ಜಿಎಸ್ ಟಿ ಪುನರ್ ಪರಿಶೀಲನೆಗೆ ಒತ್ತಾಯ : ನಾಳೆ ಭಾರತ್ ಬಂದ್

Team Newsnap
1 Min Read

ಫೆಬ್ರವರಿ 26 (ನಾಳೆ) ರಂದು ಭಾರತ್ ಬಂದ್ ಗೆ ಕರೆ ನೀಡಲಾಗಿದೆ .

ಈ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ವರ್ತಕರು ಹಾಗೂ ಸಾರಿಗೆ ಸಂಸ್ಥೆ ಗಳೂ ಬಂದ್ ಆಚರಿಸಲು ನಿರ್ಧಾರಿಸಿವೆ.

ದೇಶಾದ್ಯಂತ ನಾಳೆ ರಾಷ್ಟ್ರವ್ಯಾಪಿ ಮುಷ್ಕರ ದ ಕರೆಯಿಂದಾಗಿ ಅಂಗಡಿ ಮುಂಗಟ್ಟುಗಳು ಮತ್ತು ವ್ಯಾಪಾರ ಸಂಸ್ಥೆಗಳು ಬಂದ್ ಆಗಲಿವೆ.

ರಾಷ್ಟ್ರವ್ಯಾಪಿ ಬಂದ್ ಏತಕ್ಕೆ ?

1) ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ನಿಯಮವನ್ನು ಪುನರ್ ಪರಿಶೀಲಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ‘ಭಾರತ್ ಬಂದ್’ ಗೆ ಕರೆ ನೀಡಿದೆ.

2) ಅಖಿಲ ಭಾರತ ಟ್ರಾನ್ಸ್ ಪೋರ್ಟರ್ಸ್ ವೆಲ್ ಫೇರ್ ಅಸೋಸಿಯೇಷನ್ (AITWA) ಸಹ ಸಿಎಐಟಿ ನೀಡಿರುವ ಬಂದ್ ಕರೆಗೆ ಬೆಂಬಲ ನೀಡಿದೆ.

3) ಹೊಸ ಇ-ವೇ ಬಿಲ್ ರದ್ದು ಪಡಿಸಬೇಕು ಎಂದು ಸಾರಿಗೆ ದಾರರ ಸಂಘದ ಒತ್ತಾಯ

4) ಇ-ಇನ್ ವಾಯ್ಸ್ ಗೆ ಫಾಸ್ಟ್ ಟ್ಯಾಗ್ ಸಂಪರ್ಕಬಳಸಿ ವಾಹನಗಳನ್ನು ಟ್ರ್ಯಾಕ್ ಮಾಡಲು ನಿಯಮಗಳನ್ನು ತೆಗೆದುಹಾಕಬೇಕು.

5) ದೇಶದ ಎಂಟು ಕೋಟಿ ವರ್ತಕರನ್ನು ಪ್ರತಿನಿಧಿಸುವ ಸುಮಾರು 40 ಸಾವಿರ ವಾಣಿಜ್ಯ ಸಂಘಟನೆಗಳು ಸಿಎಐಟಿ ನೀಡಿರುವ ಭಾರತ್ ಬಂದ್ ಕರೆಗೆ ಬೆಂಬಲ ನೀಡಿವೆ.

6) ದೇಶಾದ್ಯಂತ ಡೀಸೆಲ್ ದರಗಳಲ್ಲಿ ಏಕರೂಪತೆ ಇರಬೇಕು ಎನ್ನುವುದು ಬೇಡಿಕೆ

Share This Article
Leave a comment