January 11, 2025

Newsnap Kannada

The World at your finger tips!

srinivas

ಜೆಡಿಎಸ್ – ಬಿಜೆಪಿ ಒಳ ಒಪ್ಪಂದ ನಿಜ: ‘ ಗುಬ್ಬಿ’ ಶಾಸಕ ಶ್ರೀನಿವಾಸ್ ಬ್ರಹ್ಮಾಸ್ತ್ರ !

Spread the love
ಜೆಡಿಎಸ್ ಮೇಲೆ ‘ ಗುಬ್ಬಿ” ಶಾಸಕ ಶ್ರೀನಿವಾಸ್ ಬ್ರಹ್ಮಾಸ್ತ್ರ ಬಿಟ್ಟಿದ್ದಾರೆ.

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವ ಲೆಕ್ಕಾಚಾರ ಹಾಕಿದ್ದಾರೆಂದು ಹೇಳಲಾಗಿದೆ . ಆದರೆ ಶಾಸಕ ಶ್ರೀನಿವಾಸ್ ಮಾತ್ರ ಜೆಡಿಎಸ್ ಬಿಟ್ಟು ನಾನು ಎಲ್ಲೂ ಹೋಗಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ .

ಕಾಂಗ್ರೆಸ್ ನವರು ಸೆಳೆಯುವ ತಂತ್ರ:

ಈ ನಡುವೆ ಇದುವರೆಗೂ ರಾಜಕಾರಣ ದಲ್ಲಿ ಬಿಜೆಪಿ ಆಪರೇಷನ್ ಮೂಲಕ ಶಾಸಕರನ್ನು ಸೆಳೆಯುತ್ತಿತ್ತು. ಆದರೆ ಕಾಂಗ್ರೆಸ್ ಈಗ ಜೆಡಿಎಸ್ ಗೆ ಶಾಕ್ ನೀಡಿ, ಗುಬ್ಬಿ ಶಾಸಕ ಶ್ರೀನಿವಾಸ್ ಅವರನ್ನು ಸೆಳೆಯಲು ಮುಂದಾಗಿದೆ.

ಜೆಡಿಎಸ್ ಶಾಸಕ ಎಸ್. ಆರ್ .
ಶ್ರೀನಿವಾಸ್ ಕಾಂಗ್ರೆಸ್ ನಾಯಕರು ನಡೆಸುವ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡಿರುವುದು ಆಪರೇಷನ್ ಕಾಂಗ್ರೆಸ್ ಗೆ ಬಿದ್ದ ಹಾಗೆ ಕಾಣುತ್ತದೆ ಎಂಬ ಸಂಶಯವಿದೆ.

ಈ ವೇಳೆ ಮಾತನಾಡಿದ ಶ್ರೀನಿವಾಸ್ ನಂಗೆ ರಾಜಣ್ಣ ರಾಜಕೀಯದ ಗಾಡ್ ಫಾದರ್. ನಾನು ಸ್ವತಂತ್ರ ವಾಗಿ ಸ್ಪರ್ಧೆ ಮಾಡಿದ್ದ ವೇಳೆ ಸಹಾಯ ಮಾಡಿದ್ದರು. ಹೀಗಾಗಿ ಸುದ್ದಿಗೋಷ್ಠಿಗೆ ಬಂದಿದ್ಧೇನೆ. ಇದರ ಹೊರತು ಬೇರೆ ಯಾವುದೇ ಅಲೋಚನೆ ಇಲ್ಲ ಎಂದರು.

ಸಿದ್ದು ಸೋಲಿಸಲು ಒಳ ಒಪ್ಪಂದ ನಿಜ ?:

ಕೇವಲ ಚಾಮುಂಡೇಶ್ವರಿಯಲ್ಲಿ ಅಲ್ಲದೇ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜೊತೆ ನಾವು ಒಡಂಬಡಿಕೆ ಮಾಡಿಕೊಂಡು ಚುನಾವಣೆಗೆ ಹೋಗಿದ್ದು ನಿಜ ಎಂದು ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಸ್ಫೋಟಕ ಹೇಳಿಕೆ ನೀಡಿದರು.

ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಂಡಿರುವುದು ಇಡೀ ದೇಶಕ್ಕೆ ಗೊತ್ತಿದೆ. ಸಿದ್ದರಾಮಯ್ಯನವರಿಗೆ ಈಗ ಜ್ಞಾನೋದಯವಾದಂತಿದೆ. ಸಿದ್ದರಾಮಯ್ಯರನ್ನು ಸೋಲಿಸ ಬೇಕೆಂದು ಬೆಂಬಲ ನೀಡಿದ್ದು ನಿಜ. ಅಕ್ಷರಶಃ ಸತ್ಯ, ಅದೊಂದೇ ಕ್ಷೇತ್ರವಲ್ಲ ಸುಮಾರು ಕ್ಷೇತ್ರಗಳಲ್ಲಿ ಬಿಜೆಪಿ ನಾವು ಒಡಂಬಡಿಕೆ ಮಾಡಿಕೊಂಡು ಚುನಾವಣೆಗೆ ಹೋಗಿದ್ದೀವಿ. ಇದು ಎಲ್ಲರಿಗೂ ಗೊತ್ತಿರುವ ವಿಚಾರ ಇದರಲ್ಲಿ ಹೊಸದೇನಿದೆ ಎಂದು ಎಸ್.ಆರ್.ಶ್ರೀನಿವಾಸ್ ಪ್ರಶ್ನೆ ಮಾಡಿದ್ದಾರೆ.

ನಾನು ಯಾವ ಪಕ್ಷಕ್ಕೂ ಹೋಗುತ್ತಿಲ್ಲ. ನನಗೆ ರಾಜಕೀಯ ಬೇಸರವಾದ್ದು, ಪ್ರಸ್ತುತ ರಾಜಕೀಯ ವಿದ್ಯಾಮಾನಗಳ ಬಗ್ಗೆ ಅಸಮಾಧಾನ ಇದೆ. ಪ್ರಸ್ತುತ ರಾಜಕೀಯ ವ್ಯವಸ್ಥೆ ಅಸಹ್ಯಪಡುವಂತಿದ್ದು, ಹೀಗಾಗಿ ಎಲ್ಲೂ ಹೋಗದೇ ತೋಟದಲ್ಲಿದ್ದೇನೆ.

ಎಚ್ ಡಿ ಕೆ ಬಗ್ಗೆ ಅಸಮಾಧಾನ ?:

ಬಿಜೆಪಿ ಜೊತೆಗಿನ ಸಖ್ಯ ಬಗ್ಗೆ ನೀವು ಕುಮಾರಸ್ವಾಮಿ ಅವರನ್ನು ಕೇಳಬೇಕು. ನಾನು ಜೆಡಿಎಸ್ ಶಾಸಕ, ಇಲ್ಲಿಯೇ ಇದ್ದೇನೆ. ಕುಮಾರಸ್ವಾಮಿ ಬಿಜೆಪಿ ಜೊತೆ ಹೋದ್ರೆ ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರ ಹಾಕಿದರು.

Copyright © All rights reserved Newsnap | Newsever by AF themes.
error: Content is protected !!