ಮಹದಾಯಿಗೆ ಅಸ್ತು : ಡಿಪಿಆರ್​ಗೆ ಕೇಂದ್ರದ ಅನುಮತಿ

Team Newsnap
2 Min Read

ಕೇಂದ್ರ ಸರ್ಕಾರ ಮಹದಾಯಿ ಯೋಜನೆ ವಿಸ್ತೃತ ಯೋಜನಾ ವರದಿ -ಡಿಪಿಆರ್ ಅಂಗೀಕಾರಕ್ಕೆ ಅನುಮತಿ ನೀಡಿದೆ.

ಬೆಳಗಾವಿ ಸುವರ್ಣಸೌಧ ಮುಂಭಾಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ಸಂಘಟಿತವಾಗಿ ಹೋರಾಟ ಮಾಡಿದ್ದಕ್ಕೆ ಜಯ ಸಿಕ್ಕಿದೆ. ನಮಗೆ ಇದರಿಂದ ಬಹಳ ಸಂತೋಷವಾಗಿದೆ. ಇಡೀ ಉತ್ತರ ಕರ್ನಾಟಕಕ್ಕೆ ಜಯ ಸಿಕ್ಕಂತೆ ಆಗಿದೆ. ಸಾಕಷ್ಟು ಜನ ಲಾಠಿ ಏಟು ತಿಂದರು. ಎಲ್ಲ ರೈತರ ಹೋರಾಟಕ್ಕೆ ನ್ಯಾಯ ಸಿಕ್ಕಿದೆ ಹೇಳಿದರು.

ಕಳಾಸ ಬಂಡೂರಿ ಯೋಜನೆ ಅಂತಿಮವಾಗಿ ಡಿಪಿಆರ್​ಗೆ ಬಂದಿದೆ. ಮಹದಾಯಿ ಯೋಜನೆ ಬಗ್ಗೆ ನಮ್ಮ ತಂದೆಯ ಜೊತೆ ಇದ್ದ ಬಾದಾಮಿಯ ಶಾಸಕರು ಮಹದಾಯಿಯಿಂದ ಬಾದಾಮಿಯವರಿಗೂ ಅಂದು ನಡೆದಿದ್ದನ್ನು ನೆನೆಸಿಕೊಂಡು ಬಾವುಕರಾದರು. ಈ ವಿಷಯವನ್ನು ಸಿಎಂ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದರು.

dam karnataka

ಕಾಂಗ್ರೆಸ್​ ವಿರುದ್ಧ ಹರಿಹಾಯ್ದ ಸಿಎಂ:

ನಾವು ಸಾಕಷ್ಟು ಹೋರಾಟ ಮಾಡಿದ್ದೀವಿ. ನಾನು ಸಹ ಪಾದಯಾತ್ರೆ ಮಾಡಿದ್ದೆ. 2009 ರಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮಹದಾಯಿ ನೀರು ಡೈವರ್ಟ್ ಮಾಡಲು ಬಿಡೋದಿಲ್ಲ ಅಂತ ಹೇಳಿಕೆ‌ ಕೊಟ್ಟಿದ್ದರು.

ಯಡಿಯೂರಪ್ಪ ಅವರ ಅವಧಿಯಲ್ಲಿ ಕೆಲಸ ಪ್ರಾರಂಭವಾಗಿತ್ತು. ಆದರೆ ಪೂರ್ಣ ವಾಗಿರಲಿಲ್ಲ. ಮುಂದೆ ಬಂದ ಸರ್ಕಾರಗಳು ಕೆಲಸ ಪೂರ್ಣ ಮಾಡಲಿಲ್ಲ. ಆಮೇಲೆ ಗೋವಾ ಕ್ಯಾತೆ ತೆಗೆಯಿತು. ಅದು ಟ್ರಿಬ್ಯುನಲ್​ಗೆ ಹೊಯ್ತು. ಕೇಂದ್ರದ ಬಿಜೆಪಿ ಸರ್ಕಾರ ಬದ್ಧತೆ ತೊರಿಸಿದೆ. ನಮ್ಮ ಯೋಜನೆಗೆ ಅಲ್ಲಿ ಕಾಂಗ್ರೆಸ್ ಗೋಡೆ ಕಟ್ಟಿದರು. ಅದೇ ಕಾಂಗ್ರೆಸ್ ಸಾಧನೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. CBSE 10-12ನೇ ತರಗತಿಯ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಮೋದಿ, ಶಾಗೆ ಅಭಿನಂದನೆ

ಮಹದಾಯಿ ಯೋಜನೆಗೆ ಡಿಪಿಆರ್​ಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಇದರಿಂದ ನಮ್ಮ ದಾರಿ ಸುಗಮವಾಗಿದೆ. ಆ ಕಾಪಿ ಬರ್ತಿದ್ದ ಹಾಗೆ ಟೆಂಡರ್ ಕರೆಯುತ್ತೇವೆ. ಪಂಪ್ ಹೌಸ್ ನಿರ್ಮಾಣ ಮಾಡ್ತೀವಿ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಐದು ಕಿಲೋ ಮೀಟರ್​ ಕ್ಯಾನಲ್​ ಕಾಮಗಾರಿ ಆಗಿದೆ. ಅದನ್ನು ಸಹ ನಮ್ಮ ಸರ್ಕಾರವೇ ಮಾಡಿದೆ. ಆದರೆ, ಮುಂದೆ ಬಂದ ಸರ್ಕಾರಗಳು ಏನನ್ನೂ ಮಾಡಿಲ್ಲ. ಆಮೇಲೆ ಟ್ರಿಬ್ಯುನಲ್​ ಆಯ್ತು. ಆದ್ರೂ ಕೂಡ ಕೆಲವು ವರ್ಷ ಕೆಲಸವಾಗಿಲ್ಲ. ಮತ್ತೆ ಹೋರಾಟ ಮಾಡಿದ ಮೇಲೆ ಟ್ರಿಬ್ಯುನಲ್​ ನಲ್​ ಕೆಲಸ ಪ್ರಾರಂಭವಾಯಿತು. ನಂತರ 2018 ರಲ್ಲಿ ಮೋದಿ ಸರ್ಕಾರವೇ ಟ್ರಿಬ್ಯುನಲ್​ಗೆ ನೋಟಿಫಿಕೇಶನ್​ ಕೊಟ್ಟಿತು ಎಂದರು.

ರೈತರ ವಿರುದ್ದ ಪ್ರಕರಣ ವಾಪಸ್ಸು

ಕಳಾಸ ಬಂಡೂರಿ ಯೋಜನೆಯ ಹೋರಾಟದಲ್ಲಿ ಭಾಗಿಯಾದ ರೈತರ ಮೇಲೆ ಕೇಸ್ ದಾಖಲಾದ ವಿಚಾರವಾಗಿ ಮಾತನಾಡಿದ ಸಿಎಂ, ರೈತರಿಗೆ ಈಗಲೂ ಸಮನ್ಸ್ ಜಾರಿಯಾಗುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ಬಾಕಿ ಇರುವ ಪ್ರಕರಣಗಳನ್ನು ಹಿಂಪಡೆಯಲಾಗುತ್ತದೆ


ಜೋಶಿ ಹರ್ಷ , ಸ್ವಾಗತ:

ಕೇಂದ್ರ ಸರ್ಕಾರದ ರಾಜ್ಯದ ನೀರಾವರಿ ಯೋಜನೆಗೆ ಬದ್ದತೆ ತೋರಿದೆ. ನಡೆ ಸ್ವಾಗತಾರ್ಹ. . ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆಯ ಅನುಷ್ಠಾನಕ್ಕಾಗಿ ಹೋರಾಟ ಮಾಡುತ್ತಿದ್ದ ಹೋರಾಟಗಾರರಿಗೆ ಸಿಹಿಸುದ್ದಿ ಸಿಕ್ಕಿದೆ. ಇದಕ್ಕಾಗಿ ನಾನು ಪ್ರಧಾನಿ ಮೋದಿ ಮತ್ತು ಕೇಂದ್ರ ಜಲಸಂಪನ್ಮೂಲ ಸಚಿವರಿಗೆ ಧನ್ಯವಾದ ಸಲ್ಲಿಸುತ್ತೇನೆ

ಪ್ರಹ್ಲಾದ್​​ ಜೋಶಿ ಕೇಂದ್ರ ಸಚಿವ

dam karnataka

ಉತ್ತರ ಕರ್ನಾಟಕದ ಜನತೆಯ ಪರವಾಗಿ ನಾನು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಇದಕ್ಕೆ ಸಹಕಾರ ಕೊಟ್ಟ ಕೇಂದ್ರ ನೀರಾವರಿ ಸಚಿವರಿಗೂ ಮನಾನು ಅಭಿನಂದನೆ ಸಲ್ಲಿಸುತ್ತೇನೆ.

ಬೊಮ್ಮಾಯಿ ಸಿಎಂ

Share This Article
Leave a comment