ಗ್ರಾಪಂ ಅಧ್ಯಕ್ಷ – ಉಪಾಧ್ಯಕ್ಷ ಅವಧಿ ಮೊಟಕು : 2 ಹಂತದ ಅಧಿಕಾರ- ತಲಾ 30 ತಿಂಗಳಿಗೆ ನಿಗದಿ

Team Newsnap
1 Min Read

ಗ್ರಾಮ ಪಂಚಾಯಿತಿ ಅಧ್ಯಕ್ಷ – ಉಪಾಧ್ಯಕ್ಷರ ಅವಧಿಯನ್ನು 5 ವರ್ಷದ ಬದಲಿಗೆ 30 ತಿಂಗಳಂತೆ ಎರಡು ಅವಧಿಗೆ ನಿಗದಿ ಮಾಲಾಗಿದೆ. ಹೀಗಾಗಿ ಈ ಬಾರಿ ಅಧ್ಯಕ್ಷ-ಉಪಾಧ್ಯಕ್ಷರ ಅಧಿಕಾರಾವಧಿ 5 ವರ್ಷ ಇರಲ್ಲ ಎಂಬುದು ಸುಸ್ಪಷ್ಟ.

ರಾಜ್ಯ ಚುನಾವಣಾ ಆಯೋಗದ ರಾಜ್ಯಪತ್ರದಲ್ಲಿ ಈ ಕುರಿತಂತೆ ಸ್ಪಷ್ಟವಾಗಿ ಹೇಳಲಾಗಿದೆ. 2015ರಲ್ಲಿ ಗ್ರಾಪಂ‌ ಅಧ್ಯಕ್ಷ- ಉಪಾಧ್ಯಕ್ಷರ ಅಧಿಕಾರಾವಧಿಯನ್ನು 5 ವರ್ಷಕ್ಕೆ ನಿಗದಿ ಪಡಿಸಲಾಗಿತ್ತು.

2020ನೇ ಸಾಲಿನ ಗ್ರಾಪಂ ಚುನಾವಣೆ ಮುಗಿದ ಬಳಿ ಈ ಅವಧಿಯನ್ನು ಮೊಟಕು ಮಾಡಿ, ಎಲ್ಲಾ ವರ್ಗದ ಜನರಿಗೆ ಅಧಿಕಾರ ಸಿಗುವಂತೆ ಮಾಡುವ ಉದ್ದೇಶವನ್ನು ಹೊಂದಲಾಗಿದೆ.

ಈ ಬಾರಿ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರನ್ನು ಎರಡೂವರೆ ವರ್ಷಕ್ಕೆ ಮಾತ್ರವೇ ಆಯ್ಕೆ ಮಾಡಲಾಗುತ್ತದೆ. ಒಟ್ಟು 5 ವರ್ಷದಲ್ಲಿ ಮೊದಲ 30 ತಿಂಗಳ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಆಯಾ ಜಿಲ್ಲಾಧಿಕಾರಿಗಳು ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಮೀಸಲಾತಿ ಮಾರ್ಗಸೂಚಿಯಂತೆ ಮೀಸಲಾತಿ ನಿಗದಿ ಮಾಡುತ್ತಾರೆ.
ಆ ಪ್ರಕಾರವೇ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಆ ನಂತರ ಎರಡೂವರೆ ವರ್ಷಕ್ಕೆ 2ನೇ ಹಂತದಲ್ಲಿ ಮತ್ತೊಂದು ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ.

ಈ ಬದಲಾವಣೆ 5 ವರ್ಷ ಕಾಲ ಒಬ್ಬರೇ ಗ್ರಾಪಂ ಆಡಳಿತದ ಚುಕ್ಕಾಣಿ ಹಿಡಿಯುವ ಕನಸು ಕಂಡಿದ್ದವರಿಗೆ ನಿರಾಶೆ ಮೂಡಿಸಿದೆ.

ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳ ಸಂಖ್ಯೆಯ ಸರಿ ಸುಮಾರು‌ 1/3ರ ಹುದ್ದೆಗಳನ್ನು ಹಿಂದುಳಿದ ವರ್ಗದವರಿಗೆ ಮೀಸಲಿಡುವಂತೆ ಸ್ಷಷ್ಡವಾಗಿ ಆಯೋಗವು ಹೇಳಿದೆ.

Share This Article
Leave a comment