December 26, 2024

Newsnap Kannada

The World at your finger tips!

VOICE MIKE

ಧ್ವನಿವರ್ಧಕ ಬಳಕೆಗೆ ಸರ್ಕಾರದಿಂದ ನಿಯಮ ಜಾರಿ – ಮಾರ್ಗಸೂಚಿ ಬಿಡುಗಡೆ

Spread the love

ರಾಜ್ಯದಲ್ಲಿ ವಿವಾದಕ್ಕೆ ಕಾರಣವಾಗಿರುವ ಧ್ವನಿವರ್ಧಕ ಬಳಕೆಗೆ ಹೊಸ ನಿಯಮ ಜಾರಿ ತರಲಾಗಿದೆ ಆಲ್ಲದೆ DGP ಸೂದ್ ಅವರು ಮಾರ್ಗಸೂಚಿ ರಚನೆ ಮಾಡಿ ಆದೇಶ ಹೊರಡಿಸಿದ್ದಾರೆ.

ಅದೇಶ ಪ್ರಮುಖ ಅಂಶಗಳು :

1) ರಾಜ್ಯದಲ್ಲಿ ಧ್ವನಿವರ್ಧಕ ಬಳಕೆಯಲ್ಲಿ ಪಾಲಿಸಬೇಕಾದ ನಿಯಮ ಉಲ್ಲಂಘನೆಯಾದರೆ, ಡಿವೈಎಸ್‌ಪಿ ದರ್ಜೆಯಿಂದ ಮೇಲ್ಪಟ್ಟು ರಾಜ್ಯ ಪೊಲೀಸ್ ಮಹಾನಿರ್ದೇಶಕರ ದರ್ಜೆವರೆಗೂ ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳಿಗೂ ಕ್ರಮ ಕೈಗೊಳ್ಳುವ ಅಧಿಕಾರ ನೀಡಲಾಗಿದೆ

2) ರಾಜ್ಯ ಸರ್ಕಾರ ಆದೇಶದಂತೆ ಈಗಾಗಲೇ ಧ್ವನಿವರ್ಧಕಗಳ ಬಳಕೆಗೆ 15 ದಿನಗಳ ಒಳಗಾಗಿ ಕಡ್ಡಾಯವಾಗಿ ಅನುಮತಿ ಪಡೆಯುವಂತೆ ಸೂಚಿಸಿದೆ.

3)ಎಲ್ಲಾ ಧಾರ್ಮಿಕ ಕೇಂದ್ರಗಳು ಹಾಗೂ ಸಾರ್ವಜನಿಕ ಸಭೆ ಸಮಾರಂಭಗಳಲ್ಲೂ ಧ್ವನಿವರ್ಧಕ ಬಳಸುವುದಕ್ಕೂ ಅನುಮತಿ ಕಡ್ಡಾಯಗೊಳಿಸಿದೆ.

4) ರಾತ್ರಿ 10 ರಿಂದ ಬೆಳಗ್ಗೆ 6ರ ವರೆಗೆ ಹಾಗೂ ಬೆಳಗ್ಗೆ 6 ರಿಂದ ರಾತ್ರಿ 10ರ ವರೆಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿರುವ ಮಿತಿಯಲ್ಲೇ ಮೈಕ್‌ಗಳ ಶಬ್ಧ ಪ್ರಮಾಣ ಇರಬೇಕು.

5) ವಸತಿ ಪ್ರದೇಶಗಳಲ್ಲಿ ರಾತ್ರಿ 10ರ ಬಳಿಕ ವಾಹನಗಳ ಹಾರ್ನ್ ಗಳಿಗೂ ನಿರ್ಬಂಧವಿರಬೇಕು

6) ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಗಳ ಬಳಕೆಗೆ ಲಿಖಿತ ಅನುಮತಿ ಪಡೆದಿರಬೇಕು ಈ ಮಾರ್ಗಸೂಚಿ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಸೂಚಿಸಿದೆ.

ಇದನ್ನು ಓದಿ :ಮಕ್ಕಳ ಬೆಳವಣಿಗೆಯಲ್ಲಿ ಪ್ರಾರ್ಥನೆಯ ಮಹತ್ವ ಎಷ್ಟು ?

VOICE RECORD

ಅನುಮತಿ ನೀಡಲು 2 ಹಂತದ ಸಮಿತಿ:

1) ಧ್ವನಿವರ್ಧಕಗಳಿಗೆ ಅನುಮತಿ ಕೊಡಲು 2 ಹಂತದಲ್ಲಿ ಸರ್ಕಾರ ಸಮಿತಿ ರಚನೆ ಮಾಡಲಿದೆ.

2) ಕಮಿಷನರೇಟ್ ಜಿಲ್ಲೆಗಳಲ್ಲಿ ಮೊದಲ ಸಮಿತಿ ರಚಿಸಬೇಕು. ಈ ಸಮಿತಿಯಲ್ಲಿ ಎಸಿಪಿ, ಸ್ಥಳೀಯ ಸಂಸ್ಥೆಯ ಕಾರ್ಯಕಾರಿ ಇಂಜಿನಿಯರ್ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಒಬ್ಬರು ಸದಸ್ಯರಿರುತ್ತಾರೆ.

3) ಜಿಲ್ಲೆಗಳಲ್ಲಿ 2ನೇ ಸಮಿತಿ ರಚಿಸಬೇಕು. ಇದರಲ್ಲಿ ಡಿವೈಎಸ್ಪಿ, ತಹಸಿಲ್ದಾರ್ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಒಬ್ಬರು ಸದಸ್ಯರಿರುತ್ತಾರೆ. ಎಲ್ಲಾ ಪರಿಶೀಲಿಸಿ ಈ ಸಮಿತಿಗಳು ಧ್ವನಿವರ್ಧಕಗಳಿಗೆ ಅನುಮತಿ ಕೊಡಲಿವೆ.

4) ಸಾರ್ವಜನಿಕ ಸ್ಥಳಗಳಲ್ಲಿ 10 ರಿಂದ 75 ಡೆಸಿಬಲ್, ಖಾಸಗಿ ಸ್ಥಳಗಳಲ್ಲಿ ಸ್ವಂತ ಸೌಂಡ್ ಸಿಸ್ಟಂಗಳ ಬಳಕೆಗೆ 5 ಡಿಸಿಬಲ್ ಶಬ್ಧ ಮಿತಿ ಇರಬೇಕು.

5) ರಾತ್ರಿ 10ರ ಬಳಿಕ ಡ್ರಂ, ಟ್ರಂಪೆಟ್, ಟಂ-ಟಂ, ಇತರೆ ಶಬ್ಧ ಉಂಟು ಮಾಡುವ ಸಾಧನಗಳ ಬಳಕೆಯನ್ನೂ ನಿಷೇಧಿಸಲಾಗಿದೆ.

Copyright © All rights reserved Newsnap | Newsever by AF themes.
error: Content is protected !!