ನಯನತಾರ ದಂಪತಿಗೆ ​ಶಾಕ್ -ಬಾಡಿಗೆ ತಾಯ್ತನ ಬಗ್ಗೆ ವಿವರಣೆ ಕೇಳಿದ ಸರ್ಕಾರ

Team Newsnap
1 Min Read

ಬಾಡಿಗೆ ತಾಯ್ತನ ಮೂಲಕ ಅವಳಿ ಮಕ್ಕಳಿಗೆ ತಂದೆ-ತಾಯಿಯಾದ ನಟಿ ನಯನತಾರ, ನಿರ್ದೇಶಕ ವಿಘ್ನೇಶ್ ಶಿವನ್ ಅವರಿಗೆ ಸಂಕಷ್ಟ ಎದುರಾಗಿದೆ.

ಈ ಕುರಿತಂತೆ ತಮಿಳುನಾಡು ಸರ್ಕಾರ ವಿವರಣೆ ಕೇಳಿ ನೋಟಿಸ್ ಜಾರಿ ಮಾಡಿದೆ. ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ನಯನತಾರ, ವಿಘ್ನೇಶ್ ಶಿವನ್ ಮದುವೆಯಾಗಿದ್ದರು. ಆದ್ದರಿಂದ ಅವರು ಬಾಡಿಗೆ ತಾಯ್ತನ ಮೂಲಕ ಮಕ್ಕಳನ್ನು ಪಡೆಯಲು ಅರ್ಹರೆ..? ಅವರಿಗೆ ಕಾಲಮಿತಿ ಇಲ್ಲವೇ ಎಂದು ಸುದ್ದಿಗೋಷ್ಠಿಯಲ್ಲಿ ತಮಿಳುನಾಡು ಆರೋಗ್ಯ ಇಲಾಖೆ ಸಚಿವ ಸುಬ್ರಮಣ್ಯನ್ ಅವರಿಗೆ ಪ್ರಶ್ನಿಸಿದ್ದರು.

ಈ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಬಗ್ಗೆ ವಿಚಾರಣೆ ನಡೆಸಲು ಡೈರೆಕ್ಟರ್ ಆಫ್ ಮೆಡಿಕಲ್ ಸರ್ವೀಸ್​ಗೆ ಆದೇಶ ಜಾರಿ ಮಾಡಿದ್ದೇವೆ ಬಾಡಿಗೆ ತಾಯ್ತನ ಮೂಲಕ ದಂಪತಿ ಮಕ್ಕಳು ಪಡೆದಿರುವ ಬಗ್ಗೆ ಅಧಿಕಾರಿಗಳು ವಿವರಣೆ ಪಡೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ತಮಗೆ ಅವಳಿ ಮಕ್ಕಳಿಗೆ ತಂದೆ-ತಾಯಿ ಆಗ್ತಿದ್ದೀವಿ ಎಂದು ಅಕ್ಟೋಬರ್ 09 ರಂದು ಪೋಸ್ಟ್ ಮಾಡಿದ್ದರು. ನಿಮ್ಮ ಪ್ರಾರ್ಥನೆ, ಪೂರ್ವಜರ ಆರ್ಶೀವಾದದಿಂದ ಅವಳಿ ಮಕ್ಕಳು ಜನಿಸಿದ್ದಾರೆ ಎಂದು ಹೇಳಿದ್ದರು. ಅವರಿಗೆ ಉಯ್ರ್ (ಜೀವನ), ಉಳಗಂ (ಪ್ರಪಂಚ) ಅಂತ ಹೆಸರಿಟ್ಟಿದ್ದಾಗಿ ತಿಳಿಸಿದ್ದರು. ಅಲ್ಲದೇ ಕಂದಮ್ಮಗಳ ಪಾದಗಳಿಗೆ ಮುತ್ತಿಡುತ್ತಿರೋ ಫೋಟೋಗಳನ್ನು ಶೇರ್ ಮಾಡಿದ್ದರು. ಆದರೆ ತಮ್ಮ ಪೋಸ್ಟ್​ನಲ್ಲಿ ಎಲ್ಲಿಯೂ ನಯನತಾರ, ಬಾಡಿಗೆ ತಾಯ್ತನದ ಬಗ್ಗೆ ಉಲ್ಲೇಖ ಮಾಡಿಲ್ಲ.

Share This Article
Leave a comment