ಮೈಸೂರಿನಲ್ಲಿ ನಾಳೆ ಗೃಹಲಕ್ಷ್ಮಿ ಯೋಜನೆ ಚಾಲನೆ: ಅಧಿದೇವತೆಗೆ ಹರಕೆ ತೀರಿಸಿದ ಸಿಎಂ

Team Newsnap
1 Min Read

ಮೈಸೂರು: ಮೈಸೂರಿನಲ್ಲಿ ನಾಳೆ ಗೃಹಲಕ್ಷ್ಮೀ ಯೋಜನೆ ಚಾಲನೆ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭಾರೀ ಸಿದ್ಧತೆ ನಡೆಯುತ್ತಿದೆ.

ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರು ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ, ಹರಕೆ ತೀರಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಡಿ.ಕೆ.ಶಿವಕುಮಾರ್ ಜತೆಗಿನ ತಮ್ಮ ಸಂಬಂಧದ ಬಗ್ಗೆ ವಿರೋಧ ಪಕ್ಷಗಳ ನಾಯಕರು ನೀಡುವ ಹೇಳಿಕೆಗಳು, ಮಾಧ್ಯಮಗಳಲ್ಲಿ ಆಗಾಗ ಬರುವ ಸುದ್ದಿಗಳಿಗೆ ಪ್ರತಿಕ್ರಿಯಿಸಿ, ವಿರೋಧ ಪಕ್ಷಗಳು ನಮ್ಮನ್ನು ದೂರ ಮಾಡಲು ಎಷ್ಟೇ ಪ್ರಯತ್ನ ಮಾಡಿದರೂ ನಾವಿಬ್ಬರು ಇನ್ನಷ್ಟು ಹತ್ತಿರವಾಗುತ್ತಿದ್ದೇವೆ ಎಂದರು.

ಚಾಮುಂಡಿ ದೇವಿಗೆ ಹರಕೆ:

ನಾಳೆ ಸರ್ಕಾರದ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಹಿನ್ನೆಲೆಯಲ್ಲಿ ಅದು ಯಶಸ್ವಿಯಾಗಬೇಕೆಂದು ಆಶಿಸಿ ಸಿಎಂ, ಡಿಸಿಎಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಹಲವರು ಇಂದು ಬೆಳಗ್ಗೆಯೇ ಚಾಮುಂಡಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಚಾಮುಂಡಿ ದೇವಿಯ ಗರ್ಭಗುಡಿ ಮುಂದೆ ಗೃಹಲಕ್ಷ್ಮಿ ಗ್ಯಾರಂಟಿ ಕಾರ್ಡನ್ನಿಟ್ಟು, ಸೀರೆ ಜತೆಗೆ ಕನಕಾಂಬರ, ಮಲ್ಲಿಗೆ ಹಾಗೂ ಗುಲಾಬಿ ಹೂವಿನ ಹಾರವನ್ನು ಸಲ್ಲಿಸಿದರು.ಈ ಬಾರಿ ನಾಡ ದಸರಾ ‘ನಾದಬ್ರಹ್ಮ’ ಹಂಸಲೇಖರಿಂದ ಉದ್ಘಾಟನೆ – ಸಿಎಂ

ಬಾಳೆಹಣ್ಣು ಮತ್ತು ದಾಳಿಂಬೆ ಹಣ್ಣನ್ನೂ ಸಮರ್ಪಿಸಿದರು. ಗ್ಯಾರಂಟಿ ಕಾರ್ಡ್‌ ಜತೆಗೆ ಸಿಎಂ ಮತ್ತು ಡಿಸಿಎಂ ಕಟ್ಟಿಕೊಂಡಿದ್ದ ಹರಕೆಯನ್ನು ತೀರಿಸಿದರು.

Share This Article
Leave a comment