ಜಿಎಸ್ ಟಿ – ಕೇಂದ್ರದಿಂದ ಬಹುಮುಖ್ಯ ಮಾಹಿತಿ

Team Newsnap
1 Min Read
Center bowed to people's opposition – GST exemption on 14 items including rice, curd ಜನರ ವಿರೋಧಕ್ಕೆ ಮಣಿದ ಕೇಂದ್ರ – ಅಕ್ಕಿ, ಮೊಸರು ಸೇರಿದಂತೆ 14 ವಸ್ತುಗಳ ಮೇಲೆ ಜಿಎಸ್‍ಟಿ ವಿನಾಯಿತಿ #Thenewsnap #Latestnews #India #Central_Government #Indian_government #GST #Bengaluru

ನವದೆಹಲಿ : ಜಿಎಸ್ ಟಿ ವ್ಯವಸ್ಥೆಯ ತೆರಿಗೆ ಪಾವತಿ ಬಾಕಿ ಇದ್ದರೆ, ಬಾಕಿ ಉಳಿದಿರುವ ಮೊತ್ತಕ್ಕೆ ಮಾತ್ರ ಬಡ್ಡಿ ವಿಧಿಸುವ ಪದ್ಧತಿಯು ಸೆಪ್ಟೆಂಬರ್ 1 ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಬಾಕಿ ಉಳಿದಿರುವ ಮೊತ್ತಕ್ಕೆ ಮಾತ್ರ ಬಡ್ಡಿ ವಿಧಿಸುವ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿರುವ ತೆರಿಗೆಗಳ ಕೇಂದ್ರ ಮಂಡಳಿಯು, ತೆರಿಗೆ ಬಾಕಿ ಉಳಿದಿರುವ ಮೊತ್ತಕ್ಕೆ ಬಡ್ಡಿ ವಿಧಿಸುವ ವ್ಯವಸ್ಥೆ ಸೆಪ್ಟೆಂಬರ್ 1 ರಿಂದ ಜಾರಿಗೆ ಬರಲಿದೆ ಎಂದು ಹೇಳಿದೆ.

ಈ ಹಿಂದೆ ಈ ವ್ಯವಸ್ಥೆಯನ್ನು 2017 ರ ಜುಲೈ 1 ರಿಂದ ಪೂರ್ವಾನ್ವಯವಾಗುವಂತೆ ಜಾರಿಗೊಳಿಸಬೇಕು ಎಂದು ಸಿಬಿಐಸಿ ತೀರ್ಮಾನಿಸಿತ್ತು. ಆದರೆ ಇದೀಗ ಸೆಪ್ಟೆಂಬರ್ 1 ರಿಂದ ಜಾರಿಗೆ ತರಲು ನಿರ್ಧರಿಸಿದೆ

Share This Article
Leave a comment