  • ಕಲಾಸಿಪಾಳ್ಯದಲ್ಲಿರುವ ನ್ಯಾಷನಲ್ ಟ್ರಾವೆಲ್ಸ್ ಮೇಲೆ ದಾಳಿ

ಕಳೆದ ಆಗಸ್ಟ್​ನಲ್ಲಿ ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ಜಮೀರ್ ನಿವಾಸ, ಕಚೇರಿ ಮತ್ತು ಫ್ಲ್ಯಾಟ್‌ ಮೇಲೆ ದಾಳಿ ಮಾಡಿದ್ದರು. ಕಾಂಗ್ರೆಸ್​ ಶಾಸಕ ಜಮೀರ್ ಅಹ್ಮದ್ ಖಾನ್​ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಬಗ್ಗೆ ಆದಾಯ ತೆರಿಗೆ ಇಲಾಖೆ ಅನಾಮಧೇಯ ಮೂಲಗಳಿಂದ ಮಾಹಿತಿ ಸಂಗ್ರಹ ಮಾಡಿತ್ತು.

ಕಾಳಿ ಮಾತೆ ಬಾಯಲ್ಲಿ ಸಿಗರೇಟ್ ಕ್ಷಮೆ ಕೇಳದ ನಿರ್ದೇಶಕಿ ಲೀನಾ

ಜಮೀರ್​​ ಕಳೆದ ಹಣಕಾಸು ವರ್ಷದಲ್ಲಿ ಘೋಷಿಸಿಕೊಂಡ ಆಸ್ತಿಗಿಂತ ದುಪ್ಪಟ್ಟು ಆಸ್ತಿ ಹೊಂದಿರುವ ಬಗ್ಗೆ ಐಟಿ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಇಡಿ ದಾಳಿ ಮಾಡಿತ್ತು. ಈಗ ಎಸಿಬಿ ಅಧಿಕಾರಿಗಳು ಅಕ್ರಮ ಸಂಪತ್ತು ಹಾಗೂ ಆಸ್ತಿ ಹುಡುಕಾಟದಲ್ಲಿ ತೊಡಗಿದ್ದಾರೆ.

ಜಮೀರ್​​ ಕಳೆದ ಹಣಕಾಸು ವರ್ಷದಲ್ಲಿ ಘೋಷಿಸಿಕೊಂಡ ಆಸ್ತಿಗಿಂತ ದುಪ್ಪಟ್ಟು ಆಸ್ತಿ ಹೊಂದಿರುವ ಬಗ್ಗೆ ಐಟಿ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಇಡಿ ದಾಳಿ ಮಾಡಿತ್ತು. ಈಗ ಎಸಿಬಿ ಅಧಿಕಾರಿಗಳು ಅಕ್ರಮ ಸಂಪತ್ತು ಹಾಗೂ ಆಸ್ತಿ ಹುಡುಕಾಟದಲ್ಲಿ ತೊಡಗಿದ್ದಾರೆ.

Share This Article
Leave a comment