IPL 2022: ರಾಜಸ್ಥಾನ ರಾಯಲ್ಸ್ ವಿರುದ್ದ ಗುಜರಾತ್ ಟೈಟನ್ಸ್ ಗೆ ಭರ್ಜರಿ ಜಯ – ಫೈನಲ್ಸ್ ಗೆ ಗುಜರಾತ್

Team Newsnap
2 Min Read

ಕೋಲ್ಕತ್ತದ ಈಡನ್‌ ಗಾರ್ಡನ್‌ನಲ್ಲಿ ನಡೆಯುತ್ತಿರುವ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಗುಜರಾತ್ ತಂಡವು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು.

WhatsApp Image 2022 05 24 at 11.39.09 PM

ಬಟ್ಲರ್‌ ಅಬ್ಬರ

ಜೋಸ್ ಬಟ್ಲರ್‌ ಉತ್ತಮ ಬ್ಯಾಟಿಂಗ್ ನೆರವಿನಿಂದ ಗುಜರಾತ್‌ ಟೈಟನ್ಸ್‌ ವಿರುದ್ಧ ರಾಜಸ್ಥಾನ್ ರಾಯಲ್ಸ್‌ ತಂಡವು 189 ರನ್ ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿದೆ. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 188 ರನ್ ಗಳಿಸಿದೆ.

  • ಜೋಸ್ ಬಟ್ಲರ್‌ 89 (56)
  • ಸಂಜು ಸ್ಯಾಮ್ಸನ್‌ 47 (26)
  • ದೇವದತ್ತ ಪಡಿಕ್ಕಲ್ 28 ( 20)ರನ್‌ ಗಳಿಸಿ ತಂಡಕ್ಕೆ ಆಸರೆಯಾದರು.

ಇತ್ತ ಗುಜರಾತ್‌ ಪರ ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ, ಆರ್‌.ಸಾಯಿ ಕಿಶೋರ್‌ ಹಾಗೂ ಯಶ್ ದಯಾಳ್‌ ತಲಾ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಮಿಲ್ಲರ್ – ಪಾಂಡ್ಯ ಪಾರ್ಟನರ್ ಷಿಪ್

ಗೆಲ್ಲಲು 189 ರನ್‌ಗಳ ಗುರಿಯನ್ನು ಪಡೆದ ಗುಜರಾತ್‌ ಡೇವಿಡ್‌ ಮಿಲ್ಲರ್‌ ಅವರ ಸ್ಫೋಟಕ ಅರ್ಧಶತಕ ಮತ್ತು ನಾಯಕ ಹಾರ್ದಿಕ್‌ ಪಾಂಡ್ಯ ಸಾಹಸದಿಂದ 19.3 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 191 ರನ್‌ ಹೊಡೆದು ಫೈನಲ್‌ ಪ್ರವೇಶಿಸಿತು. ಟೂರ್ನಿಯ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಗುಜರಾತ್‌ ಈಗ ಮೊದಲ ಐಪಿಎಲ್‌ ಸರಣಿಯಲ್ಲೇ ಫೈನಲ್‌ ಪ್ರವೇಶಿಸಿ ವಿಶಿಷ್ಟ ಸಾಧನೆ ಮಾಡಿದೆ.

ಆರಂಭದಲ್ಲೇ ವಿಕಟ್‌ ಪತನ:

ಮೊದಲ ಓವರಿನ ಎರಡನೇ ಎಸೆತದಲ್ಲಿ ವೃದ್ಧಿಮಾನ್‌ ಸಹಾ ಅವರ ವಿಕೆಟ್‌ ಕಳೆದುಕೊಂಡರೂ ಶುಭಮನ್‌ ಗಿಲ್‌ ಮತ್ತು ಮ್ಯಾಥ್ಯು ವೇಡ್‌ ಎರಡನೇ ವಿಕೆಟ್‌ಗೆ 72 ರನ್‌ ಜೊತೆಯಾಟವಾಡಿ ಚೇತರಿಕೆ ನೀಡಿದರು. ಶುಭಮನ್‌ ಗಿಲ್‌ 35 ರನ್‌(21 ಎಸೆತ, 6 ಬೌಂಡರಿ, 1 ಸಿಕ್ಸರ್‌) ಮ್ಯಾಥ್ಯು ವೇಡ್‌ 35 ರನ್‌(30 ಎಸೆತ, 6 ಬೌಂಡರಿ) ಹೊಡೆದು ಔಟಾದರು.

ನಂತರ ಜೊತೆಯಾದ ಹಾರ್ದಿಕ್‌ ಪಾಂಡ್ಯ ಮತ್ತು ಡೇವಿಡ್‌ ಮಿಲ್ಲರ್‌ ಮುರಿಯದ 4ನೇ ವಿಕೆಟ್‌ಗೆ 61 ಎಸೆತಗಳಿಗೆ 106 ರನ್‌ ಚಚ್ಚಿ ತಂಡಕ್ಕೆ ಗೆಲುವನ್ನು ತಂದುಕೊಟ್ಟರು. ಡೇವಿಡ್‌ ಮಿಲ್ಲರ್‌ 68 ರನ್‌(38 ಎಸೆತ, 3 ಬೌಂಡರಿ, 5 ಸಿಕ್ಸರ್)‌ ಹಾರ್ದಿಕ್‌ ಪಾಂಡ್ಯ 40 ರನ್‌(27 ಎಸೆತ, 5 ಬೌಂಡರಿ) ಹೊಡೆದು ತಂಡವನ್ನು ಗೆಲುವಿನ ದಡ ಸೇರಿಸಿದರು.

ಕೊನೆಯ ಓವರ್‌ನಲ್ಲಿ ಮಿಲ್ಲರ್ ಸತತ 3 ಸಿಕ್ಸರ್‌ಗಳನ್ನು ಸಿಡಿಸಿದರು, ಕ್ವಾಲಿಫೈಯರ್ 1 ರಲ್ಲಿ ಜಿಟಿ ಏಳು ವಿಕೆಟ್‌ಗಳಿಂದ ಆರ್‌ಆರ್ ಅನ್ನು ಸೋಲಿಸಿತು ಅವರ ಮೊದಲ ಬಾರಿಗೆ IPL 2022 ಫೈನಲ್ ತಲುಪಲು ಋತು. ಡೇವಿಡ್ ಮಿಲ್ಲರ್ ಮೂರು ಸಿಕ್ಸರ್‌ಗಳನ್ನು ಸಿಡಿಸಿದರು ಕೊನೆಯ ಓವರ್‌ನಲ್ಲಿ ಜಿಟಿ 189 ರನ್‌ಗಳನ್ನು ಬೆನ್ನಟ್ಟಿದರು ಪಂದ್ಯ ಗೆಲ್ಲಲು 19.3 ಓವರ್‌ಗಳಲ್ಲಿ ಗುರಿ. RR ತಿನ್ನುವೆ ಈಗ ನಡುವೆ ಎಲಿಮಿನೇಟರ್ ವಿಜೇತ ಎದುರಿಸಲು ಶುಕ್ರವಾರ ನಡೆದ ಕ್ವಾಲಿಫೈಯರ್ 2ರಲ್ಲಿ RCB ಮತ್ತು LSG.

Share This Article
Leave a comment