December 23, 2024

Newsnap Kannada

The World at your finger tips!

groom

ವಿಜಯನಗರ: ಮದುವೆ ಆರತಕ್ಷತೆ ವೇಳೆ ವರ ಹೃದಯಾಘಾತದಿಂದ ಸಾವು

Spread the love

ಮದುವೆ ಆರತಕ್ಷತೆ ವೇಳೆಯೇ ವರ ಹೃದಯಾಘಾತದಿಂದ ಮೃತಪಟ್ಟ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಪಾಪಿನಾಯಕನಹಳ್ಳಿ ಗ್ರಾಮದಲ್ಲಿ ಜರುಗಿದೆ.

ಪಾಪಿನಾಯಕನ ಹಳ್ಳಿ ನಿವಾಸಿ ಹೊನ್ನೂರ ಸ್ವಾಮಿ (26) ಮೃತ ದುರ್ದೈವಿ. ಎದೆ ನೋವಿನಿಂದ ಕುಸಿದು ಬಿದ್ದು ಅಸ್ವಸ್ಥಗೊಂಡ ಹೊನ್ನೂರ ಸ್ವಾಮಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತ್ತು. ಆದರೆ ಆತನ ಸ್ಥಿತಿ ಗಂಭೀರವಾಗಿದ್ದ ಪರಿಣಾಮ ವೈದ್ಯರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲು ಸಲಹೆ ನೀಡಿದ್ದರು. ಅಪಾರ್ಟ್ ಮೆಂಟ್ ಗೋಡೆ ಕುಸಿದು : ನಾಲ್ವರು ಕಾರ್ಮಿಕರು ಸ್ಥಳದಲ್ಲೇ ಸಾವು

ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಹೊನ್ನೂರಸ್ವಾಮಿ ಮೃತ ಪಟ್ಟಿದ್ದ ಎಂಬ ಮಾಹಿತಿ ಲಭ್ಯವಾಗಿದ್ದಾರೆ. ಮದುವೆಯಾಗಬೇಕಿದ್ದ ವರನ ನಿಧನದಿಂದ ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

Copyright © All rights reserved Newsnap | Newsever by AF themes.
error: Content is protected !!