ಮೈಸೂರು ದಸರಾ ಸರಳ ಆಚರಣೆಗೆ ಸರ್ಕಾರದ ನಿರ್ಧಾರ – ಡಾ ಮಹಾದೇವಪ್ಪ ಪ್ರಕಟ

Team Newsnap
1 Min Read

ಮೈಸೂರು: ರಾಜ್ಯದಲ್ಲಿ ಮಳೆಯ ಅಭಾವ, ಬರದ ಛಾಯೆಯಿಂದ ಕಂಗೆಟ್ಟಿರುವ ಕಾರಣಕ್ಕಾಗಿ ‘ಮೈಸೂರು ದಸರಾ’ ವನ್ನು ಸರಳವಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ

ರೈತರ ಸಂಕಷ್ಟದ ಸ್ಥಿತಿಯಲ್ಲಿರುವಾಗ ಸರ್ಕಾರವು ಈ ಬಾರಿವೈಭವದ ದಸರಾವನ್ನು ಆಚರಿಸುವುದು ಸರಿ ಅಲ್ಲ. ಹೀಗಾಗಿ ಸರಳ ದಸರಾ ಆಚರಿಸಲು ನಿರ್ಧರಿಸಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ , ದಸರಾ ಕಾರ್ಯಕಾರಿ ಸಮಿತಿ ಅಧ್ಯಕ್ಷ ಡಾ.ಎಚ್‌.ಸಿ.ಮಹದೇವಪ್ಪ ಸಾಮಾಜಿಕ ಜಾಲ ತಾಣ X ನಲ್ಲಿ ತಿಳಿಸಿದ್ದಾರೆ,

ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ರೈತಾಪಿ ವರ್ಗವು ಸಂಕಷ್ಟದಲ್ಲಿದೆ. ಈ ಬಾರಿ ಸರಳ ಮತ್ತು ಅರ್ಥಪೂರ್ಣ ದಸರಾವನ್ನು ಆಚರಿಸಲು ನಮ್ಮ ಸರ್ಕಾರ ನಿರ್ಧರಿಸಿದೆ ಎಂದಿದ್ದಾರೆ.

ಮಳೆಯ ಕೊರತೆ ನಡುವೆಯೂ ತಮಿಳುನಾಡಿನ ಬೇಡಿಕೆಗೆ ಅನುಗುಣವಾಗಿ ಸುಪ್ರೀಂಕೋರ್ಟ್‌ ಕೂಡ ನೀರು ಹರಿಸುವಂತೆ ಸೂಚಿಸಿದೆ. ರೈತರು ಬೀದಿಗೆ ಇಳಿದು ಹೋರಾಟ ಮಾಡುತ್ತಿದ್ದಾರೆ ಮುಂದಿನ ತಿಂಗಳು ಮೂರನೇ ವಾರದಲ್ಲಿ ದಸರಾ ಆರಂಭವಾಗಲಿದೆ . ಸೆ. 23 ರಂದು ಮಂಡ್ಯ ಬಂದ್ : ನೀರಿನ ಸಂರಕ್ಷಣೆ ಹೇಗೆ ? ರಾಜ್ಯದ ಮುಂದಿನ ಆಯ್ಕೆಗಳೇನು?

ಆಗ ತೊಂದರೆಯಾಗದಿರಲಿ ಎನ್ನುವ ಕಾರಣದಿಂದ ಸರ್ಕಾರ ಮೈಸೂರು ದಸರಾವನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಗಿದೆ.

Share This Article
Leave a comment