ಗುತ್ತಿಗೆದಾರರ ಬಿಲ್ ಪಾವತಿಗೆ ಸರ್ಕಾರ ಕ್ರಮ

Team Newsnap
1 Min Read

ಬೆಂಗಳೂರು: 80:20ರ ಅನುಪಾತದಲ್ಲಿ ‘ಬಾಕಿ ಬಿಲ್’ ಪಾವತಿಗೆ ರಾಜ್ಯ ಸರ್ಕಾರ ನಿರ್ಧಾರ.

ಗುತ್ತಿಗೆ ಕಾಮಗಾರಿ ಬಾಕಿ ಬಿಲ್ ತಡೆ ಹಿಡಿದಿದ್ದ ರಾಜ್ಯ ಸರ್ಕಾರ 80:20ರ ಅನುಪಾತದಲ್ಲಿ ಬಾಕಿ ಬಿಲ್ ಪಾವತಿಯ ಸೂತ್ರವನ್ನು ಅನುಸರಿಸಲು ಮುಂದಾಗಿದೆ.

ಬಾಕಿ ಪಾವತಿಗೆ ತಡೆ ಹಾಕಿದ್ದ ಹೊಸ ಸರ್ಕಾರದ ವಿರುದ್ಧ ಸಿಟ್ಟುಗೊಂಡಿದ್ದ ಗುತ್ತಿಗೆದರರನ್ನು ಸಮಾಧನಾ ಪಡಿಸುವ ಕಾರ್ಯವನ್ನು ಕಾಂಗ್ರೆಸ್ ಸರ್ಕಾರ ಆರಂಭಿಸಿದೆ.

ಗುತ್ತಿಗೆದಾರರ ಹಣ ಬಿಡುಗಡೆ ಮಾಡಲು ಎರಡು ಪರಿಹಾರ ಸೂತ್ರವನ್ನು ಕಂಡುಕೊಂಡಿದೆ ಎಂಬುದಾಗಿ ಮೂಲಗಳು ತಿಳಿಸಿವೆ.

ಎಒಸಿ ಬಿಡುಗಡೆಯಾದ ಪ್ರಕರಣಗಳಲ್ಲಿ ಶೇ.75ರಷ್ಟು ಹಣ ಬಿಡುಗಡೆ ಮಾಡುವುದು. ಉಳಿದ ಶೇ.25ರಷಅಟು ನಂತ್ರ ಬಿಡುಗಡೆ ಮಾಡುವುದು. ಲಭ್ಯ ಅನುದಾನದಲ್ಲಿ ಶೇ.80 ಜೇಷ್ಠತೆ ಆಧಾರದಲ್ಲಿ ಶೇ.20ರಷ್ಟು ಸಚಿವರ ವಿವೇಚನಾ ಕೋಟಾದಡಿ ಬಿಡುಗಡೆ ಮಾಡಲು ಪಾವತಿ ಸೂತ್ರಕ್ಕೆ ಬಂದಿದೆ ಎನ್ನಲಾಗುತ್ತಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಗುತ್ತಿಗೆದಾರರ ವಿರುದ್ಧ ತನಿಖೆ ನಡೆಯುತ್ತಿದ್ದು, ಕಾಮಗಾರಿ ಕುರಿತು ಭಾಗಶಹ ಮಾಹಿತಿ ಕಲೆ ಹಾಕಲಾಗಿದೆ. ನೂರಾರು ಪ್ರಕರಣಗಳಲ್ಲಿ ಕಾಮಗಾರಿ ನಡೆಯದೇ ಹಣ ಬಿಡುಗಡೆ ಮಾಡಲಾಗಿದೆ ಎಂಬ ಆರೋಪ ಮಾಡಲಾಗಿತ್ತು. ವಕ್ಫ್ ಕಾಯ್ದೆ ರದ್ದು ಮಾಡುವಂತೆ ಶಾಸಕ ಯತ್ನಾಳ್ , ಪ್ರಧಾನಿ ಮೋದಿಗೆ ಪತ್ರ

ಅಂತಹ ದೂರುಗಳಿರುವ ಕಡೆ, ಆಡಳಿತ ಪಕ್ಷದ ಶಾಸಕರಿರುವ ಕಡೆ ಗುತ್ತಿಗೆದಾರರ ಬಾಕಿ ಪಾವತಿ ಮಾಡಲು ಆದ್ಯತೆ ಕೊಡಲಾಗುತ್ತಿದೆ ಎಂಬುದಾಗಿ ತಿಳಿದು ಬಂದಿದೆ.

Share This Article
Leave a comment