ಗ್ರಾಮ ಪಂಚಾಯತಿ ಚುನಾವಣೆಯ ಅವತಾರಗಳು ವಿಚಿತ್ರವಾಗಿದೆ. ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಸೋಲಿಸಲು ವೈರಿಗಳು ನಿಂಬೆಹಣ್ಣು, ಕತ್ತರಿಸಿದ ಕುಂಬಳಕಾಯಿ ಅಥವಾ ಬೊಂಬೆಯ ಇಟ್ಟು ಮಾಟ ಮಂತ್ರ ಮಾಡಿಸುವ ಪ್ರಕರಣಗಳು ನಡೆದಿವೆ.
ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣಾ ಕಣ ರಂಗೇರುತ್ತಿದೆ. ಗ್ರಾಮೀಣ ಮಟ್ಟದಲ್ಲಿ ತೀವ್ರ ಜಿದ್ದಾಜಿದ್ದಿನ ಈ ಸ್ಪರ್ಧೆಯಲ್ಲಿ ಗೆಲ್ಲಲು ಹಲವು ಅಭ್ಯರ್ಥಿಗಳು ತಮ್ಮ ಪ್ರತಿ ಸ್ಪರ್ಧಿಗಳು, ವಿರೋಧಿಗಳನ್ನು ಮಣಿಸಲು ಮಾಟ, ಮಂತ್ರದ ಮೊರೆ ಹೋಗುತ್ತಿದ್ದಾರೆ.
ರಾಜ್ಯದ ಆಡಳಿತಾರೂಢ ಬಿಜೆಪಿ ಸೇರಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಗಂಭೀರವಾಗಿ ತೆಗೆದುಕೊಂಡಿವೆ. ಹಲವು ಉನ್ನತ ಮಟ್ಟದ ನಾಯಕರು ಪ್ರಚಾರದಲ್ಲಿ ನಿರತರಾಗಿದ್ದಾರೆ. ಚುನಾವಣೆಯಲ್ಲಿ ಪ್ರತಿಸ್ಪರ್ಧಿಯನ್ನು ಮಣಿಸಲು ಮನೆಯ ಪಕ್ಕದಲ್ಲಿ ಅಥವಾ ಮೂರು ಜಾಗ ಸೇರುವ ದಾರಿಗಳ ಮಧ್ಯೆ ನಿಂಬೆಹಣ್ಣು, ಕತ್ತರಿಸಿಟ್ಟ ಕುಂಬಳಕಾಯಿ, ಮೆಣಸು, ತೆಂಗಿನಕಾಯಿ, ಗುಲಾಬಿ ಬಣ್ಣದ ಕಲರ್ ಪೌಡರ್, ಗೊಂಬೆಗಳನ್ನು ಇಡುತ್ತಿದ್ದಾರೆ.
ಬೈಲಹೊಂಗಲದಲ್ಲಿ ಮಾಟ ಮಂತ್ರ?
ಬೈಲಹೊಂಗಲ ತಾಲೂಕಿನ ಮರಕಟ್ಟಿ ಗ್ರಾಮದಲ್ಲಿ ಇತ್ತೀಚೆಗೆ ಅಭ್ಯರ್ಥಿ ಯೊಬ್ಬರಿಗೆ ಅಚ್ಚರಿ ಕಾದಿತ್ತು.
ಒಂದು ದಿನ ಮುಂಜಾನೆ ಅಭ್ಯರ್ಥಿ ಮನೆ ಮುಂದೆ ಯಾರೋ ಮಾಟ-ಮಂತ್ರ ಮಾಡಿಟ್ಟಿದ್ದರು.
ಮಧ್ಯರಾತ್ರಿ ಅವರ ಮನೆ ಮುಂದೆ ಮಾಟ-ಮಂತ್ರ ಮಾಡಿಟ್ಟ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮಧ್ಯರಾತ್ರಿ ಚಂದ್ರನ ಬೆಳಕಿನಲ್ಲಿ ಮಾಟ ಮಂತ್ರ ಮಾಡಿದರೆ ಪ್ರತಿಸ್ಪರ್ಧಿಯನ್ನು ಮಟ್ಟಹಾಕಬಹುದು ಎಂಬ ನಂಬಿಕೆಯಂತೆ. ಇದು ಕಂಡ ನಂತರ ಈ ಅಭ್ಯರ್ಥಿಗೆ, ಅವರ ಮನೆಯವರಿಗೆ ಮತ್ತು ಗ್ರಾಮಸ್ಥರಿಗೆ ಭಯ, ಆತಂಕ ಶುರುವಾಗಿದೆ.
ತಮ್ಮ ಪ್ರತಿಸ್ಪರ್ಧಿ ಚುನಾವಣೆಯಲ್ಲಿ ಗೆಲ್ಲಲು ಹೀಗೆ ಮಾಟ-ಮಂತ್ರ ಮಾಡಿಸಿದ್ದಾರೆ ಎಂದು ಗೊತ್ತಾಯಿತು. ಈ ಮಾಟ ಮಂತ್ರ ಮಾಡಿಸುವವರು 25 ಸಾವಿರದಿಂದ 30 ಸಾವಿರದವರೆಗೆ ಮತದಾರರಿಗೆ ಹಂಚುತ್ತಿದ್ದಾರೆ. ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.
ಜೋತಿಷಿ, ಮಾಟ ಮಂತ್ರದವರಿಗೆ ಬೇಡಿಕೆ :
ರಾಜ್ಯದ ಅನೇಕ ಗ್ರಾಮಗಳಲ್ಲಿ ಮಾಟ-ಮಂತ್ರ ಮಾಡುವವರು ಕಳೆದ ಕೆಲ ತಿಂಗಳಿನಿಂದ ಬೇಡಿಕೆಯಲ್ಲಿದ್ದಾರೆ. ಅಭ್ಯರ್ಥಿಗಳು ಹತಾಶೆಯಿಂದ ಅವರನ್ನು ಭೇಟಿ ಮಾಡುತ್ತಿದ್ದಾರೆ.
ಇನ್ನು ಹಲವು ಅಭ್ಯರ್ಥಿಗಳು ಜ್ಯೋತಿಷಿಗಳನ್ನು ಭೇಟಿ ಮಾಡಿ ತಮ್ಮ ಭವಿಷ್ಯ ಕೇಳುತ್ತಿದ್ದಾರೆ. ಜ್ಯೋತಿಷಿಗಳು ಹೇಳಿದ ದಿನವೇ ಮುಹೂರ್ತ ನೋಡಿ ನಾಮಪತ್ರ ಸಲ್ಲಿಸುತ್ತಿದ್ದಾರೆ. ಜ್ಯೋತಿಷಿಗಳು ಹೇಳಿದ ದಿನವೇ ಸಮಯ, ದಿನ ನೋಡಿಕೊಂಡು ಪ್ರಚಾರ ಆರಂಭಿಸಿದ್ದಾರೆ.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ