ಮೈಸೂರಿನ ಗಾಯತ್ರಿಪುರಂನಲ್ಲಿ ವೆಬ್ ಸೀರಿಸ್ ಶೈಲಿಯಲ್ಲಿ ಅಜ್ಜಿಯನ್ನು ಕೊಂದ ಮೊಮ್ಮಗ

Team Newsnap
1 Min Read

ಮೈಸೂರಿನ ಗಾಯತ್ರಿಪುರಂ ನಿವಾಸಿಯಾಗಿರುವ ಸುಲೋಚನ (75) ಮೃತ ಅಜ್ಜಿ ಮತ್ತು ಸುಪ್ರೀತ್ (23) ಅಜ್ಜಿ ಕೊಂದ ಮೊಮ್ಮಗ.

ಮೊಮ್ಮಗ ಅಜ್ಜಿಯನ್ನು ಕೊಂದು ಕೊರಿಯನ್ ವೆಬ್ ಸೀರಿಸ್ ಶೈಲಿಯಲ್ಲಿ ದೇಹವನ್ನು ವಿಲೇವಾರಿ ಮಾಡಲು ಯತ್ನಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಅಜ್ಜಿ ಹೆಣ ಕಾರಿನಲ್ಲೇ ಇಟ್ಟುಕೊಂಡು ಮಿಸ್ಸಿಂಗ್ ಕಂಪ್ಲೆಂಟ್ ನೀಡಿದ್ದ ಸುಪ್ರೀತ್ ಹೆಣವನ್ನು ಪ್ಯಾಕ್ ಮಾಡಿ ಕಾರಿನಲ್ಲಿಟ್ಟುಕೊಂಡು ದಿನವಿಡೀ ಓಡಾಡಿದ್ದಾನೆ.

WhatsApp Image 2023 06 09 at 10.06.24 AM

ಕೆಆರ್‌ಎಸ್ ಹಿನ್ನೀರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಸಿಕ್ಕ ಪ್ರಕರಣ ಭೇದಿಸಿದ ಮೈಸೂರು ಪೊಲೀಸರಿಗೆ, ಸ್ವಂತ ಅಜ್ಜಿಯನ್ನು ಮೊಮ್ಮಗನೇ ಹತ್ಯೆ ಮಾಡಿರುವ ಆಘಾತಕಾರಿ ಸಂಗತಿ ಮೈಸೂರು ನಗರದಲ್ಲಿ ಬೆಳಕಿಗೆ ಬಂದಿದೆ.

ಮೇ 28 ರಂದು ಮನೆಯಲ್ಲಿ ಹೊಡೆದು ನಂತರ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ಗುರುತು ಸಿಗದಂತೆ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.

ನಜರ್‌ಬಾದ್ ಠಾಣೆಯಲ್ಲಿ ದಾಖಲಾಗಿದ್ದ ಮಿಸ್ಸಿಂಗ್ ಕಂಪ್ಲೆಂಟ್ ಜೊತೆಗೆ ಸಾಮ್ಯತೆ ಕಂಡ ಪೊಲೀಸರು ಆರೋಪಿ ಸುಪ್ರೀತ್‌ನನ್ನು ವಿಚಾರಣೆಗೆ ಒಳಪಡಿಸಿದಾಗ, ಅಜ್ಜಿ ಯಾವಾಗಲೂ ಬೈಯುತ್ತಿದ್ದಳು . ಹತ್ಯೆ ಮಾಡಲು ಇದು ಕಾರಣ ಎಂದು ಹೇಳಿಕೆ ನೀಡಿದ್ದಾನೆ.ನಟಿ ಶ್ರುತಿ ಹರಿಹರನ್ ಮೀಟೂ ಪ್ರಕರಣಕ್ಕೆ ಮತ್ತೆ ಟ್ವಿಸ್ಟ್

ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ರಚಿಸಿದ್ದ ತನಿಖಾ ತಂಡ ಒಂದು ವಾರದಲ್ಲಿ ಪ್ರಕರಣ ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Share This Article
Leave a comment