January 28, 2026

Newsnap Kannada

The World at your finger tips!

bjp boi

ಅತಿಥಿ ಉಪನ್ಯಾಸಕರ ವೇತನ ಮಂಜೂರಿಗೆ ಸಿಎಂ ಅಸ್ತು

Spread the love

ಏಪ್ರಿಲ್‌ನಿಂದ ಪದವಿ ಕಾಲೇಜುಗಳಲ್ಲಿ ಪಾಠ ಮಾಡುತ್ತಿದ್ದ ಅತಿಥಿ ಉಪನ್ಯಾಸಕರಿಗೆ ಸರ್ಕಾರವು ವೇತನವನ್ನು ಮಂಜೂರು ಮಾಡಲು ಸಿಎಂ ಯಡಿಯೂರಪ್ಪ ಅಸ್ತು ಎಂದಿದ್ದಾರೆ.

ಕಳೆದ ೬ ತಿಂಗಳಿನಿಂದ ವೇತನ
ಸಿಗದೇ ಕೆಲವು ಅತಿಥಿ ಉಪನ್ಯಾಸಕರು ಆರ್ಥಿಕ ಮುಗ್ಗಟ್ಟಿನಿಂದ ಆತ್ಮಹತ್ಯೆಯನ್ನೂ ಮಾಡಿಕೊಂಡಿದ್ದನ್ನು ಸ್ಮರಿಸಬಹುದು.

ಈ ವಿಷಯದ ಕುರಿತು ಮಂಗಳವಾರ ವಿಧಾನ ಪರಿಷತ್ ನಲ್ಲಿ, ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಅತಿಥಿ ಉಪನ್ಯಾಸಕರಿಗೆ ವೇತನ ಮಂಜೂರು ಮಾಡುವಂತೆ ಧರಣಿ ಪ್ರಾರಂಭಿಸಿದರು.

ಇದಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ನವರೂ ಬೆಂಬಲಿಸಿದರು. ಕೊನೆಗೆ ಧರಣಿಗೆ ಮಣಿದ ಸಿಎಂ ಯಡಿಯೂರಪ್ಪನವರು, ರಾಜ್ಯದ ೧೪,೪೪೭ ಅತಿಥಿ ಉಪನ್ಯಾಸಕರಿಗೆ ಬಾಕಿ ವೇತನ ಮಂಜೂರು ಮಾಡುವದಾಗಿ ಪ್ರಕಟಿಸಿದರು.

error: Content is protected !!