ಗ್ಯಾರೆಂಟಿ ಯೋಜನೆಗಳು ಬಡವರಿಗೆ ಮಾತ್ರ: ಸತೀಶ್ ಜಾರಕಿಹೊಳಿ

Team Newsnap
1 Min Read
Guarantee schemes are only for the poor: Satish Jarakiholi ಗ್ಯಾರೆಂಟಿ ಯೋಜನೆಗಳು ಬಡವರಿಗೆ ಮಾತ್ರ: ಸತೀಶ್ ಜಾರಕಿಹೊಳಿ

ಕಾಂಗ್ರೆಸ್ ಪಕ್ಷ ನೀಡಿರುವ ಎಲ್ಲಾ ಗ್ಯಾರಂಟಿ ಯೋಜನೆಗಳಿಗೆ ಮಾನದಂಡ ಹಾಕುತ್ತೇವೆ. ಗ್ಯಾರಂಟಿ ಸ್ಕೀಮ್‌ಗಳ ಮಾನದಂಡ ಬಡವರಿಗೆ ಅನ್ವಯಿಸುವುದಿಲ್ಲ. ಆದರೆ ಶ್ರೀಮಂತರಿಗೆ ಮಾನದಂಡ ಹಾಕುತ್ತೇವೆ. ಬಡವರಿಗೆ ಯಾವುದೇ ಮಾನದಂಡ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.

ಬೆಂಗಳೂರಿನಲ್ಲಿ ಮಾತನಾಡಿದ ಜಾರಕಿಹೊಳಿ ಅವರು,ಗ್ಯಾರೆಂಟಿ ಯೋಜನೆಗಳನ್ನು ಅನುಷ್ಠಾನ ಮಾಡೆ ಮಾಡುತ್ತೇವೆ ಎಂದರು.

ನಾನು ಡಿಸಿಎಂ ಸ್ಥಾನದ ಆಂಕಾಕ್ಷಿಯಲ್ಲ. ಆದರೆ ಬೇರೆ ಸಮುದಾಯದವರಿಗೆ ಡಿಸಿಎಂ ಸ್ಥಾನ ನೀಡಿದರೆ ನಾನು ಸಹ ಬೇಡಿಕೆ ಇಡುತ್ತೇನೆ. ಬೇರೆಯವರು ಕೇಳಿದರೆ ನಾನು ಸಹ ಎಸ್‌ಟಿ ಸಮುದಾಯದಿಂದ ನನಗೆ ಡಿಸಿಎಂ ಸ್ಥಾನ ಕೊಡಿ ಎಂದು ಕೇಳುತ್ತೇನೆ. ಅಂತಿಮವಾಗಿ ಪಕ್ಷದ ನಿರ್ಧಾರಕ್ಕೆ ಬದ್ಧ ಎಂದು ಹೇಳಿದರು.ಕಾಂಗ್ರೆಸ್ ನೀಡಿರುವ ಗ್ಯಾರೆಂಟಿಗಳನ್ನು ನಂಬಿ ಜನ ಅಧಿಕಾರಕ್ಕೆ ತಂದಿದ್ದಾರೆ: ಎಚ್ ಡಿ ಕೆ

ನಾನು ಸಚಿವ ಸ್ಥಾನದ ಆಕಾಂಕ್ಷಿ. ಜನರಿಗೆ ಹತ್ತಿರ ಇರುವ, ಜನರ ಬಳಿ ಹೋಗುವ ಖಾತೆ ಕೇಳುತ್ತೇನೆ. 15 ಖಾತೆಗಳು ಜನರಿಗೆ ನೇರವಾಗಿ ಹತ್ತಿರ ಇದೆ. ಇದರಲ್ಲಿ ಯಾವುದಾದರೂ ಖಾತೆ ಕೊಡಲಿ. ನಮ್ಮ ಬೆಳಗಾವಿ ಜಿಲ್ಲೆಗೆ ಕನಿಷ್ಠ ಮೂರು ಸಚಿವ ಸ್ಥಾನ ಕೊಡಬೇಕು. ನಮ್ಮ ಜಿಲ್ಲೆಯಲ್ಲಿ 11 ಸ್ಥಾನ ಗೆದ್ದಿದ್ದೇವೆ. 3 ಸಚಿವ ಸ್ಥಾನ ಕೊಡಬೇಕು.

Share This Article
Leave a comment