December 31, 2024

Newsnap Kannada

The World at your finger tips!

yediyurappa

ಗ್ರಾಪಂ ಮತ ಎಣಿಕೆಯ ಕುತೂಹಲ: ಸಿಎಂ ಹುಟ್ಟೂರಿನಲ್ಲೂ ಜೆಡಿಎಸ್ ಗೆ ಗೆಲುವು – ಗಂಡ, ಹೆಂಡತಿ ಸೋಲಿಸಿದ- ಸೊಸೆಯನ್ನೇ ಮಣಿಸಿದ ಅತ್ತೆ

Spread the love

ರಾಜ್ಯದ 5,728 ಗ್ರಾಮ ಪಂಚಾಯಿತಿಗಳಿಗೆ ಎರಡು ಹಂತಗಳಲ್ಲಿ ನಡೆದ ಚುನಾವಣೆಯ ಮತಗಳ ಎಣಿಕೆ ಭರದಿಂದ ಸಾಗುತ್ತಿದೆ.

ವಿವಿಧ ರಾಜಕೀಯ ಪಕ್ಷಗಳು, ಸ್ವತಂತ್ರರು ಸೇರಿದಂತೆ 3 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ವಾಗಲಿದೆ.

ಇದುವರೆಗೂ ನಡೆದ ಮತ ಏಣಿಕೆ ಪ್ರಕ್ರಿಯೆಯಲ್ಲಿ ಹಲವಾರು ಸ್ವಾರಸ್ಯಕರ ಅಂಶಗಳ ಬಗ್ಗೆ ವರದಿಗಳು ಬಂದಿವೆ.
ರಾಜ್ಯದ ಅಭ್ಯರ್ಥಿ ಗಳ‌ ಗೆಲುವು ಸೋಲಿನ ಹೈಲೈಟ್ಸ್‌ ಇಲ್ಲಿವೆ.

  • 8074 ಅವಿರೋಧ ಆಯ್ಕೆ

ರಾಜ್ಯದ ಒಟ್ಟು 226 ತಾಲ್ಲೂಕುಗಳ 91,339 ಸ್ಥಾನಗಳಿಗೆ ಚುನಾವಣೆ ನಡೆದಿದೆ. . ಇದರಲ್ಲಿ 8,074 ಸ್ಥಾನಗಳಿಗೆ ಅವಿರೋಧ ಆಯ್ಕೆ ಆಗಿದೆ. ಉಳಿದ ಸ್ಥಾನಗಳಿಗೆ 3,11,887 ಅಭ್ಯರ್ಥಿಗಳು ಕಣದಲ್ಲಿದ್ದರು.

  • ಸಿ‌ಎಂ ತವರು ಕ್ಷೇತ್ರದಲ್ಲಿ ಲಾಟರಿ : ಜೆಡಿಎಸ್ ಗೆಲುವು

ಮುಖ್ಯಮಂತ್ರಿ ಯಡಿಯೂರಪ್ಪ ತವರು ಗ್ರಾಮ ಮಂಡ್ಯ ಜಿಲ್ಲೆಯ ಬೂಕನ ಕೆರೆ ಗ್ರಾಮ ಪಂಚಾಯತಿ ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗೆ ಲಾಟರಿ ಮೂಲಕ ಜಯ ಸಾಧಿಸಿದ್ದಾರೆ.

  • ಲಾಟರಿ ಮೂಲಕ ಗೆದ್ದ ಓಂಕಾರ ಮೂರ್ತಿ
    ತಿಪಟೂರು ತಾಲೂಕಿನ ಕರಡಿ ಪಂಚಾಯಿತಿಯ ರಾಮೇನಹಳ್ಳಿ ೨ ಕ್ಷೇತ್ರದ ಹಿಂದುಳಿದ ವರ್ಗ ಅಭ್ಯರ್ಥಿ ಓಂಕಾರಮೂರ್ತಿ ಹಾಗೂ ಪಾಲಕ್ಷಯ್ಯ ನಡುವೆ ಡ್ರಾ ಅಗಿದೆ. ಇಬ್ಬರೂ 194 ಮತಗಳನ್ನು ತೆಗೆದುಕೊಂಡಿದ್ದರು. ನಂತರ ಲಾಟರಿ ಮೂಲಕ ಆಯ್ಕೆ ಮಾಡಿದಾಗ ಓಂಕಾರಮೂರ್ತಿ ಜಯಗಳಿಸಿದ್ದಾರೆ.
  • ಬಾಗಲಕೋಟೆ ಜಿಲ್ಲೆಯ ಇಳಕಲ್
    ತಾಲೂಕಿನ ಗೊರಬಾಳ ಗ್ರಾ ಪಂ ವ್ಯಾಪ್ತಿಯ ಗೋಪಶಾನಿ ಗ್ರಾಮದ ವಾರ್ಡ್ ನಲ್ಲಿ ಸ್ಪರ್ಧಿಸಿದ್ದ ಮಹಾಂತೇಶ ಲಾಟರಿ ಬಲದಿಂದ ಗೆಲುವು ಸಾಧಿಸಿದರು.
  • ‌ಒಂದು ಮತದ ಗೆಲುವು ಯರ್ಯಾರಿಗೆ

ತುಮಕೂರು ತಾಲೂಕಿನ‌ ಬುಗಡನಹಳ್ಳಿ ಅಭ್ಯಾಸ.ಪಂ. ಹನುಮಂತಪುರ ಕ್ಷೇತ್ರದ ಟಿ.ವಿ.ಶಿವಕುಮಾರ್ 163 ಮತ ಪಡೆದರೆ ಪ್ರತಿಸ್ಪರ್ಧಿ ಕೃಷ್ಣಪ್ಪ 162 ಮತ ಪಡೆದಿದ್ದಾರೆ.‌ ಒಂದು ಮತದ ಅಂತರದಿಂದ ಶಿವಕುಮಾರ್ ಜಯಗಳಿಸಿದರು.

  • ಗಂಗಾವತಿ ತಾಲೂಕಿನ ಕಿನ ಸಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಜಿನಹಳ್ಳಿ ಗ್ರಾಮದ ರಾಣಿ ನಾಗೇಂದ್ರ ಎನ್ನುವವರು ಕೇವಲ ಒಂದು ಮತದಿಂದ ರೋಚಕ ಗೆಲುವು ಕಂಡಿದ್ದಾರೆ.
  • ಚಿತ್ರದುರ್ಗ ತಾಲೂಕಿನ ಯಳಗೋಡು ಗ್ರಾಮ ಪಂಚಯಿತಿಯ ಬಸ್ತಿಹಳ್ಳಿ ಗ್ರಾಮದ ಅಭ್ಯರ್ಥಿ ಶಾಂತಕುಮಾರ್ ಒಂದು ಮತದ ಅಂತರದಿಂದ ಗೆಲುವು ಸಾಧಿಸಿದರು.
  • ಗಂಡನಿಗೆ ಗೆಲುವು, ಹೆಂಡತಿಗೆ ಸೋಲು:

ಕೂಡ್ಲಿಗಿ ಗುಂಡುಮುಣು ಗ್ರಾಮ ಪಂಚಾಯ್ತಿಯ ಕ್ಷೇತ್ರ ಸಂಖ್ಯೆ 1ರಲ್ಲಿ ಗಂಡ ಗೆದ್ದು ಹೆಂಡತಿ ಸೋತಿದ್ದಾರೆ. ಎರಡು ಸ್ಥಾನಗಳಿದ್ದ ಕ್ಷೇತ್ರದಲ್ಲಿ ಒಂದು ಸಾಮಾನ್ಯಕ್ಕೆ ಹಾಗೂ ಒಂದು ಸ್ಥಾನ ಎಸ್ಟಿಗೆ ಮೀಸಲಾಗಿತ್ತು. ಇದರಲ್ಲಿ ಶ್ರೀಕಾಂತ 314 ಪಡೆದು ಗೆಲವು ಕಂಡಿದ್ದು, ಅವರ ಪತ್ನಿ ಲಕ್ಷ್ಮೀದೇವಿ 283 ಸೋತಿದ್ದಾರೆ. ಇನ್ನೊಬ್ಬ ಅಭ್ಯರ್ಥಿ ಚಂದ್ರಗೌಡ 314 ಮತ ಪಡೆದು ಗೆಲವು ಪಡೆದಿದ್ದಾರೆ. ಅಜ್ಜಯ್ಯ 279 ಚಂದ್ರಗೌಡ ವಿರುದ್ದ ಸೋತಿದ್ದಾರೆ.

ಸೊಸೆಯನ್ನೇ ಸೋಲಿಸಿದ ಅತ್ತೆ;


ಹಾಸನ ತಾಲೂಕಿನ ಹೆರಗು ಗ್ರಾಪಂನ ಎಚ್. ಭೈರಾಪುರ ಗ್ರಾಮದಿಂದ ಸ್ಪರ್ಧಿಸಿದ್ದ ಅತ್ತೆ ಸೊಂಬಮ್ಮ ಮೂರು ಮತಗಳ ಅಂತರದಿಂದ ಸೊಸೆ ಪವಿತ್ರಳನ್ನು ಸೋಲಿಸಿದ್ದಾರೆ.

ತಿರಸ್ಕೃತ ಮತ ಪರಿಶೀಲನೆಯಲ್ಲಿ ಗೆದ್ದ ಅಭ್ಯರ್ಥಿ!


ಶಿರಸಿ ತಾಲೂಕಿನ ವಾನಳ್ಳಿ ಗ್ರಾ ಪಂ ನಬ ಗೋಣಸರ ವಾರ್ಡಿನಲ್ಲಿ ವೀಣಾ ಗೌಡ ತಿರಸ್ಕೃತ ಮತ ಎಣಿಕೆಯಲ್ಲಿ ಗೆಲುವು ಸಾಧಿಸಿದರು.

ಹಿಂದುಳಿದ ಅ ವರ್ಗ ಮಹಿಳೆ ಮೀಸಲು ಸ್ಥಾನಕ್ಕೆ ನಡೆದಿದ್ದ ಸ್ಪರ್ಧೆಯಲ್ಲಿ ಪಾರ್ವತಿ ಗೌಡ ಹಾಗೂ ವೀಣಾ ಗೌಡ 127 ಮತ ಪಡೆದಿದ್ದರು. ಈ ವೇಳೆ ತಿರಸ್ಕೃತಗೊಂಡಿದ್ದ ಮತಗಳನ್ನು ಮರುಪರಿಶೀಲಿಸಲಾಯಿತು.
ವೀಣಾಗೌಡ ಪಡೆದಿದ್ದ ಆಟೊ ಚಿಹ್ನೆಗೆ ಮತದ ಮುದ್ರೆಯ ಅಲ್ಪ ಭಾಗ ತಾಗಿಕೊಂಡಿದ್ದರಿಂದ ಅದನ್ನು ಗೆಲುವಿಗೆ ಪರಿಗಣಿಸಲಾಯಿತು.

Copyright © All rights reserved Newsnap | Newsever by AF themes.
error: Content is protected !!