December 22, 2024

Newsnap Kannada

The World at your finger tips!

WhatsApp Image 2023 05 16 at 6.51.53 PM

ಸೀಬೆಹಣ್ಣು (Guava Fruit)

Spread the love

ದಿನಕ್ಕೊಂದು ಸೀಬೆಹಣ್ಣು ತಿಂದು ವೈದ್ಯರಿಂದ ದೂರ ಇರಿ ಏಕೆಂದರೆ ಉತ್ತಮ ಹಣ್ಣುಗಳಲ್ಲಿ ಸೀಬೆಹಣ್ಣು ಕೂಡ ಒಂದು. ಸೀಬೆಕಾಯಿ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಇದರ ಸಿಪ್ಪೆ, ತಿರುಳು, ಬೀಜ ಎಲ್ಲವನ್ನು ತಿನ್ನಬಹುದಾಗಿದ್ದು ದಿನಾ ಒಂದು ಸೀಬೆಕಾಯಿ ತಿನ್ನುವುದರಿಂದ ಹಲವಾರು ಆರೋಗ್ಯಕರ ಗುಣಗಳನ್ನು ಪಡೆಯಬಹುದು.

ಸೀಬೆಹಣ್ಣು ಪ್ರಮುಖ ಪೌಷ್ಟಿಕಾಂಶಗಳನ್ನು ಹೊಂದಿದೆ, ಈ ಹಣ್ಣು ಸಾಮಾನ್ಯವಾಗಿ ಒಣ ಉಷ್ಣಾಂಶವಿರುವ ಹಾಗೂ ತಂಪು ಪ್ರದೇಶಗಳಲ್ಲಿ ಬೆಳೆಯುತ್ತದೆ.

ಸೀಬೆಹಣ್ಣು ದೇಹದಲ್ಲಿನ ರಕ್ತಹೀನತೆಯನ್ನು ನಿವಾರಿಸುತ್ತದೆ. ಪ್ರತಿದಿನ ಸೀಬೆಹಣ್ಣನ್ನು ತಿನ್ನುವುದರಿಂದ ಹಿಮೋಗ್ಲೋಬಿನ್ ಕೊರತೆ ಉಂಟಾಗುವುದಿಲ್ಲ.

ಸ್ಲಿಮ್‌ ಆಗಬೇಕೆನ್ನುವವರು ಡಯಟಿಂಗ್‌ ಲಿಸ್ಟ್‌ನಲ್ಲಿ ಸೀಬೆಹಣ್ಣನ್ನು ಸೇರಿಸಿಕೊಳ್ಳಬಹುದು. ಕಡಿಮೆ ಕ್ಯಾಲೋರಿಯ ಈ ಹಣ್ಣು , ದೇಹಕ್ಕೆ ವಿಟಮಿನ್‌ಗಳ ಮಹಾಪೂರವನ್ನೇ ಪೂರೈಸುವುದರೊಂದಿಗೆ ಕೊಬ್ಬಿನಾಂಶದ ಪ್ರಮಾಣವನ್ನು ಕುಂಠಿತಗೊಳಿಸುತ್ತದೆ ಎನ್ನುತ್ತಾರೆ.

ಬಿಳಿ ಬಣ್ಣದ ಸೀಬೆಗಿಂತ ಕೆಂಪು ಬಣ್ಣದ ಸೀಬೆಹಣ್ಣು ಆರೋಗ್ಯಕ್ಕೆ ಒಳ್ಳೆಯದು, ಇದರಲ್ಲಿ ಲೈಕೋಪಿನ್ ಇರುತ್ತದೆ.

ಪೇರಲ ಹಣ್ಣು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಇದರಲ್ಲಿರುವ ನಾರಿನಂಶವು ಉತ್ತಮ ಪಚನಕ್ರಿಯೆಗೆ ಸಹಕಾರಿಯಾಗಿದೆ. ಈ ಹಣ್ಣು ಮತ್ತು ಎಲೆಗಳನ್ನು ಸೇವಿಸುವುದರಿಂದ ವಾಂತಿ ಬೇದಿಯಂತಹ ಸಮಸ್ಯೆಗಳು ದೂರವಾಗುತ್ತವೆ. ಸೀಬೆ ಹಣ್ಣು ಮತ್ತು ಎಲೆಯ ಸಾರವು ಸೂಕ್ಷ್ಮ ಜೀವಿಗಳ ವಿರುದ್ಧ ಹೋರಾಡಿ ಜೀರ್ಣಾಂಗ ವ್ಯವಸ್ತೆಯ ಮೇಲಾಗುವ ಸೊಂಕುಗಳನ್ನು ತಡೆಗಟ್ಟುತ್ತದೆ.

guva

ಸೀಬೆಕಾಯಿ ಚರ್ಮದ ಕಾಂತಿಗೆ ಒಳ್ಳೆಯದು

ಸೀಬೆಕಾಯಿಯಲ್ಲಿ ಅಗತ್ಯವಾದ ಕಬ್ಬಿಣಾಂಶ, ಫೋಲಿಕ್ ಆಸಿಡ್, ಕ್ಯಾಲ್ಸಿಯಂ, ನಾರಿನಂಶ, ಪ್ರೊಟೀನ್, ಕಾರ್ಬೊಹೈಡ್ರೇಡ್, ವಿಟಮಿನ್ ಎ, ಬಿ ಮತ್ತು ಸಿ ಎಲ್ಲವೂ ಇರುವುದರಿಂದ ತ್ವಚೆ ರಕ್ಷಣೆಯನ್ನು ಮಾಡುತ್ತದೆ. ಇದನ್ನು ತಿನ್ನುವ ಮೂಲಕ ಅನೇಕ ತ್ವಚೆ ಸಂಬಂಧಿ ಸಮಸ್ಯೆಗಳನ್ನು ದೂರವಿಡುತ್ತದೆ.

ಸೀಬೆ ಎಲೆಯ ಉಪಯೋಗಗಳು :

ಸೀಬೆ ಹಣ್ಣಿನ ಎಲೆಗಳು ಅತಿಸಾರ, ಕೊಲೆಸ್ಟ್ರಾಲ್ ನಿಯಂತ್ರಣ, ಮಧುಮೇಹ, ಮುಂತಾದವುಗಳಿಗೆ ಔಷಧಿಯಾಗಿ ಬಳಸಿಕೊಳ್ಳಬಹುದು.

ಒಸಡುಗಳ ಆರೋಗ್ಯ: ಸೀಬೆ ಎಲೆಗಳನ್ನು ಕುದಿಸಿದ ನೀರಿನಿಂದ ಮುಕ್ಕಳಿಸುವುದರಿಂದ ಹಲ್ಲುನೋವು, ಜಿಂಗೈವಿಟಿಸ್ ಮತ್ತು ಬಾಯಿ ಹುಣ್ಣುಗಳನ್ನು ಕೊನೆಗೊಳಿಸುತ್ತದೆ. ಹಾಗೆಯೇ ಇದು ಒಸಡುಗಳ ಆರೋಗ್ಯವನ್ನು ಹೆಚ್ಚಿಸುತ್ತದೆ.

ಸೀಬೆ ಎಲೆ ಕಾಮಾಲೆಗೆ ಅತ್ಯಂತ ಪರಿಣಾಮಕಾರಿ : ಮೂರು ದಿನಗಳ ಕಾಲ ಸೀಬೆ ಎಲೆಯಿಂದ ಕಷಾಯ ಮಾಡಿ ಕುಡಿದರೆ ಕಾಮಾಲೆ ಮಾಯವಾಗುತ್ತದೆ. ಸೀಬೆ ಮರದ ಎಲೆಯಿಂದ ತಯಾರಿಸುವ ಔಷಧ ಯಕೃತ್ತು ಹಾನಿ ತಡೆಯುತ್ತದೆ.

ಸೀಬೆ ಮರದ ಎಲೆಗಳು ಕೂದಲನ್ನು ಸೊಂಪಾಗಿ ಬೆಳೆಯಲು ಸಹಾಯ ಮಾಡುವುದು. ಅಷ್ಟೇ ಅಲ್ಲದೆ, ನಿಮ್ಮ ಕೂದಲಿಗೆ ಒಳ್ಳೆಯ ಹೊಳಪನ್ನು ತಂದುಕೊಡುತ್ತದೆ.

guva1

ಹೇರ್ ಕೇರ್ ಸಲ್ಯೂಷನ್ ತಯಾರು ಮಾಡುವ ರೀತಿ :

ಒಂದು ಹಿಡಿ ಚೆನ್ನಾಗಿ ತೊಳೆದ ತಾಜಾ ಸೀಬೆ ಮರದ ಎಲೆಗಳು ಒಂದು ಲೀಟರ್ ನೀರು
ನೀರು ಮತ್ತು ಸೀಬೆ ಎಲೆಗಳನ್ನು ಚೆನ್ನಾಗಿ ಕುದಿಸಲು ಒಂದು ಪಾತ್ರೆ
ಕುದಿಸಿದ ಬಳಿಕ ಸೋಸಲು ಒಂದು ಸ್ತ್ರೈನರ್

ಮೊದಲು ಒಂದು ಸ್ಟೀಲ್ ಪಾತ್ರೆಗೆ ನೀರು ತುಂಬಿ ಗ್ಯಾಸ್ ಸ್ಟವ್ ಮೇಲೆ ಕುದಿಯಲು ಇಡಿ
ನೀರು ಕುದಿಯಲು ಪ್ರಾರಂಭವಾಗುತ್ತಿದ್ದಂತೆ ಚೆನ್ನಾಗಿ ತೊಳೆದ ಸೀಬೆ ಎಲೆಗಳನ್ನು ಪಾತ್ರೆಗೆ ಹಾಕಿ
ಸುಮಾರು 20 ನಿಮಿಷಗಳ ಕಾಲ ಇದನ್ನು ಹಾಗೆ ಕುದಿಯಲು ಬಿಡಿ
ನಂತರ ಇದು ತಣ್ಣಗಾದ ಮೇಲೆ ಬೇರೊಂದು ಪಾತ್ರೆಗೆ ಸ್ಟೈನೆರ್ ನ ಸಹಾಯದಿಂದ ಸೋಸಿಕೊಳ್ಳಿ

ತಯಾರಿಸಿಟ್ಟುಕೊಂಡ ಸೀಬೆ ಎಲೆಯ ಹೇರ್ ಕೇರ್ ಸಲ್ಯೂಷನ್ ಅನ್ನು ನಿಮ್ಮ ಕೂದಲಿನ ಬುಡದಿಂದ ತುದಿಯವರೆಗೂ ಮತ್ತು ನೆತ್ತಿಯ ಮೇಲೆ ಸಂಪೂರ್ಣವಾಗಿ ಹರಡುವಂತೆ ಹಚ್ಚಿ.
ಸುಮಾರು ಹತ್ತು ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿ.
ಸುಮಾರು ಎರಡು ಗಂಟೆಗಿಂತಲೂ ಅಧಿಕ ಕಾಲ ನಿಮ್ಮ ಕೂದಲು ಈ ಸಲ್ಯೂಷನ್ ನ ಒದ್ದೆಯಲ್ಲಿ ಹಾಗೆ ಇರಬೇಕು. ಬೇಕಿದ್ದರೆ ಒಂದು ಟವಲ್ ಅನ್ನು ನಿಮ್ಮ ತಲೆಗೆ ಸುತ್ತಿಕೊಂಡು ನೀವು ಆರಾಮವಾಗಿ ನಿದ್ರಿಸಬಹುದು.
ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ನಿಮ್ಮ ತಲೆಯನ್ನು ತೊಳೆದುಕೊಳ್ಳಿ.

ಒಟ್ಟಿನಲ್ಲಿ ಸೀಬೆಹಣ್ಣು ತಿನ್ನುವುದರಿಂದ ಆರೋಗ್ಯದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ.

Copyright © All rights reserved Newsnap | Newsever by AF themes.
error: Content is protected !!