December 29, 2024

Newsnap Kannada

The World at your finger tips!

punith marriage

ಡಿ 1 ರಂದು 22ನೇ ವಿವಾಹ ವಾರ್ಷಿಕೋತ್ಸವಕ್ಕೆ ಮುನ್ನವೇ ಅಪ್ಪು ವಿದಾಯ; ಪತ್ನಿ ಅಶ್ವಿನಿ ರೋಧನ

Spread the love

ಡಿ. 1 ರಂದು ಪುನೀತ್ – ಅಶ್ವಿನಿ ಅವರ 22ನೇ ವರ್ಷದ ವಿವಾಹ ವಾರ್ಷಿಕೋತ್ಸವಕ್ಕೆ ಮುನ್ನವೇ ಅಪ್ಪು ವಿದಾಯ ಹೇಳಿದ್ದಾರೆ ಎಂದು ಪತ್ನಿ ಅಶ್ವಿನಿ ರೋಧಿಸುತ್ತಿದ್ದಾರೆ.

ಡಿಸೆಂಬರ್​​ 1ನೇ ತಾರೀಕಿಗೆ ಪುನೀತ್​​ ವಿವಾಹವಾಗಿ 22 ವರ್ಷಗಳು ಆಗಲಿದೆ. 1999 ಡಿಸೆಂಬರ್​​ 1ಕ್ಕೆ ಅಶ್ವಿನಿಯವರನ್ನು ಪುನೀತ್​​​ಪ್ರೀತಿಸಿ ಮದುವೆಯಾಗಿದ್ದರು.

ಇನ್ನೇನು ಕೇವಲ 30 ದಿನಗಳು ಆಗಿದ್ದರೆ, 22ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮಾಚರಣೆ ಮಾಡಬೇಕಿತ್ತು. ಈಗ ಅಪ್ಪು ನಮ್ಮೊಂದಿಗಿಲ್ಲ. ಇನ್ನು ಪುನೀತ್​​ ರಾಜಕುಮಾರ್​​ ಕೇವಲ ನೆನಪು ಮಾತ್ರ ಎಂದು ಇಡೀ ಕುಟುಂಬ ಕಣ್ಣೀರು ಹಾಕಿದೆ.

ಪುನೀತ್​​​ ರಾಜಕುಮಾರ್​​​ ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ನಂತರ ​​ ಇಡೀ ದೊಡ್ಡ ಮನೆ ಕುಟುಂಬದಲ್ಲಿ ನೀರವ ಮೌನ ಆವರಿಸಿತ್ತು. ರಾಜ್ಯಾದ್ಯಂತ ಪುನೀತ್​​ ಸಾವಿಗೆ ಅಭಿಮಾನಿಗಳ ಸಾಕಷ್ಟು ನೋವು ಅನುಭವಿಸುತ್ತಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!