ಮಾಜಿ ಪ್ರಧಾನಿ ದೇವೇಗೌಡರು 2028 ರಲ್ಲಿ ನಡೆಯವ ವಿಧಾನ ಸಭಾ ಚುನಾವಣೆ ನಂತರವೂ ಏಳೆಂಟು ವರ್ಷಗಳ ಕಾಲ ಬದುಕಿರುತ್ತಾರೆ. ದೇವೇಗೌಡರನ್ನು ಮತ್ತೆ ಲೋಕಸಭಾ ಚುನಾವಣೆಗೆ ನಿಲ್ಲಿಸುತ್ತೇವೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನು ಮಾಡಬೇಕು ಅಂತ ನನ್ನ ಆಸೆ ಇದೆ. ನಾನು ಬದುಕಿರುವುದರೊಳಗೆ ಮಾಡಿ ತೋರಿಸ್ತೀನಿ. ಐದು ವರ್ಷಕ್ಕೆ ಮಾಡ್ತೀನೋ, ಹತ್ತು ವರ್ಷಕ್ಕೆ ಮಾಡ್ತೀನೋ. ಇಡೀ ರಾಜ್ಯದಲ್ಲಿ ಹಾಸನ ಜಿಲ್ಲೆಯನ್ನು ನಂಬರ್ ಒನ್ ಮಾಡಿ ತೋರಿಸ್ತೀನಿ. ಇಲ್ಲವಾದಲ್ಲಿ ಇನ್ನೊಂದು ಸಾರಿ ರಾಜಕೀಯಕ್ಕೆ ಬರಲ್ಲ ಎಂದು ಚಾಲೆಂಜ್ ಹಾಕಿದರು.
ದೇವೇಗೌಡರಿಗೆ ಇನ್ನೂ ಹೋರಾಟ ಮಾಡುವ ಶಕ್ತಿ ಇದೆ. ಅವರು ನಿಲ್ಲಲ್ಲ ಅಂದ್ರು ನಾವು ಬಿಡಲ್ಲ. ಲೋಕಸಭೆ ಚುನಾವಣೆಗೆ ನಿಲ್ಲಿಸಿ, ಗೆಲ್ಲಿಸಿ ಲೋಕಸಭೆಗೆ ಕಳುಹಿಸುತ್ತೇವೆ. ಹಾಸನ ಜಿಲ್ಲೆಯಿಂದಲೇ ಲೋಕಸಭೆ ಚುನಾವಣೆಗೆ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡುತ್ತಾನೆ ಎಂದು ಹೇಳಿದರು.