January 30, 2026

Newsnap Kannada

The World at your finger tips!

belli gade

ಸಿಎಂ ಗೆ ನೀಡಿದ್ದ ಬೆಳ್ಳಿಗದೆ ಆಂಜನೇಯನಿಗೆ ಸಮರ್ಪಣೆ

Spread the love

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಉಡುಗೊರೆಯಾಗಿ ನೀಡಲಾಗಿದ್ದ ಬೆಳ್ಳಿಗದೆಯನ್ನು ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕದರಮಂಡಲಗಿ ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ಸೋಮವಾರ ಅರ್ಪಿಸಲಾಯಿತು.


ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರೇ ಈ ಗದೆಯನ್ನು ದೇಗುಲಕ್ಕೆ ನೀಡಿದರು. ಇದೇ ವೇಳೆ ಬೊಮ್ಮಾಯಿ ಹೆಸರಲ್ಲಿ ವಿಶೇಷ ಪೂಜೆ ಮಾಡಿಸಲಾಯಿತು. ಈ ಸಂದರ್ಭದಲ್ಲಿ ಬ್ಯಾಡಗಿ ಬಿಜೆಪಿ ಶಾಸಕ ವಿರುಪಾಕ್ಷಪ್ಪ ಮತ್ತಿತರ ಸ್ಥಳೀಯ ಮುಖಂಡರು ಇದ್ದರು.


ಆಗಸ್ಟ್ 28 ರಂದು ಮುಖ್ಯಮಂತ್ರಿ ಹಾವೇರಿ ಜಿಲ್ಲೆ ಹಿರೇಕೆರೂರು ಪಟ್ಟಣಕ್ಕೆ ಆಗಮಿಸಿ ನಾನಾ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಈ ಸಂದರ್ಭದಲ್ಲಿ ಸಚಿವ ಬಿ.ಸಿ.ಪಾಟೀಲ್ ಸಿಎಂಗೆ ಬೆಳ್ಳಿಗದೆಯನ್ನು ಉಡುಗೊರೆಯಾಗಿ ನೀಡಿದ್ದರು. ಆಗ ಈ ಗದೆಯನ್ನು ಆಂಜನೇಯ ದೇವಸ್ಥಾನಕ್ಕೆ ನೀಡುವಂತೆ ಬೊಮ್ಮಾಯಿ ಸೂಚಿಸಿದ್ದರು.

error: Content is protected !!